ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ಸಖತ್ ವೈರಲ್ ಆಗ್ತಿದೆ ಹಾರ್ದಿಕ್ ಪಾಂಡ್ಯನ 10 ವರ್ಷದ ಹಳೆಯ ವಿಡಿಯೋ
Hardik Pandya: ಹಾರ್ದಿಕ್ ಭಾರತ ತಂಡಕ್ಕಾಗಿ 11 ಟೆಸ್ಟ್ ಮತ್ತು 60 ಏಕದಿನ ಮತ್ತು 48 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ವೈಟ್ ಬಾಲ್ ಸರಣಿಯನ್ನು ಆಡಲು ಟೀಮ್ ಇಂಡಿಯಾದ ಎರಡನೇ ತಂಡ ಶ್ರೀಲಂಕಾ ತಲುಪಿದೆ. ಹಾರ್ದಿಕ್ ಪಾಂಡ್ಯ ಕೂಡ ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ ಜೊತೆಗಿದ್ದಾರೆ. ಹಾರ್ದಿಕ್ ಪಾಂಡ್ಯ ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಹಾಗೂ ಬೌಲಿಂಗ್ನಿಂದಾಗಿ ಟೀಂ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಕೂಡ ಟಿ 20 ಮತ್ತು ಏಕದಿನ ಸರಣಿಯಲ್ಲಿ ಸ್ಫೋಟಕ ಆಟವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, ಹಾರ್ದಿಕ್ ಅವರ 10 ವರ್ಷದ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಅದ್ಭುತ ಆಲ್‌ರೌಂಡರ್. ಅವರು ಕ್ರೀಸ್‌ನಲ್ಲಿ ನಿಂತಂತೆ ತಂಡದ ಸ್ಕೋರ್‌ಬೋರ್ಡ್ ವೇಗವಾಗಿ ಹೆಚ್ಚುತ್ತಾ ಸಾಗುತ್ತದೆ ಎಂದು ಅಭಿಮಾನಿಗಳು ಭಾವಿಸುತ್ತಾರೆ. ಈ ಮಧ್ಯೆ 2011 ರ ಅವಧಿಯಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್‌ನಲ್ಲಿ ಸ್ಥಳೀಯ ಕ್ರಿಕೆಟ್ ಆಡಿದ್ದರು. ಅವರು ಸ್ಥಳೀಯ ಪಂದ್ಯವೊಂದರ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿರುವ ಹಾರ್ದಿಕ್ ಬಾಲನ್ನು ಕ್ರೀಡಾಂಗಣದ ಮೂಲೆ ಮೂಲೆಗೂ ಅಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಬದುಕು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2016 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ ಅವರು ಮುಂಬೈ ಇಂಡಿಯನ್ಸ್‌ನ ಪ್ರಮುಖ ಅಸ್ತ್ರವಾಗಿದ್ದಾರೆ. ಹಾರ್ದಿಕ್ ಐಪಿಎಲ್ನಲ್ಲಿ ಉತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸುವ ಸಾಮಥ್ಯ್ರ ಹೊಂದಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಸಹ, ಅವರು ಐಪಿಎಲ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಜೋಡಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಬ್ಬರೂ ಸಹೋದರರ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಇಬ್ಬರು ಸಹೋದರರ ನಡುವೆ ಸಾಕಷ್ಟು ಸಾಮ್ಯತೆಯೂ ಇದೆ. ಟೀಂ ಇಂಡಿಯಾದಲ್ಲಿ ಇಬ್ಬರೂ ಸಹೋದರರು ಆಡಿದ್ದಾರೆ. ಇಬ್ಬರು ಸಹೋದರರು ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಹಾರ್ದಿಕ್ ಭಾರತ ತಂಡಕ್ಕಾಗಿ 11 ಟೆಸ್ಟ್ ಮತ್ತು 60 ಏಕದಿನ ಮತ್ತು 48 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಿಂದ ಹಾರ್ದಿಕ್ ದೂರ ಇಂಗ್ಲೆಂಡ್ ಪ್ರವಾಸಕ್ಕಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಭಾರತೀಯ ತಂಡದಲ್ಲಿ ಸೇರಿಸಲಾಗಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ (ಡಬ್ಲ್ಯುಟಿಸಿ ಫೈನಲ್) ಅವರನ್ನು ಆಯ್ಕೆ ಮಾಡಿಲ್ಲ. ಇದರ ಬಗ್ಗೆ ವಿಭಿನ್ನ ಚರ್ಚೆಗಳು ನಡೆದವು. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ನಿಂದಾಗಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ದೂರವಿರಬೇಕಾಗಿದೆ. ಬ್ಯಾಕ್ ಸರ್ಜರಿಯ ನಂತರ ಅವರು ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಅವರನ್ನು ಟೆಸ್ಟ್ ಕ್ರಿಕೆಟ್ನಿಂದ ಹೊರಹಾಕಿದೆ.