IND vs SL: ಮುಗಿಯುತ್ತಿಲ್ಲ ಲಂಕಾ ಕ್ರಿಕೆಟಿಗರ ಜಟಾಪಟಿ; ಭಾರತ ವಿರುದ್ಧದ ಸರಣಿ ಆಡಲ್ಲವೆಂದ ಐವರು ಕ್ರಿಕೆಟಿಗರು

IND vs SL: ವಾಸ್ತವವಾಗಿ, ಇದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಒಪ್ಪಂದದ ವಿವಾದವಾಗಿದೆ. ಪ್ರವಾಸ ಗುತ್ತಿಗೆಗೆ ಸಹಿ ಹಾಕಲು ಐದು ಆಟಗಾರರು ನಿರಾಕರಿಸಿದ್ದಾರೆ.

IND vs SL: ಮುಗಿಯುತ್ತಿಲ್ಲ ಲಂಕಾ ಕ್ರಿಕೆಟಿಗರ ಜಟಾಪಟಿ; ಭಾರತ ವಿರುದ್ಧದ ಸರಣಿ ಆಡಲ್ಲವೆಂದ ಐವರು ಕ್ರಿಕೆಟಿಗರು
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on:Jul 02, 2021 | 7:25 PM

ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿದೆ. ಮತ್ತೊಂದೆಡೆ, ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಟೆಸ್ಟ್ ಸರಣಿಯು ಆಗಸ್ಟ್ 4 ರಂದು ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ 20 ಸರಣಿಗಳನ್ನು ಆಡಲಾಗುತ್ತಿದೆ. ಭಾರತದ ಎರಡು ಪ್ರಮುಖ ತಂಡಗಳು ಎರಡು ವಿಭಿನ್ನ ಪ್ರವಾಸಗಳಲ್ಲಿವೆ. ಆದರೆ, ಶ್ರೀಲಂಕಾದ ಕೆಲವು ಮಾಜಿ ಆಟಗಾರರು ಭಾರತ ತನ್ನ ಮುಖ್ಯ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ವಿವಾದ ಉದ್ಭವಿಸಿದೆ. ಐವರು ಆಟಗಾರರು ಸರಣಿಯಲ್ಲಿ ಆಡಲು ನಿರಾಕರಿಸಿದ್ದಾರೆ. ಒಂದೆಡೆ ಶಿಖರ್ ಧವನ್ ನೇತೃತ್ವದಲ್ಲಿ ಮತ್ತು ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ. ಮತ್ತೊಂದೆಡೆ, ಶ್ರೀಲಂಕಾ ತಂಡದಲ್ಲಿ ವಿವಾದ ಭುಗಿಲೆದ್ದಿದೆ.

ಸಹಿ ಹಾಕಲು ಐದು ಆಟಗಾರರು ನಿರಾಕರಿಸಿದ್ದಾರೆ ವಾಸ್ತವವಾಗಿ, ಇದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಒಪ್ಪಂದದ ವಿವಾದವಾಗಿದೆ. ಪ್ರವಾಸ ಗುತ್ತಿಗೆಗೆ ಸಹಿ ಹಾಕಲು ಐದು ಆಟಗಾರರು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಈ ಐದು ಆಟಗಾರರು ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಲು ನಿರಾಕರಿಸಿದರು. ಆಟಗಾರರಲ್ಲಿ ಲಸಿತ್ ಅಂಬುಲ್ಡೆನಿಯಾ, ಲಹಿರು ಕುಮಾರ, ವಿಶ್ವ ಫರ್ನಾಂಡೊ, ಆಶೆನ್ ಬಂಡರಾ ಮತ್ತು ಕಸುನ್ ರಜಿತಾ ಸೇರಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿ ಬಯೋ ಬಬಲ್ ಪ್ರವೇಶಿಸುವಂತೆ ಲಂಕನ್ ಮಂಡಳಿ ಕ್ರಿಕೆಟಿಗರಿಗೆ ಸೂಚಿಸಿತ್ತು. ಆದರೆ ಈ ಆಟಗಾರರು ಅದನ್ನು ತಿರಸ್ಕರಿಸಿದರು. ಈ ಆಟಗಾರರು ಸಹಿ ಹಾಕಿದರೆ, ಅವರನ್ನು ಭಾರತದ ವಿರುದ್ಧದ ಸರಣಿಗೆ ಪರಿಗಣಿಸಬಹುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆಶ್ಲೇ ಡಿಸಿಲ್ವಾ ಹೇಳಿದ್ದಾರೆ.

ಭಾರತದ ಶ್ರೀಲಂಕಾ ಪ್ರವಾಸ ಟೀಮ್ ಇಂಡಿಯಾ ಶ್ರೀಲಂಕಾದಲ್ಲಿ ಮೂರು ಏಕದಿನ ಮತ್ತು ಮೂರು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಈ ಎಲ್ಲಾ ಪಂದ್ಯಗಳನ್ನು ಕೊಲಂಬೊದ ಆರ್.ಸಿ. ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸವು ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯಗಳನ್ನು ಜುಲೈ 13, 16 ಮತ್ತು 19 ರಂದು ಆಡಿದರೆ, ಟಿ 20 ಸರಣಿಯನ್ನು ಜುಲೈ 22, 24 ಮತ್ತು 27 ರಂದು ಆಡಲಾಗುವುದು.

ಭಾರತೀಯ ತಂಡ: ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರಿತುರಾಜ್ ಗಾಯಕವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್‌ಕೀಪರ್) ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ಕೆ.ಗೌತಮ್, ಕ್ರಿನಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ.

ಭಾರತ- ಶ್ರೀಲಂಕಾ ಏಕದಿನ ಸರಣಿ ಮೊದಲನೇ ಪಂದ್ಯ – ಜುಲೈ 13 ಎರಡನೇ ಪಂದ್ಯ – ಜುಲೈ 16 ಮೂರನೇ ಪಂದ್ಯ – ಜುಲೈ 18

Published On - 7:22 pm, Fri, 2 July 21

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ