International Day of Light 2025: ಅಂತಾರಾಷ್ಟ್ರೀಯ ಬೆಳಕಿನ ದಿನ; ನಮ್ಮ ಜೀವನದಲ್ಲಿ ಬೆಳಕಿನ ಪ್ರಾಮುಖ್ಯತೆ ಏನು?
ನಮ್ಮ ಜೀವನದ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಬೆಳಕು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ನಮ್ಮ ಜಗತ್ತನ್ನು ರೂಪಿಸುವಲ್ಲಿ, ಭವಿಷ್ಯದ ಆವಿಷ್ಕಾರಗಳಿಗೆ ಸ್ಫೂರ್ತಿ ನೀಡುವಲ್ಲಿ ಬೆಳಕಿನ ಮಹತ್ವದ ಬಗ್ಗೆ ತಿಳಿಸಲು ಹಾಗೂ ವಿಜ್ಞಾನ, ಸಂಸ್ಕೃತಿ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ನಮ್ಮ ಜೀವನದಲ್ಲಿ ಬೆಳಕು ವಹಿಸುವ ಅಗತ್ಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 16 ರಂದು ಅಂತಾರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆ ಮತ್ತು ಪ್ರಾಮುಖ್ಯತೆಯನ್ನು ತಿಳಿಯೋಣ ಬನ್ನಿ.

ಬೆಳಕು (Light) ಮಾನವನ ಜೀವನದ ಅತ್ಯಗತ್ಯ ಅಂಶವಾಗಿದೆ. ಬೆಳಕಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹೀಗೆ ನಮ್ಮ ಜೀನವದಲ್ಲಿ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಬೆಳಕು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಮಾನವನ ಜೀವನದಲ್ಲಿ ಬೆಳಕು ವಹಿಸುವಂತಹ ಮಹತ್ವದ ಪಾತ್ರ ಮತ್ತು ವಿಜ್ಞಾನ, ಸಂಸ್ಕೃತಿ, ಕಲೆ, ಶಿಕ್ಷಣ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಬೆಳಕು ವಹಿಸುವ ಮಹತ್ವದ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ 16 ರಂದು ಅಂತಾರಾಷ್ಟ್ರೀಯ ಬೆಳಕಿನ (International Day of Light) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ಬೆಳಕಿನ ದಿನದ ಇತಿಹಾಸ:
ಮೇ 16, 1960 ರಂದು ಎಂಜಿನಿಯರ್ ಮತ್ತು ಭೌತಶಾಸ್ತ್ರಜ್ಞ ಥಿಯೋಡರ್ ಮೈಮನ್ ಲೇಸರ್‌ನ ಮೊದಲ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದರು. ಈ ಮಹತ್ತರ ದಿನದ ನೆನಪಿಗಾಗಿ, ಔಷಧ, ಸಂವಹನ, ಕಲೆ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಬೆಳಕು ಮತ್ತು ಬೆಳಕು ಆಧಾರಿತ ತಂತ್ರಜ್ಞಾನಗಳು ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಉತ್ತೇಜಿಸಲು 2017 ರಲ್ಲಿ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಬೆಳಕಿನ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಮೇ 16 ರಂದು ಅಂತಾರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಕುಟುಂಬದೊಂದಿಗೆ ಕೂಡಿ ಬಾಳಿದರೆ ಸ್ವರ್ಗ ಸುಖ; ವಿಶ್ವ ಕುಟುಂಬ ದಿನದ ಪ್ರಾಮುಖ್ಯತೆ ತಿಳಿಯಿರಿ
ಅಂತಾರಾಷ್ಟ್ರೀಯ ಬೆಳಕಿನ ದಿನದ ಮಹತ್ವ:
ವಿಜ್ಞಾನ, ಸಂಸ್ಕೃತಿ, ಕಲೆ, ಶಿಕ್ಷಣ, ಔಷಧ, ಸಂವಹನ ಮತ್ತು ಶಕ್ತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಬೆಳಕು ವಹಿಸುವಂತಹ ಮಹತ್ತರ ಪಾತ್ರದ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅನೇಕ ದೇಶಗಳಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಜನರು ವಿಜ್ಞಾನ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿಯಲ್ಲಿ ಬೆಳಕು ವಹಿಸುವ ಪಾತ್ರದ ಬಗ್ಗೆ ಅರಿತುಕೊಳ್ಳುತ್ತಾರೆ.
ನಮ್ಮ ಜಗತ್ತನ್ನು ಬೆಳಗಿಸುವ ಹಂತದಿಂದ ಹಿಡಿದು ವಿಜ್ಞಾನ, ಔಷಧ, ಸಂವಹನ ಮತ್ತು ಕಲೆಯಲ್ಲಿನ ಅನ್ವಯಗಳವರೆಗೆ ಬೆಳಕು ಬಹು ಮುಖ್ಯ ಪಾತ್ರ ವಹಿಸುತ್ತದೆ. ಹೀಗೆ ನಮ್ಮ ಜೀವನದಲ್ಲಿ ಬೆಳಕು ವಹಿಸುವ ಮೂಲಭೂತ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆಯಾಗಿ, ಅಂತಾರಾಷ್ಟ್ರೀಯ ಬೆಳಕಿನ ದಿನವು ನಮ್ಮ ಜೀವನ ಮತ್ತು ನಮ್ಮ ಸುತ್ತಲಿನ ಪ್ರಪಂಚದ ಮೇಲೆ ಬೆಳಕು ಬೀರುವ ಆಳವಾದ ಪ್ರಭಾವವನ್ನು ನೆನಪಿಸುತ್ತದೆ.
ನಮ್ಮ ಜೀವನದಲ್ಲಿ ಬೆಳಕಿನ ಮಹತ್ವವೇನು?
ನಮ್ಮ ಜೀವನದಲ್ಲಿ ಬೆಳಕು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಬೆಳಕು ನಮ್ಮ ಜಗತ್ತನ್ನು ಬೆಳಗಿಸುವುದಕ್ಕಿಂತ ಹೆಚ್ಚಿನದು. ಇದು ವೈಜ್ಞಾನಿಕ ಆವಿಷ್ಕಾರಕ್ಕೆ ಅಡಿಪಾಯವಾಗಿದ್ದು, ಸೂಕ್ಷ್ಮದರ್ಶಕಗಳು ಮತ್ತು ಎಕ್ಸ್-ರೇ ಬಳಸಿಕೊಂಡು ವೈದ್ಯಕೀಯ ಜೊತೆಗೆ ದೂರದರ್ಶಕಗಳನ್ನು ಬಳಸಿಕೊಂಡು ಖಗೋಳಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಪ್ರಗತಿಗೆ ಬೆಳಕು ಉತ್ತೇಜನ ನೀಡುತ್ತಿದೆ. ಲೇಸರ್‌ಗಳಂತಹ ಬೆಳಕು ಆಧಾರಿತ ತಂತ್ರಜ್ಞಾನಗಳು ಸಂವಹನ, ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಹೀಗೆ ಮಾನವನ ಜೀವನದಲ್ಲಿ ಬೆಳಕು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








