ಉತ್ತರಾಖಂಡ ಹೊಸ ಸಿಎಂ ಪುಷ್ಕರ್ ಸಿಂಗ್ ದಾಮಿ ಟ್ವೀಟ್ ಮಾಡಿದ್ದ ಅಖಂಡ ಭಾರತದ ಭೂಪಟದಲ್ಲಿ ಲಡಾಖ್, ಪಿಒಕೆ ಇರಲಿಲ್ಲ
ಇಂದಷ್ಟೇ ಉತ್ತರಾಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಟಿಮಾ ವಿಧಾನಸಭಾ ಕ್ಷೇತ್ರದ ಶಾಸಕ ಪುಷ್ಕರ್‌ಸಿಂಗ್ ದಾಮಿ ಅವರ 2015ರ ಸ್ವಾತಂತ್ರ್ಯ ದಿನಕ್ಕೂ ಒಂದು ದಿನ ಮೊದಲಿನ ‘ಅಖಂಡ ಭಾರತ’ ಟ್ವೀಟ್ ವೈರಲ್ ಆಗುತ್ತಿದೆ.
ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಅಧಿಕಾರಕ್ಕೆ ಬರುವ ಹೊತ್ತಲ್ಲೇ ವಿವಾದದ ಸುಳಿಗೆ ಸಿಲುಕಿದ್ದಾರೆ. 2015ರಲ್ಲಿ ಅವರು ಮಾಡಿದ್ದ ಟ್ವೀಟ್ ಒಂದು ಸದ್ಯ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಪ್ರಸ್ತಾಪವಾಗುವಂತೆ ಮಾಡಿದೆ. 2015ರ ಸ್ವಾತಂತ್ರ್ಯ ದಿನಕ್ಕೂ ಒಂದು ದಿನ ಮೊದಲು ಪುಷ್ಕರ್ ಸಿಂಗ್ ದಾಮಿ ‘ಅಖಂಡ ಭಾರತ’ ಎಂಬ ಭೂಪಟದ ಚಿತ್ರವನ್ನು ಟ್ವಿಟರ್ನಲ್ಲಿ ಲಗ್ಗತ್ತಿಸಿದ್ದರು. ಸದ್ಯ ಆ ಟ್ವೀಟ್ ಇಟ್ಟುಕೊಂಡು ಟ್ವಿಟ್ಟಿಗರು ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಅವರ ಕಾಲೆಳೆಯುತ್ತಿದ್ದಾರೆ. ಇಂದಷ್ಟೇ ಉತ್ತರಾಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಕಟಿಮಾ ವಿಧಾನಸಭಾ ಕ್ಷೇತ್ರದ ಶಾಸಕ ಪುಷ್ಕರ್‌ಸಿಂಗ್ ದಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಖಂಡ ಭಾರತದ ಪರಿಕಲ್ಪನೆಯಲ್ಲಿ ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ 2015ರಲ್ಲಿ ಈ ಟ್ವೀಟ್ ಮಾಡಿದ್ದರು. ಅವರು ಹಂಚಿಕೊಂಡಿದ್ದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಲಡಾಕ್ ಮಿಸ್ ಆಗಿತ್ತು. ಜತೆಗೆ ನಿಖರವಾಗಿ ಗಡಿಗಳನ್ನು ಗುರುತಿಸರಾಗಿರಲಿಲ್ಲ. ಅಖಂಡ ಭಾರತ- ಪ್ರತಿಯೊಬ್ಬ ದೇಶಭಕ್ತನ ಕನಸು ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
— Pushkar Singh Dhami (@pushkardhami) August 14, 2015
Shouldn’t BJP be making this man Foreign Minister of India rather than CM of a tiny state like Uttarakhand? Then, we can all move to 3rd World War! pic.twitter.com/7wkaDq5Y7u
— Jawhar Sircar (@jawharsircar) July 4, 2021
@MumbaiPolice please file a case & arrest this guy for depicting distorted map of India. It is not showing Aksai Chin & PoK in Indian boundaries.
— Truth Prevails ?? ?? (@TruthPrevail3) July 3, 2021
ಮಾಜಿ ಐಎಎಸ್ ಅಧಿಕಾರಿ, ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸಿರ್ಕಾ, 2015ರ ಪುಷ್ಕರ್ ಸಿಂಗ್ ದಾಮಿ ಅವರ ಟ್ವೀಟ್ನ ಸ್ಕ್ರೀನ್ಶಾಟ್ ಹಂಚಿಕೊಂಡು ಇವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಮಾಡುವ ಬದಲು ಭಾರತದ ವಿದೇಶಾಂಗ ಸಚಿವರನ್ನಾಗಿ ಮಾಡಬೇಕಿತ್ತು ಎಂದು ಕಾಲೆಳೆದಿದ್ದಾರೆ. ಆಗ ಮೂರನೇ ವಿಶ್ವಯುದ್ಧವೂ ನಡೆಯಬಹುದಿತ್ತೇನೋ ಎಂದು ಅವರು ಟಾಂಗ್ ನೀಡಿದ್ದಾರೆ.
4 ತಿಂಗಳಲ್ಲಿ ಎರಡು ಬಾರಿ ಸಿಎಂ ಬದಲಾವಣೆ ಉತ್ತರಾಖಂಡ್ನಲ್ಲಿ ಇನ್ನೇನು ವರ್ಷದೊಳಗೇ ವಿಧಾನಸಭೆ ಚುನಾವಣೆ ಬರಲಿದೆ. ಆದರೆ ಬಿಜೆಪಿ ಕೇವಲ ನಾಲ್ಕೇ ತಿಂಗಳಲ್ಲಿ ಇದು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನು ಬದಲಿಸುತ್ತಿದೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದ ತ್ರಿವೇಂದ್ರ ಸಿಂಗ್ ರಾವತ್ ಮಾರ್ಚ್ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಇವರ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಕೆಲವರು ಹೈಕಮಾಂಡ್ಗೂ ದೂರು ನೀಡಿದ್ದರು. ರಾಜಕೀಯ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ, ಮುಂಬರುವ ವಿಧಾನಸಭಾ ಚುನಾವಣೆಗೆ ಯಾವುದೇ ತೊಂದರೆಯಾಗಬಾರದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಕೊಟ್ಟಿದ್ದರು. ಬಳಿಕ ತೀರಥ್ ಸಿಂಗ್ ರಾವತ್ ಆ ಹುದ್ದೆಗೆ ಏರಿದ್ದರು.
ಮುಖ್ಯಮಂತ್ರಿಯಾದ ಬಳಿಕ ತೀರಥ್ ಸಿಂಗ್ ಒಂದೆರಡು ವಿಚಾರಗಳಲ್ಲಿ ತೀವ್ರವಾದ ವಿವಾದ ಸೃಷ್ಟಿಸಿದ್ದರು. ಮೊದಲು ಕುಂಭಮೇಳಕ್ಕೆ ಕೊವಿಡ್ 19 ಟೆಸ್ಟ್ ರಿಪೋರ್ಟ್ ಅಗತ್ಯವಿಲ್ಲ ಎಂದು ಘೋಷಿಸಿ ಟೀಕೆಗೆ ಗುರಿಯಾದರು. ಎರಡನೆಯದಾಗಿ ಮಹಿಳೆಯರು ಹರಿದ ಜೀನ್ಸ್ ಧರಿಸುವ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿ ಕಟು ವಿರೋಧಕ್ಕೆ ಗುರಿಯಾದರು. ಹಾಗೇ, ಭಾರತವನ್ನು ಆಳಿದ್ದವರು ಬ್ರಿಟಿಷರಲ್ಲ, ಅಮೆರಿಕನ್ನರು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು. ನಾಲ್ಕೇ ತಿಂಗಳ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದವರು ಇದೀಗ ರಾಜೀನಾಮೆ ನೀಡುವಂತಾಗಿತ್ತು.
ಇದನ್ನೂ ಓದಿ:
ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ; ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪ್ತ ಇವರು
(Uttarakhand new CM Pushkar Singh Damar 2015 Akhand Bharat tweet goes viral)