ನಾನೇ ಮಾಡಿದ್ದು ಅಂತ ಹೇಳಲ್ಲ; ಭಾರತ-ಪಾಕ್ ಮಧ್ಯಸ್ಥಿಕೆ ಬಗ್ಗೆ ವರಸೆ ಬದಲಿಸಿದ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಪಾಕಿಸ್ತಾನದೊಂದಿಗೆ ಕದನಿರಾಮಕ್ಕೆ ಒಪ್ಪಿದ್ದು ಸರಿಯಲ್ಲ ಎಂದು ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಹಸ ಹೇಳಿಕೆಯೊಂದನ್ನು ನೀಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿಯನ್ನು ಅಂತ್ಯಗೊಳಿಸಿದ್ದು ನಾನೇ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ನವದೆಹಲಿ, ಮೇ 15: ಮೂರ್ನಾಲ್ಕು ದಿನಳ ಕಾಲ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಸ್ಪರ ವೈಮಾನಿಕ ದಾಳಿ ನಡೆಯುತ್ತಿದ್ದಾಗ ಎಲ್ಲರೂ ದೊಡ್ಡ ಯುದ್ಧವೇ ನಡೆಯುತ್ತದೆ ಎಂದು ಭಾವಿಸಿದ್ದರು. ಆದರೆ, ಮಧ್ಯಾಹ್ನ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ರಾತ್ರಿಯಿಡೀ ನಡೆದ ಎರಡೂ ದೇಶಗಳೊಂದಿಗಿನ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ತಕ್ಷಣ ಮತ್ತು ಪೂರ್ಣ ಪ್ರಮಾಣದ ಕದನವಿರಾಮಕ್ಕೆ ಒಪ್ಪಿವೆ ಎಂದು ಹೇಳಿದ್ದರು. ಇದು ನಿಜವೆಂದು ಭಾರತ ಮತ್ತು ಪಾಕಿಸ್ತಾನಗಳೂ ಸ್ಪಷ್ಟನೆ ನೀಡಿದ್ದವು. ಆದರೆ, ಅಮೆರಿಕದ ಮಧ್ಯಸ್ಥಿಕೆಯಿಂದ ಪ್ರಧಾನಿ ಮೋದಿ ಪಾಕ್ ಜೊತೆಗೆ ಕದನವಿರಾಮಕ್ಕೆ (India-Pakistan Ceasefire) ಒಪ್ಪಿದ್ದಕ್ಕೆ ವಿಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಇಂದಿನ ಭಾಷಣದಲ್ಲಿ ವರಸೆಯನ್ನೇ ಬದಲಿಸಿರುವ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನವಿರಾಮಕ್ಕೆ ನಾನೇ ಪೂರ್ತಿ ಕಾರಣ ಎನ್ನುವುದಿಲ್ಲ ಎಂದಿದ್ದಾರೆ.
ಭಾರತ-ಪಾಕಿಸ್ತಾನ ಕದನ ವಿರಾಮ ಮಾತುಕತೆಗಳ ಬಗ್ಗೆ ಡೊನಾಲ್ಡ್ ಟ್ರಂಪ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ನಾನೇ ಸಂಪೂರ್ಣ ಕ್ರೆಡಿಟ್ ಹೇಳಿಕೊಳ್ಳುವುದಿಲ್ಲ ಎಂದಿರುವ ಅವರು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವ ಪ್ರಮುಖ ಪಾತ್ರ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಟ್ರಂಪ್ ಅವರೇ ಮಧ್ಯಸ್ಥಿಕೆ ವಹಿಸಿ ಕದನವಿರಾಮಕ್ಕೆ ಒಪ್ಪಿಸಿದ್ದರು ಎಂದು ಎಲ್ಲ ಕಡೆ ಸುದ್ದಿಗಳು ಹರಿದಾಡಿದ್ದವು. ಜಗತ್ತಿನಾದ್ಯಂತ ಮಾಧ್ಯಮಗಳು ಕೂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸನ್ನಿವೇಶನವನ್ನು ನಿಯಂತ್ರಣಕ್ಕೆ ತಂದಿದ್ದು ಟ್ರಂಪ್ ಎಂದೇ ಬಿಂಬಿಸಿದ್ದವು.
While addressing a crowd of U.S. military personnel in Qatar, US President Donald Trump reiterated his mediation efforts between India and Pakistan. He said:
“I don’t wanna say I did but I sure as hell helped settle the problem between Pakistan and India last week, which was… pic.twitter.com/DcwwZtDHRO
— Press Trust of India (@PTI_News) May 15, 2025
ಇದನ್ನೂ ಓದಿ: ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ, ಯಾರು ಈ ಕಾಶಿಶ್ ಚೌಧರಿ? ಇಲ್ಲಿದೆ ಮಾಹಿತಿ
ಆದರೆ, ಭಾರತ ತನ್ನ ಮತ್ತು ಪಾಕಿಸ್ತಾನದ ನಡುವಿನ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂದು ಹೇಳಿದೆ. ಈ ಹಿಂದೆ, ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷರು ಪ್ರತಿಪಾದಿಸಿದ್ದರು. ಟ್ರಂಪ್ ಅವರು ಗುಂಡಿನ ದಾಳಿ ನಿಲ್ಲಿಸುವವರೆಗೆ ಎರಡೂ ದೇಶಗಳ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಹೇಳುವವರೆಗೂ ಹೋಗಿದ್ದರು. ಆದರೆ, ಕದನ ವಿರಾಮ ಚರ್ಚೆಗಳ ಸಮಯದಲ್ಲಿ ವ್ಯಾಪಾರವನ್ನು ಎಂದಿಗೂ ಉಲ್ಲೇಖಿಸಲಾಗಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಅವರ ವ್ಯಾಪಾರ-ಸಂಬಂಧಿತ ಹಕ್ಕುಗಳನ್ನು ಭಾರತ ತಿರಸ್ಕರಿಸಿತು.
#BREAKING: Trump addressing the US Troops at Al-Udeid Air Base in Qatar yet again speaks about India-Pakistan ceasefire and mentions trade for peace. Refers to missiles of a different type being fired. Likely talking about India’s BRAHMOS fired against Pakistan? pic.twitter.com/ZHsENHn61b
— Aditya Raj Kaul (@AdityaRajKaul) May 15, 2025
ಭಾರತ-ಪಾಕ್ ಖುಷಿಯಾಗಿವೆ:
ತಮ್ಮ ಐತಿಹಾಸಿಕ ಮಧ್ಯಪ್ರಾಚ್ಯ ಭೇಟಿಯಲ್ಲಿ ಇಂದು ಮಾತನಾಡಿದ ಡೊನಾಲ್ಡ್ ಟ್ರಂಪ್, “ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ನಾನೇ ಪೂರ್ತಿಯಾಗಿ ಇದಕ್ಕೆ ಕಾರಣ ಎಂದು ಹೇಳಲು ಬಯಸುವುದಿಲ್ಲ. ಆದರೆ ಕಳೆದ ವಾರ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಪರಿಹರಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆ ಎರಡೂ ದೇಶಗಳ ನಡುವಿನ ಗಲಭೆ ಹೆಚ್ಚಾಗುತ್ತಿತ್ತು” ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಪರಮಾಣು ಬಾಂಬ್‌ಗಳ ಮೇಲೆ ಜಾಗತಿಕ ಮೇಲ್ವಿಚಾರಣೆ ಅಗತ್ಯ; ರಾಜನಾಥ್ ಸಿಂಗ್
“ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವೇಷವನ್ನು ಇತ್ಯರ್ಥಪಡಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ. ಅವರು ತಮ್ಮ ಗಲ್ಫ್ ಪ್ರವಾಸದ ಸಮಯದಲ್ಲಿ ಕತಾರ್‌ನಲ್ಲಿರುವ ಮಿಲಿಟರಿ ನೆಲೆಯಲ್ಲಿ ಅಮೆರಿಕನ್ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕದನವಿರಾಮದಿಂದ ಪಾಕಿಸ್ತಾನ ಮತ್ತು ಭಾರತ ಎರಡೂ ಸಂತೋಷಗೊಂಡಿವೆ ಎಂದು ಟ್ರಂಪ್ ಹೇಳಿದರು. ಸಂಘರ್ಷಕ್ಕಿಂತ ವ್ಯಾಪಾರಕ್ಕೆ ಆದ್ಯತೆ ನೀಡಬೇಕೆಂದು ಎರಡೂ ರಾಷ್ಟ್ರಗಳನ್ನು ಕೇಳಿಕೊಂಡಿದ್ದೇನೆ” ಎಂದು ಅವರು ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








