ಲಾಕ್ಡೌನ್ ಮುಂದುವರಿಯುತ್ತಿದ್ದರೆ ಮಾನವರು ಹೇಗೆ ಕಾಣಿಸಬಹುದು? ವೈರಲ್ ಆಯ್ತು ಯುವತಿಯ ಫೋಟೋ
ಚಿತ್ರದಲ್ಲಿ ನೋಡುವಂತೆ ಮಹಿಳೆಯು ಹೆಚ್ಚಿನ ತೂಕವನ್ನು ಹೊಂದಿದ್ದಾಳೆ. ಚರ್ಮವೆಲ್ಲಾ ಸುಕ್ಕಾಗಿದೆ. ತ್ವಚೆ ಹಾಳಾಗಿದೆ, ಕೂದಲು ಉದುರುವ ಸಮಸ್ಯೆಯಿಂದ ತಲೆ ಕೂದಲುಗಳು ತೆಳ್ಳಗಾಗಿವೆ. ಲಾಕ್ಡೌನ್ ಜೀವನ ಶೈಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಫೋಟೋ ತಿಳಿಸುತ್ತಿದೆ
ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ದಪ್ಪಗಾಗಿ ಬಿಟ್ಟಿದ್ದೀವಿ ಎಂಬುದು ಕೆಲವರ ಕೊರಗು. ಹೊರಗಡೆ ಸುತ್ತಾಡದೇ ಮನೆಯಲ್ಲೇ ಇದ್ದುದರಿಂದ ಮಹಿಳೆಯರು ದಪ್ಪಗಾಗುತ್ತಿರುದನ್ನು ನೋಡುತ್ತಿರುವ ಗಂಡಸರು.. ಮನೆ ಬಾಗಿಲ ಪಟ್ಟಿಗಳನ್ನು ಇನ್ನೂ ಅಗಲ ಮಾಡಿಸಬೇಕಾಗುತ್ತೋ ಏನೋ? ಎಂದು ತಮಾಷೆ ಮಾಡುತ್ತಿದ್ದಾರೆ. ಬಹುಶಃ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲೇ ಇದ್ದು ಲ್ಯಾಪ್ಟಾಪ್, ಮೊಬೈಲ್ ಬಿಟ್ರೆ ಟಿವಿ.. ಇದಷ್ಟೇ ಜೀವನವಾಗಿಬಿಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಮುಂದಿನ 5 ವರ್ಷಗಳಲ್ಲಿ ಮುನುಷ್ಯರ ದೇಹದ ತೂಕ ಹೆಚ್ಚಳವಾಗಬಹುದು. ಲಾಕ್ಡೌನ್ ಜೀವನಶೈಲಿ ಮಾನವನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದಕ್ಕೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಅಧ್ಯಯನದ ಪ್ರಕಾರ, ಮನುಷ್ಯರಿಗೆ ಸೂರ್ಯನ ಶಾಖದ ಕೊರತೆ ಹಾಗೂ ಬೆಳಕಿನ ಕೊರತೆ ದೇಹದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು? ಇದೇ ರೀತಿ ಲಾಕ್ಡೌನ್ ಮುಂದುವರೆದರೆ ಮನುಷ್ಯರು ಹೇಗೆ ಕಾಣಿಸಬಲ್ಲರು ಎಂಬುದನ್ನು ತೋರಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಚಿತ್ರದಲ್ಲಿ ನೋಡುವಂತೆ ಮಹಿಳೆಯು ಹೆಚ್ಚಿನ ತೂಕವನ್ನು ಹೊಂದಿದ್ದಾಳೆ. ಚರ್ಮವೆಲ್ಲಾ ಸುಕ್ಕಾಗಿದೆ. ತ್ವಚೆ ಹಾಳಾಗಿದೆ, ಕೂದಲು ಉದುರುವ ಸಮಸ್ಯೆಯಿಂದ ತಲೆ ಕೂದಲುಗಳು ತೆಳ್ಳಗಾಗಿವೆ. ಲಾಕ್ಡೌನ್ ಜೀವನ ಶೈಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಫೋಟೋ ತಿಳಿಸುತ್ತಿದೆ.
Ah yes because sitting inside an office building is what keeps us healthy but sitting inside the house is bad that makes sense very credible totally not at all made up pic.twitter.com/GUqj0CrTR0
— Peach Swisher Pt. 3 (@peachmilfshake) July 1, 2021
ಮನೆಯಿಂದ ಕೆಲಸ ಮಾಡುತ್ತಿರುವುದನ್ನು ನಾವು ವಿರೋಧಿಸುತ್ತಿಲ್ಲ. ಬದಲಾಗಿ ಉದ್ಯೋಗದ ಸಮಯದಲ್ಲಿ ವಿರಾಮವನ್ನು ತೆಗೆದುಕೊಳ್ಳಿ. ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬಾರದು. ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಲಾಕ್ಡೌನ್ ಜನರ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಜತೆಗೆ ಆರೋಗ್ಯದ ಮೇಲೆ ಉಂಟಾದ ಕೆಲವು ಪರಿಣಾಮಗಳನ್ನು ತಿಳಿಸಿದ್ದಾರೆ.
*ತೂಕ ಹೆಚ್ಚಳ *ಒಳ್ಳೆಯ ನಿದ್ರೆ ಇಲ್ಲದಿರುವುದು *ಕಡಿಮೆ ಸೂರ್ಯನ ಶಾಖದಿಂದ ವಿಟಮಿನ್ ಡಿ ಕೊರತೆ *ಮಾನಸಿಕ ಒತ್ತಡ ಮತ್ತು ಆತಂಕ
ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸಲಹೆಗಳನ್ನು ವೈದ್ಯರು ಸೂಚಿಸಿದ್ದಾರೆ. ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಯೋಗಾಭ್ಯಾಸವನ್ನು ಪ್ರತಿನಿತ್ಯ ಮಾಡಿ. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Viral Photo: 20 ಅಡಿ ಆಳದ ಬಾವಿಯಲ್ಲಿ ಮುಖವನ್ನಷ್ಟೆ ಮೇಲೆತ್ತಿ ನೋಡುತ್ತಿದೆ ಚಿರತೆ! ಅದ್ಭುತ ಚಿತ್ರ ವೈರಲ್
Published On - 12:25 pm, Sun, 4 July 21