AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ವೇಳೆ ಚೈತ್ರಾ ಕುಂದಾಪುರ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಳು: ತಂದೆ ಆರೋಪ

ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಕಶ್ಯಪ್ ಮದುವೆಯ ಬೆನ್ನಲ್ಲೇ ಹೊಸ ವಿವಾದ ಶುರುವಾಗಿದೆ. ಚೈತ್ರಾ ತಂದೆ ಬಾಲಕೃಷ್ಣ ನಾಯಕ್ ಅವರು ಒಂದಷ್ಟು ಆರೋಪಗಳನ್ನು ಹೊರಿಸಿದ್ದಾರೆ. ತಮ್ಮನ್ನು ಮದುವೆಗೆ ಸರಿಯಾಗಿ ಆಹ್ವಾನಿಸಿಲ್ಲ ಎಂದು ಅವರು ಹೇಳಿದ್ದಾರೆ. ದುಡ್ಡಿಗಾಗಿ ಬೇಡಿಕೆ ಇಡಲಾಗಿತ್ತು ಎಂದು ಕೂಡ ಅವರು ಹೇಳಿದ್ದಾರೆ.

ಮದುವೆ ವೇಳೆ ಚೈತ್ರಾ ಕುಂದಾಪುರ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಳು: ತಂದೆ ಆರೋಪ
Balakrishna Naik, Chaithra Kundapura
ಪ್ರಜ್ವಲ್ ಅಮೀನ್​, ಉಡುಪಿ
| Updated By: ಮದನ್​ ಕುಮಾರ್​|

Updated on:May 15, 2025 | 7:38 PM

Share

ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ (Chaithra Kundapura) ಅವರ ಕುಟುಂಬದಲ್ಲಿನ ಜಗಳ ಬೀದಿಗೆ ಬಂದಿದೆ. ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಜೊತೆ ಮದುವೆ (Chaithra Kundapura Marriage) ಮಾಡಿಕೊಂಡರು. ಆದರೆ ಈ ಮದುವೆಗೆ ತಮ್ಮನ್ನು ಸರಿಯಾಗಿ ಆಹ್ವಾನಿಸಿಲ್ಲ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬಾಲಕೃಷ್ಣ ನಾಯ್ಕ್ (Balakrishna Naik) ಹೇಳಿದ್ದಾರೆ.

‘ಮನೆಯಲ್ಲಿ ಪೇಂಟ್ ಮಾಡುತ್ತಿದ್ದರು. ಆಗ ನನಗೆ ಹೋಟೆಲ್​ನಲ್ಲಿ ರಜೆ ಕೊಟ್ಟರು. 8 ದಿನ ಮನೆಯಲ್ಲೇ ಇದ್ದೆ. ಆರೋಗ್ಯ ಸ್ಥಿತಿ ಸರಿ ಇರಲಿಲ್ಲ. ಆಗ ಯಾರೂ ಕೂಡ ಮದುವೆ ಬಗ್ಗೆ ನನಗೆ ಹೇಳಲೇ ಇಲ್ಲ. ನಾನು ಕೆಲಸಕ್ಕೆ ಹೋಗಿ 15 ದಿನ ಕಳೆದ ನಂತರ ‘ಅಪ್ಪ ನೀವು ಮದುವೆಗೆ ಬರಬೇಕು ಮತ್ತು 5 ಲಕ್ಷ ಕೊಡಬೇಕು’ ಅಂತ ಡಿಮ್ಯಾಂಡ್ ಮಾಡಿದಳು. 5 ಲಕ್ಷ ಆಗದಿದ್ದರೆ 50 ಸಾವಿರ ಆದರೂ ಕೊಡಿ ಎಂದಳು. ಅಷ್ಟು ಹಣ ಕೊಡುವ ಶಕ್ತಿ ನನಗೆ ಇದ್ದಿದ್ದರೆ ನಾನು ಯಾಕೆ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದೆ’ ಎಂದು ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ ಹೇಳಿದ್ದಾರೆ.

‘ವರ್ಷವಿಡೀ ದುಡಿದರೂ ನನಗೆ 10 ಸಾವಿರ ಕೂಡಿಸಲು ಆಗಲ್ಲ. ಅಂಥದ್ದರಲ್ಲಿ ನಾನು ಇವರಿಗೆ 50 ಸಾವಿರ ಹೇಗೆ ಕೊಡಲಿ? ಆಗಲ್ಲ ಎಂದೆ. ಹಾಗಾದರೆ ನನಗೆ ಅಪ್ಪ ಇಲ್ಲ ಅಂತ ಹೇಳಿಕೊಂಡು ಮದುವೆ ಆಗುತ್ತೇನೆ ಅಂದಳು. ನಿನಗೆ ಇಷ್ಟ ಬಂದಂತೆ ಮಾಡು, ನಿನ್ನ ಮದುವೆಗೆ ನಾನು ಬರಲ್ಲ ಅಂತ ನಾನು ಹೇಳಿದೆ. ನನಗೆ ಬಹಳ ನೋವಾಗಿದೆ. ಈಗ ಅವಳು ಬಂದರೂ ಕೂಡ ನಾನು ಅವಳನ್ನು ಒಪ್ಪಿಕೊಳ್ಳಲ್ಲ’ ಎಂದು ಬಾಲಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ
Image
ಎರಡು ಕ್ವಾಟರ್ ಕೊಡಿಸಿದರೆ ಯಾರು ಬೇಕಾದರೂ ಒಳ್ಳೆಯವನು ಎನ್ನುತ್ತಾನೆ; ಚೈತ್ರಾ
Image
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
Image
ಸಂಕಷ್ಟದಲ್ಲಿ ಚೈತ್ರಾ ವಿವಾಹ; ತಂದೆಯಿಂದಲೇ ಬಂತು ದೊಡ್ಡ ಆರೋಪ
Image
ತಾಳಿ ಕಟ್ಟಿಸಿಕೊಳ್ಳುವಾಗ ಅತ್ತ ಚೈತ್ರಾ ಕುಂದಾಪುರ; ಇಲ್ಲಿದೆ ವಿಡಿಯೋ

‘ನನಗೆ ಚೈತ್ರಾ ಬೇಡವೇ ಬೇಡ. ಅವಳ ಒಳ್ಳೆಯದು, ಕೆಟ್ಟದ್ದು ಏನೂ ಬೇಡ. ನನ್ನಷ್ಟಕ್ಕೆ ನನಗೆ ಜೀವನ ಮಾಡಿಕೊಡಲು ಅವಕಾಶ ನೀಡಲಿ. ಅವಳು ಹೇಗೆ ಬೇಕಾದರೂ ಇರಲಿ. ಅವಳು ಒಂಥರಾ ದೇಶದ್ರೋಹಿ. ಕ್ಷಮೆ ತೆಗೆದುಕೊಳ್ಳುವ ಹುಡುಗಿಯೇ ಅಲ್ಲ ಅವಳು’ ಎಂದು ಅವರು ಹೇಳಿದ್ದಾರೆ.

ಬಾಲಕೃಷ್ಟ ಅವರ ಹೇಳಿಕೆ ವೈರಲ್ ಆದ ಬಳಿಕ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ. ಆದರೆ ಈ ಮಾತನ್ನು ಬಾಲಕೃಷ್ಣ ಅವರು ಒಪ್ಪಿಕೊಂಡಿಲ್ಲ. ‘ನಾನು ಕುಡುಕ ಎಂಬುದನ್ನು ಸಾಬೀತು ಮಾಡಲಿ’ ಎಂದು ಅವರು ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಮದುವೆ ಬಳಿಕ ಚೈತ್ರಾ ಅವರಿಗೆ ಹೊಸ ತಾಪತ್ರಯ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 pm, Thu, 15 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ