Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುಡಿದು ರಂಪಾಟ ಮಾಡಿದವನಿಗೆ ಚಟ ಬಿಟ್ಟುಹೋಗುವಂತೆ ಬಾರಿಸಿದ ಮಹಿಳೆ! ವಿಡಿಯೋ ನೋಡಿ

ಇದನ್ನು ಹಂಚಿಕೊಂಡಿರುವ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ, ಕುಡಿತ ಬಿಟ್ಟುಬಿಡಿ, ಇಲ್ಲವಾದರೆ ಇಂಥ ಆತಿಥ್ಯ ಸ್ವೀಕರಿಸಿ ಎಂಬಂತೆ ಬರೆದುಕೊಂಡಿದ್ದಾರೆ.

Viral Video: ಕುಡಿದು ರಂಪಾಟ ಮಾಡಿದವನಿಗೆ ಚಟ ಬಿಟ್ಟುಹೋಗುವಂತೆ ಬಾರಿಸಿದ ಮಹಿಳೆ! ವಿಡಿಯೋ ನೋಡಿ
ಕುಡುಕನಿಗೆ ಏಟು
Follow us
TV9 Web
| Updated By: ganapathi bhat

Updated on: Jul 02, 2021 | 11:07 PM

ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ತಮಾಷೆಯ ಪ್ರಸಂಗಗಳ ವಿಡಿಯೋ ಹರಿದಾಡುತ್ತಿರುತ್ತದೆ. ಇವುಗಳಲ್ಲಿ ಕೆಲವಂತೂ ನೋಡುಗರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತದೆ. ಕೆಲವು ಆಶ್ಚರ್ಯ, ವಿಶೇಷ ಭಾವವನ್ನೂ ನೀಡುತ್ತದೆ. ಕೆಲವನ್ನು ನೋಡಿದಾಗ ಅವು ವಿಭಿನ್ನ ಆಯಾಮದ ಆಲೋಚನೆಗಳನ್ನು ಹೊಳೆಸುತ್ತದೆ. ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಕಷ್ಟು ತಮಾಷೆಯ ಚರ್ಚೆ ಹಾಗೂ ಗಂಭೀರ ಆಲೋಚನೆಯೂ, ಕಮೆಂಟ್​ಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುತ್ತಿದೆ.

ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನಿಗೆ ಸರಿಯಾಗಿ ಏಟು ಕೊಟ್ಟಿದ್ದಾಳೆ. ಕಾರಣವೇನು ಗೊತ್ತೇ? ಕುಡಿತ. ಹೌದು. ಕುಡಿದು ಅಸಭ್ಯವಾಗಿ ಮನೆಗೆ ಬಂದ ಗಂಡನಿಗೆ ಪತ್ನಿ ಹಿಂದುಮುಂದು ನೋಡದೆ ಏಟು ಕೊಟ್ಟಿದ್ದಾಳೆ. ವಿಶೇಷ ಎಂದರೆ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

ಮದ್ಯದ ಅಮಲಿಗೆ ಇಂಥಾ ಏಟು ಸಿಗಬೇಕು. ಕುಡಿತದ ಚಟವೆಲ್ಲಾ ಇಳಿದುಹೋಗುತ್ತದೆ ಎಂದು ಹಲವರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಕೆಲವರಿಗೆ ಕುಡಿದರೆ ಪ್ರಜ್ಞೆಯೇ ಇರುವುದಿಲ್ಲ. ಬೇಕಾಬಿಟ್ಟಿಯಾಗಿ ವ್ಯವಹರಿಸುತ್ತಾರೆ. ಏನು ಹೇಳುತ್ತಿದ್ದೇನೆ? ಏನು ಮಾಡುತ್ತಿದ್ದೇನೆ? ಏನೂ ಗೊತ್ತಿರುವುದಿಲ್ಲ. ಇದರಿಂದ ಹಲವು ಬಾರಿ ದೊಡ್ಡ ಸಮಸ್ಯೆಗಳೇ ಉಂಟಾಗುತ್ತದೆ. ಈ ವಿಡಿಯೋ ನೋಡಿದರೆ ಅಂಥದ್ದೇ ಏನೋ ಘಟನೆ ಆಗಿರಬೇಕು ಎಂದು ಕಾಣುತ್ತದೆ.

ಮಹಿಳೆ ಅಷ್ಟೂ ಜೋರಾಗಿ ಆತನಿಗೆ ಬಾರಿಸುತ್ತಿದ್ದಾಳೆ. ಆತನೂ ಏನೇನೋ ಹೇಳಲು ಪ್ರಯತ್ನ ಮಾಡುತ್ತಿದ್ದಾನೆ. ವಿಡಿಯೋ ನೋಡಿ..

ವಿಡಿಯೋ ನೋಡಿದ ಮೇಲಂತೂ ಏಟು ಹೇಗೆ ಸಿಕ್ಕಿದೆ ಎಂದು ನಿಮಗೆ ಅರ್ಥವಾಗಿರಬೇಕು. ಕೆಲವರು ಈ ವಿಡಿಯೋ ನೋಡಿ ಆಶ್ಚರ್ಯವಾಗಿದ್ದಾರೆ. ಇದನ್ನು ಹಂಚಿಕೊಂಡಿರುವ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ, ಕುಡಿತ ಬಿಟ್ಟುಬಿಡಿ, ಇಲ್ಲವಾದರೆ ಇಂಥ ಆತಿಥ್ಯ ಸ್ವೀಕರಿಸಿ ಎಂಬಂತೆ ಬರೆದುಕೊಂಡಿದ್ದಾರೆ. ಕುಡಿತ ಎಂಬ ಅಭ್ಯಾಸ ಆರೋಗ್ಯಕ್ಕೂ, ನಮ್ಮ ಸುತ್ತಲಿನ ವಾತಾವರಣ ಚೆನ್ನಾಗಿ ಇಡುವುದಕ್ಕೂ ಮಾರಕ. ಹಾಗಾಗಿ ಇಂಥಾ ಅಭ್ಯಾಸ ಇದ್ದರೆ ವಿಡಿಯೋ ನೋಡಿ, ಬಿಟ್ಟುಬಿಡಿ.

ಇದನ್ನೂ ಓದಿ: ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ಸಖತ್ ವೈರಲ್ ಆಗ್ತಿದೆ ಹಾರ್ದಿಕ್ ಪಾಂಡ್ಯನ 10 ವರ್ಷದ ಹಳೆಯ ವಿಡಿಯೋ

Viral Photo: 20 ಅಡಿ ಆಳದ ಬಾವಿಯಲ್ಲಿ ಮುಖವನ್ನಷ್ಟೆ ಮೇಲೆತ್ತಿ ನೋಡುತ್ತಿದೆ ಚಿರತೆ! ಅದ್ಭುತ ಚಿತ್ರ ವೈರಲ್​

ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು