ಅನುಷ್ಕಾ ದುಪಟ್ಟಾ ಎಳೆದು ಡಾನ್ಸ್ಗಿಳಿದ ವಿರಾಟ್! ಕ್ರಿಕೆಟಿಗನ ಮದುವೆಯಲ್ಲಿ ಕೊಹ್ಲಿಯ ತುಂಟಾಟ
ಈ ವೇಳೆ ಪಾರ್ಟಿ ಮೂಡ್ನಲ್ಲಿದ್ದ ಕೊಹ್ಲಿ ತನ್ನ ಪ್ರೇಯಸಿ ಅನುಷ್ಕಾ ತೊಟ್ಟಿದ್ದ ಲೆಹೆಂಗಾದ ದುಪಟ್ಟಾವನ್ನು ಹಿಡಿದು ಎಳೆದಿದ್ದಾರೆ. ವಿರಾಟ್ ಕೀಟಲೆ ನೋಡಿದ ಅನುಷ್ಕಾ ಕೂಡ ಇದನ್ನು ನೋಡಿ ಮುಗುಳ್ನಕ್ಕು ಕೊಹ್ಲಿಯೊಂದಿಗೆ ನೃತ್ಯ ಮಾಡಲು ಸಿದ್ಧರಾಗಿರುವಂತೆ ಕಾಣುತ್ತದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವಾಗಲೂ ನೆಟಿಜನ್‌ಗಳಿಗೆ ಒಳ್ಳೆಯ ಆಹಾರವಾಗುತ್ತಾರೆ. ಕೊಹ್ಲಿ ಅಭಿಮಾನಿಗಳು ಪ್ರಸ್ತುತ ಘಟನೆಗಳನ್ನು ಮಾತ್ರವಲ್ಲದೆ ಅವರ ಹಳೆಯ ಫೋಟೋಗಳನ್ನು ಸಹ ಟ್ರೆಂಡ್ ಮಾಡುತ್ತಿದ್ದಾರೆ. ಈಗ ಅಂತಹದ್ದೆ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ಆ ಫೋಟೋದ ಹಿನ್ನೆಲೆ ಏನೆಂದರೆ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು 2017 ರಲ್ಲಿ ಮಾಜಿ ಟೀಮ್ ಇಂಡಿಯಾ ಬೌಲರ್ ಜಹೀರ್ ಖಾನ್ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಾರ್ಟಿ ಮೂಡ್ನಲ್ಲಿದ್ದ ಕೊಹ್ಲಿ ತನ್ನ ಪ್ರೇಯಸಿ ಅನುಷ್ಕಾ ತೊಟ್ಟಿದ್ದ ಲೆಹೆಂಗಾದ ದುಪಟ್ಟಾವನ್ನು ಹಿಡಿದು ಎಳೆದಿದ್ದಾರೆ. ವಿರಾಟ್ ಕೀಟಲೆ ನೋಡಿದ ಅನುಷ್ಕಾ ಕೂಡ ಇದನ್ನು ನೋಡಿ ಮುಗುಳ್ನಕ್ಕು ಕೊಹ್ಲಿಯೊಂದಿಗೆ ನೃತ್ಯ ಮಾಡಲು ಸಿದ್ಧರಾಗಿರುವಂತೆ ಕಾಣುತ್ತದೆ.
ಜಹೀರ್ ಖಾನ್ ಟೀಮ್ ಇಂಡಿಯಾ ಪರ 14 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು. ಅವರು 2015 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಸಾಗರಿಕಾ ಘಾಟ್ಗೆ ಅವರು ನಿಶ್ಚಿತಾರ್ಥವನ್ನು ಏಪ್ರಿಲ್ 24, 2017 ರಂದು ಜಹೀರ್ ಖಾನ್ ಅವರೊಂದಿಗೆ ಮಾಡಿಕೊಂಡರು. ಈ ದಂಪತಿಗಳು ನವೆಂಬರ್ 2017 ರಲ್ಲಿ ವಿವಾಹವಾದರು. ಸಾಗರಿಕಾ ಮತ್ತು ಜಹೀರ್ ಮದುವೆಯಾದ ಒಂದು ತಿಂಗಳ ನಂತರ, ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಟಲಿಯಲ್ಲಿ ವಿವಾಹ ಬಂಧನಕ್ಕೊಳಗಾದರು. ದಂಪತಿಗಳು ಡಿಸೆಂಬರ್ 11, 2017 ರಂದು ವಿವಾಹವಾದರು ಮತ್ತು ಈ ವರ್ಷದ ಜನವರಿ 11 ರಂದು ತಮ್ಮ ಚೊಚ್ಚಲ ಮಗು, ವಮಿಕಾಳನ್ನು ಸ್ವಾಗತಿಸಿದರು.
ಶಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ಮದುವೆಗೆ ಮೊದಲು, ಇಬ್ಬರು ಒಟ್ಟಿಗೆ ಶಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂತರ ಪ್ರೀತಿಯಲ್ಲಿ ಸಿಲುಕಿದ ಈ ದಂಪತಿ 2017 ರ ಡಿಸೆಂಬರ್‌ನಲ್ಲಿ ವಿವಾಹವಾದರು. ಪ್ರೇಮಿಗಳಾಗಿದ್ದಾಗ ಈ ದಂಪತಿಗಳು ಪರಸ್ಪರ ಬೇಟಿಯಾಗುವುದು, ಇವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದವು. ಮದುವೆಯ ನಂತರವೂ ಸಹ ಈ ಜೋಡಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕುತೂಹಲಕಾರಿ ವಿಚಾರಗಳನ್ನು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಅನುಷ್ಕಾ ಶರ್ಮಾ ಅವರು ಸೂಪರ್ ಹಿಟ್ ಚಿತ್ರಗಳಾದ ರಬ್ ನೆ ಬನಾಡಿ ಜೋಡಿ, ಪಿಕೆ, ಬ್ಯಾಂಡ್ ಬಾಜಾ ಬಾರತ್, ಸುಲ್ತಾನ್, ಎ ದಿಲ್ ಹೈ ಮುಷ್ಕಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅನುಷ್ಕಾ ಶರ್ಮಾ ಕೊನೆಯ ಬಾರಿಗೆ ಶಾರೂಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ 2018 ರಲ್ಲಿ ಝಿರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ನಿರ್ಮಾಪಕರಾಗಿ ಬಡ್ತಿ ಹೊಂದಿ ಬುಲ್ಬುಲ್ ಚಿತ್ರವನ್ನು ನಿರ್ಮಿಸಿದರು ಮತ್ತು ಅದನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಿದರು. ಚಿತ್ರ ದೊಡ್ಡ ಯಶಸ್ಸನ್ನು ಕಂಡಿತು. ನಂತರ ಅನುಷ್ಕಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಸಾಂಗ್ ಲಾಕ್ ಎಂಬ ವೆಬ್-ಸರಣಿಯನ್ನು ಸಹ ನಿರ್ಮಿಸಿದ್ದಾರೆ.
Published On - 5:30 pm, Fri, 2 July 21