ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಹುಟ್ಟುಹಬ್ಬ; ಶುಭ ಕೋರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಶಿಕ್ಷಣ ಸಂತ, ಅನ್ನ ದಾಸೋಹಿ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿಯವರ ಜನ್ಮದಿನದಂದು ನನ್ನ ಗೌರವಪೂರ್ಣ ಪ್ರಣಾಮಗಳು. -ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಹುಟ್ಟುಹಬ್ಬ; ಶುಭ ಕೋರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ನಿರ್ಮಲಾನಂದ ಸ್ವಾಮೀಜಿ
Follow us
| Updated By: ಆಯೇಷಾ ಬಾನು

Updated on: Jul 20, 2021 | 11:42 AM

ಆದಿಚುಂಚನಗಿರಿ ಮಠದ 72ನೇ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಪುಟದಲ್ಲಿ ಕೃಷಿ ಖಾತೆಯ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನೂತನ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಫೇಸ್ಬುಕ್ ಮೂಲಕ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಶಿಕ್ಷಣ ಸಂತ, ಅನ್ನ ದಾಸೋಹಿ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿಯವರ ಜನ್ಮದಿನದಂದು ನನ್ನ ಗೌರವಪೂರ್ಣ ಪ್ರಣಾಮಗಳು. ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಪೂಜ್ಯರ ಆಶೀರ್ವಾದಗಳು ಸದಾ ನಮ್ಮ ನಾಡಿನ ಮೇಲಿರಲಿ ಎಂದು ಪ್ರಾರ್ಥನೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಾಜ್ಯದ ನಾನಾ ಮಠಾಧೀಶರು, ಗಣ್ಯರು, ಆದಿಚುಂಚನಗಿರಿ ಮಠದ ಭಕ್ತರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಆದಿಚುಂಚನಗಿರಿ ಮಠದ 72ನೇ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಜೀವನ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿ ಚುಂಚನಗಿರಿ ಮಠವು ಕರ್ನಾಟಕ ರಾಜ್ಯ ಒಂದೆ ಅಲ್ಲದೆ ದಕ್ಷಣ ಭಾರತ ಪ್ರಸಿದ್ಧ ಮಠವಾಗಿದೆ. ಧರ್ಮ ಕ್ಷೇತ್ರ ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಆದಿ ಚುಂಚನಗಿರಿ ಮಠವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ದಾಸೋಹ ಮತ್ತು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಶ್ರಮಿಸಿದರು.

ತಮ್ಮ ನಂತರ 475 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, ಅಂಧ ಮಕ್ಕಳ ಶಾಲೆ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು, ಶ್ರೀಕ್ಷೇತ್ರದಲ್ಲಿರುವ ಅದ್ಭುತ ದೇವಾಲಯವನ್ನು, ಶ್ರೀಕ್ಷೇತ್ರದ ಆಸ್ತಿಪಾಸ್ತಿ, ಭಕ್ತಾದಿಗಳ ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನು ಮುಂದಾಲೋಚನೆ ಮಾಡಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಒಪ್ಪಿಸಬೇಕೆಂದು ಬಯಸಿದ್ದರು ಅದರಂತೆ ಈ ಎಲ್ಲ ಜವಾಬ್ದಾರಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅತ್ಯಂತ ಪ್ರೀತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Nirmalanandanatha Swamiji

ನಿರ್ಮಲಾನಂದ ಸ್ವಾಮೀಜಿ

1969 ಜುಲೈ 20 ರಂದು ಜನಿಸಿದ ನಿರ್ಮಲಾನಂದ ಸ್ವಾಮಿಗಳ ಪೂರ್ವದ ಹೆಸರು ನಾಗರಾಜ. ಇವರು ಜನಿಸಿದ್ದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೀಕನಹಳ್ಳಿಯಲ್ಲಿ. ಶ್ರೀನರಸೇಗೌಡ ಮತ್ತು ಶ್ರೀಮತಿ ನಂಜಮ್ಮನವರು ಸ್ವಾಮಿಗಳ ಮಾತಾಪಿತೃಗಳು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲಮೋ ಪಡೆದರು. ಮೈಸೂರಿನ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದರು. ಮದ್ರಾಸ್‌ನ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್ಸ್‌ಇಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ) ಎಂ.ಟೆಕ್ ಪದವಿ ಪಡೆದರು.

ಐಐಟಿಯಲ್ಲಿ ಪದವಿ ಪಡೆದಿದ್ದ ಶ್ರೀಗಳಿಗೆ ಕೇಂದ್ರ ಜಲಶಕ್ತಿ ಸಂಶೋಧನಾಲಯ ಪೂನದಲ್ಲಿ ವಿಜ್ಞಾನಿಯಾಗಿ ಉದ್ಯೋಗ ಲಭಿಸಿತು. ಆದರೆ, ಸ್ವಾಮೀಜಿ ಎಷ್ಟೇ ಶಿಕ್ಷಣ ಪಡೆದಿದ್ದರೂ, ಉದ್ಯೋಗ ದೊರೆತಿದ್ದರೂ ಅವರ ಮನಸ್ಸು ಲೌಕಿಕಕ್ಕಿಂತಲೂ ಪಾರಮಾರ್ಥಿಕದ ಕಡೆ ಒಲಿಯಿತು. ಸಮಾಜಸೇವೆಗಾಗಿ ಅವರ ಮನಸ್ಸು ತುಡಿಯಿತು. ಬಾಲಗಂಗಾಧರನಾಥ ಸ್ವಾಮಿಗಳು ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದರೆ ಸ್ವಾಮಿ ನಿರ್ಮಲಾನಂದರು ಆ ಚಿನ್ನದಗರಿಗೆ ಸಾತ್ವಿಕ ಲೇಪಮಾಡಿ ಗಟ್ಟಿಗೊಳಿಸುತ್ತಿದ್ದಾರೆ.

ಸಮಾಜಕ್ಕೆ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಸೇವೆಗಳನ್ನು ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಅನ್ನು ಏಪ್ರಿಲ್ 30, 2016 ರಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನೀಡಿ ಗೌರವಿಸಿತು. ಇಂದು ಸಮಾಜದ ಎಲ್ಲಾ ವರ್ಗದವರಿಗೆ ವಿಶೇಷವಾಗಿ ದೀನದಲಿತರಿಗೆ ಸೌಹಾರ್ದತೆ ಮತ್ತು ಜ್ಞಾನದ ಸಂದೇಶವನ್ನು ಹರಡುವ ಪರಮಪೂಜ್ಯ ಶ್ರೀ ಮಹಾಗುರುಗಳ ಪ್ರಾರಂಭಿಸಿದ ಕೆಲಸವನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಪಟ್ಟುಬಿಡದೆ ಮುಂದುವರಿಸುತ್ತಿದ್ದಾರೆ.

ಆಧುನಿಕ ವಿಜ್ಞಾನ ಮತ್ತು ತಾಂತ್ರಿಕ ಜ್ಞಾನ ಹಾಗೂ ಪ್ರಾಚೀನ ಪರಂಪರೆಯ ಎಲ್ಲದರಲ್ಲೂ ಸ್ವಾಮಿಗಳು ಪಾಂಡಿತ್ಯವನ್ನು ಹೊಂದಿದ್ದಾರೆ. ಸಂಸ್ಕೃತ, ಪ್ರಾಕೃತ, ವೇದ ವಿಜ್ಞಾನಗಳನ್ನು ಮೈಗೂಡಿಸಿಕೊಂಡಿರುವ ಸ್ವಾಮಿಗಳ ಜ್ಞಾನ ಅಪಾರ. ಸಂಗೀತ, ಲಲಿತಕಲೆ ಮತ್ತು ಸಾಹಿತ್ಯದ ಬಗ್ಗೆ ಸ್ವಾಮಿಗಳಿಗೆ ಇರುವ ಆಳವಾದ ಜ್ಞಾನವು ಅವರ ಆಧ್ಯಾತ್ಮಿಕ ಪ್ರವಚನಗಳಲ್ಲಿ ಪ್ರತಿಫಲಿಸುತ್ತದೆ.

ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿನ ಲಕ್ಷಾಂತರ ಭಕ್ತರ ಪ್ರಜ್ಞೆಯನ್ನು ಬೆಳಗಿಸುತ್ತಿದ್ದಾರೆ. ಜ್ಞಾನ ಮತ್ತು ಶಾಂತಿ ಸೌಹಾರ್ದ ಸಂದೇಶವನ್ನು ವಿಶ್ವದೆಲ್ಲಡೆ ಹರಡುತ್ತಿದ್ದಾರೆ.

Nirmalanandanatha Swamiji

ನಿರ್ಮಲಾನಂದ ಸ್ವಾಮೀಜಿ

ಇದನ್ನೂ ಓದಿ: ಸಂಪುಟ ಬದಲಾದ್ರೆ ನಾನೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವೆ: ಶಾಸಕ ದುರ್ಯೋಧನ ಐಹೊಳೆ

ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ