ಇದೇನಾಶ್ಚರ್ಯ! ಈ ವ್ಯಕ್ತಿ ಕುಂಭಕರ್ಣನಂತೆ ವರ್ಷದ 300 ದಿನ ನಿದ್ದೆ ಮಾಡ್ತಾರಂತೆ!

TV9 Digital Desk

| Edited By: shruti hegde

Updated on:Jul 13, 2021 | 1:38 PM

ಇವರ ಹೆಸರು ಪುರ್ಖಾರಾಮ್​. ಇವರಿಗೆ 42 ವರ್ಷ ವಯಸ್ಸು. ತಮ್ಮ 23 ವಯಸ್ಸಿನಲ್ಲಿ ಅವರಿಗೆ ಆಕ್ಸಿಸ್​ ಹೈಪರ್​ಸೋಮ್ನಿಯಾ ಖಾಯಿಲೆ ತಗಲುತ್ತದೆ. ಇದರಿಂದ ಅವರು ಹೆಚ್ಚು ನಿದ್ರೆಗೆ ಜಾರುತ್ತಾ ಹೋಗುತ್ತಾರೆ.

ಇದೇನಾಶ್ಚರ್ಯ! ಈ ವ್ಯಕ್ತಿ ಕುಂಭಕರ್ಣನಂತೆ ವರ್ಷದ 300 ದಿನ ನಿದ್ದೆ ಮಾಡ್ತಾರಂತೆ!

ಸಾಮಾನ್ಯವಾಗಿ ಅನಾರೋಗ್ಯದ ಸಮಸ್ಯೆಯಿದ್ದಾಗ ರಾತ್ರಿ ನಿದ್ರೆಯೇ ಬರುವುದಿಲ್ಲ ಎಂಬುದು ಹಲವರ ಚಿಂತೆ. ನಿದ್ದೆ ಮಾಡಲು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಅತಿಯಾದ ನಿದ್ರೆಯೇ ಇಲ್ಲೋರ್ವರಿಗೆ ಖಾಯಿಲೆಯಾಗಿದೆ. ರಾಜಸ್ಥಾನದ ( Rajasthan) ಜೋಧ್ ಪುರದ ನಾಗೌರ್​ನ ವ್ಯಕ್ತಿ ಸರಿಸುಮಾರು ವರ್ಷದ 300 ದಿನ ನಿದ್ದೆಗೆ ಜಾರುತ್ತಾರಂತೆ. ವಿಷಯ ಕೇಳಿದಾಕ್ಷಣ ವಿಚಿತ್ರ ಅನ್ನಿಸುತ್ತಿರಬಹುದು. ಆದರೆ ಅವರಿಗೆ ಆಕ್ಸಿಸ್​  ಹೈಪರ್​ಸೋಮ್ನಿಯಾ(axis hypersomnia) ಎಂಬ ಖಾಯಿಲೆ ಇದೆ. ಅದು ಮಾನಸಿಕ ಸ್ಥಿತಿಯ(Mental Health) ಮೇಲೆ ಪರಿಣಾಮ ಬೀರುವಂತದ್ದು. ಈ ವ್ಯಕ್ತಿಯು ಅಪರೂಪದಲ್ಲಿ ಅಪರೂಪದ ಖಾಯಿಲೆಗೆ ತುತ್ತಾಗಿರುವುದರಿಂದ ಹೆಚ್ಚು ದಿನ ನಿದ್ರೆಯಲ್ಲಿಯೇ ಇರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತಂತೆ ವರದಿಯಿಂದ ಮಾಹಿತಿ ಲಭ್ಯವಾಗಿದೆ.

ಇವರ ಹೆಸರು ಪುರ್ಖಾರಾಮ್​. ಇವರಿಗೆ 42 ವರ್ಷ ವಯಸ್ಸು. ತಮ್ಮ 23 ವಯಸ್ಸಿನಲ್ಲಿ ಅವರಿಗೆ ಆಕ್ಸಿಸ್​ ಹೈಪರ್​ಸೋಮ್ನಿಯಾ ಖಾಯಿಲೆ ತಗಲುತ್ತದೆ. ಇದರಿಂದ ಅವರು ಹೆಚ್ಚು ನಿದ್ರೆಗೆ ಜಾರುತ್ತಾ ಹೋಗುತ್ತಾರೆ. ಒಂದು ಬಾರಿ ನಿದ್ರೆಗೆ ಜಾರಿದರೆ ಅವರು 25 ದಿನಗಳ ಕಾಲ ನಿದ್ರೆ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಊರಿನವರು ಪುರ್ಖಾರಾಮ್​ರನ್ನು ಕುಂಭಕರ್ಣ ಎಂದು ಕರೆಯುತ್ತಾರೆ.

ಇವರು ಭದ್ವಾ ಗ್ರಾಮದ ನಿವಾಸಿ. ಕಿರಾಣಿ ಅಂಗಡಿಯನ್ನು ನಡೆಸುತ್ತಾರೆ. ಆದರೆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವುದರಿಂದ ವರ್ಷದಲ್ಲಿ 5 ದಿನ ಮಾತ್ರ ತನ್ನ ಅಂಗಡಿಯನ್ನು ತೆರೆಯಲು ಅವಕಾಶ ಲಭಿಸುತ್ತದೆ. ಈ ರೋಗ ಲಗುಲಿದ ಪ್ರಾರಂಭದಲ್ಲಿ ಪುರ್ಖಾರಾಮ್​ ಅವರು 5ರಿಂದ 7 ದಿನಗಳವರೆಗೆ ನಿದ್ರೆ ಮಾಡುತ್ತಿದ್ದರು. ಆರಂಭದಲ್ಲಿ ಕುಟುಂಬದ ಸದಸ್ಯರು ಅವರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದರು. ನಿದ್ದೆಯ ಮಂಪರಿನಲ್ಲಿಯೇ ಇರುತ್ತಿದ್ದರು. ಆದರೆ ಖಾಯಿಲೆಯ ತೀವ್ರ ಪರಿಣಾಮದಿಂದ 20ರಿಂದ 25 ದಿನಗಳ ಕಾಲ ಎಚ್ಚರಗೊಳ್ಳುವುದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

2015ರಿಂದ ಈ ಖಾಯಿಲೆ ತೀವ್ರವಾಯಿತು ಪುರ್ಖಾರಾಮ್​ ನಿದ್ರಿಸುವ ಸಮಯವನ್ನು ನೋಡಿದ ಮನೆಯವರು ಭಯಗೊಂಡು ವೈದ್ಯರಲ್ಲಿ ಕರೆದೊಯ್ದಿದ್ದಾರೆ. ಆದರೆ ಆರಂಭದಲ್ಲಿ ವೈದ್ಯರು ಈ ರೋಗವನ್ನು ಗಮನಿಸಿರಲಿಲ್ಲ. ದಿನ ಕಳೆದಂತೆ ಪುರ್ಖಾರಾಮ್​ ಅವರ ನಿದ್ರೆಯ ಅವಧಿ ಹೆಚ್ಚಾಗುತ್ತಾ ಸಾಗಿತು. ಆಗಾಗ 25 ದಿನಗಳವರೆಗೆ ನಿದ್ರಿಸಲು ಪ್ರಾರಂಭಿಸಿದರು. ಈ ರೋಗ ತಗಲುವುದು ಬಹಳ ವಿರಳ. ಅಪರೂಪದಲ್ಲಿ ಅಪರೂಪದ ಕಾಯಿಲೆ ಎಂದು ವೈದ್ಯರು ಹೇಳಿದ್ದಾರೆ. 2015ರಿಂದ ಪುರ್ಖಾರಾಮ್​​ ಅವರ ನಿದ್ರೆಯ ಸಮಯ ಹೆಚ್ಚಾಯಿತು. 18 ದಿನಗಳ ಕಾಲ ನಿದ್ರೆ ಮಾಡುತ್ತಿದ್ದರು. ಆದರೆ ಇದೀಗ 20 ರಿಂದ 25 ದಿನಗಳವರೆಗೆ ನಿದ್ರೆ ಮಾಡುತ್ತಾರೆ.

ನಿದ್ರೆಗೆ ಜಾರುವ ಒಂದು ದಿನದ ಮೊದಲು ಆಹಾರ ನಿದ್ರೆಗೆ ಜಾರುವ ಒಂದು ದಿನದ ಮೊದಲು ಪುರ್ಖಾರಾಮ್​ ಅವರು ತಲೆನೋವಿನಿಂದ ಬಳಲುತ್ತಾರೆ. ಒಮ್ಮೆ ನಿದ್ರೆಗೆ ಜಾರಿದರೆ ಅವರು ಎಚ್ಚರಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪೂರ್ಖಾರಾಮ್​ ಅವರು ನಿದ್ದೆ ಮಾಡುವಾಗ ಅವರ ಸಂಬಂಧಿಕರು ಊಟ ಮಾಡಿಸುತ್ತಾರೆ.​ ಅವರ ಅನಾರೋಗ್ಯಕ್ಕೆ ಇನ್ನೂ ಚಿಕಿತ್ಸೆ ಸಿಕ್ಕಿಲ್ಲ. ಮೊದಲಿನಂತೆಯೇ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅವರ ತಾಯಿ ಕನ್ವಾರಿ ದೇವಿ ಮತ್ತು ಪತ್ನಿ ಲಚ್ಮಿ ದೇವಿ ವಿಶ್ವಾಸದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada