AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡದಿ ಬಳಿ ದಿವ್ಯಾಂಗ ಅಪ್ರಾಪ್ತೆಯೊಬ್ಬಳ ಅಸಹಜ ಸಾವು, ಕೊಲೆ ಎನ್ನುತ್ತಿರುವ ಕುಟುಂಬ, ಸಂಸದ ಮಂಜುನಾಥ್ ಭೇಟಿ

ಬಿಡದಿ ಬಳಿ ದಿವ್ಯಾಂಗ ಅಪ್ರಾಪ್ತೆಯೊಬ್ಬಳ ಅಸಹಜ ಸಾವು, ಕೊಲೆ ಎನ್ನುತ್ತಿರುವ ಕುಟುಂಬ, ಸಂಸದ ಮಂಜುನಾಥ್ ಭೇಟಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 15, 2025 | 5:38 PM

Share

ಭಧ್ರಾಪುರ ಗ್ರಾಮಕ್ಕೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದ ಸಂಸದ ಡಾ ಮಂಜುನಾಥ್, ವಿದ್ಯುತ್ ಸರಬರಾಜು ಪದೇಪದೆ ವ್ಯತ್ಯಯಗೊಳ್ಳುವ ಸಮಸ್ಯೆ ಇದೆ, ಅದರ ಪರಿಹಾರಕ್ಕಾಗಿ ಸೌರಶಕ್ತಿಯ ಮೂಲಕ ವಿದ್ಯುತ್ ಒದಗಿಸುವ ಕೆಲಸ ತಾನು ಮಡೋದಾಗಿ ಹೇಳಿದರು. ಮಂಜುನಾಥ್ ಅವರು ಕುಟುಂಬಸ್ಥರು ಮತ್ತು ಸಂಬಂಧಿಕರ ಮಾತುಗಳನ್ನು ಆಲಿಸಿದರು.

ರಾಮನಗರ, ಮೇ 15: ಜಿಲ್ಲೆಯ ಬಿಡದಿ ಬಳಿಯಿರುವ ಭದ್ರಾಪುರ ಗ್ರಾಮದಲ್ಲಿ ಒಂದು ಅನಾಥ ದಿವ್ಯಾಂಗ ಮಗುವಿನ ಶವ ರೇಲ್ವೇ ಟ್ರ್ಯಾಕ್ ಬಳಿ ಸಿಕ್ಕಿದೆ. ಸಂಬಂಧಿಕರು ಮಗುವಿನ ಕೊಲೆ ಮಾಡಲಾಗಿದೆ ಎನ್ನುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಸದ ಡಾ ಸಿಎನ್ ಮಂಜುನಾಥ್ ಅವರು, ಮಗೂಗೆ ತಂದೆ ಇಲ್ಲ, ಈ ಕುಟುಂಬದ ಮೂರು ಮಕ್ಕಳು ಹುಟ್ಟು ಕಿವುಡುತನದಿಂದ ಬಳಲುತ್ತಿವೆ, ಮಗುವಿನ ದೇಹದ ಪೊಸ್ಟ್​ಮಾರ್ಟಂ ನಡೆಸಿ ಅದನ್ನು ಎಫ್​ಎಸ್ಎಲ್ ಗೆ ಕಳಿಸಲಾಗಿದೆ, ಅಲ್ಲಿಂದ ರಿಪೋರ್ಟ್ ಬಂದ ನಂತರವೇ ಸಾವಿನ ಕಾರಣ ಗೊತ್ತಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:   ನಾಲಗೆಗೆ ಆದ ಗಾಯ ಮಾಯುತ್ತೆ ನಾಲಗೆಯಿಂದಾದ ಗಾಯ ಮಾಯಲಾರದು: ಡಾ ಸಿಎನ್ ಮಂಜುನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ