PM Review Meeting: ಮೀನುಗಾರಿಕೆ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ
PM Narendra Modi chairs review meeting of fisheries dept: ಮೀನುಗಾರಿಕೆ ವಲಯದ ಅಭಿವೃದ್ಧಿಗೆ ಗಮನ ಕೊಟ್ಟಿರುವ ಸರ್ಕಾರವು ಆಳ ಸಮುದ್ರ ಮೀನುಗಾರಿಕೆ, ಸಮುದ್ರಮೀನು ರಫ್ತು ಮೇಲೆ ಗಮನ ಹೆಚ್ಚಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನವದೆಹಲಿ, ಮೇ 15: ಮೀನುಗಾರಿಕೆ ವಲಯದ (fisheries dept) ಅಭಿವೃದ್ಧಿಗೆ ಗಮನ ಕೊಟ್ಟಿರುವ ಸರ್ಕಾರವು ಆಳ ಸಮುದ್ರ ಮೀನುಗಾರಿಕೆ (deep sea fishing), ಸಮುದ್ರ ಮೀನು ರಫ್ತು (sea fish export) ಮೇಲೆ ಗಮನ ಹೆಚ್ಚಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ (review meeting) ನಡೆಯಿತು. ಕಳೆದ ತಿಂಗಳು, ಏಪ್ರಿಲ್ 28ರಂದು ಮೀನುಗಾರಿಕೆ ಇಲಾಖೆಯು ಮುಂಬೈನಲ್ಲಿ 255 ಕೋಟಿ ರೂ ಮೊತ್ತದ ಯೋಜನೆಗಳನ್ನು ಆರಂಭಿಸಿತ್ತು. ಅಂದು ಏಳು ಕರಾವಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರವು ಹಲವು ಕುಟುಂಬಗಳಿಗೆ ಆಧಾರ ಒದಗಿಸಿದೆ. ಭಾರತದಲ್ಲಿ ಬಹಳ ಸುದೀರ್ಘವಾದ ಕರಾವಳಿ ಭಾಗ ಇದ್ದು ಹೇರಳ ಮೀನುಗಳು ಲಭ್ಯ ಇವೆ. ಸಾಕಷ್ಟು ಪ್ರಮಾಣದಲ್ಲಿ ಮೀನುಗಳ ರಫ್ತು ಕೂಡ ನಡೆಯುತ್ತದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

