ಸಂಪುಟ ಬದಲಾದ್ರೆ ನಾನೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವೆ: ಶಾಸಕ ದುರ್ಯೋಧನ ಐಹೊಳೆ

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ಸಾಧ್ಯತೆ ಸುದ್ದಿ ಬೆನ್ನಲ್ಲೆ ಸಿಎಂ ಸೀಟಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಆದರೆ ಸದ್ಯ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ನಿಗೂಢವಾಗಿದೆ.

ಸಂಪುಟ ಬದಲಾದ್ರೆ ನಾನೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುವೆ: ಶಾಸಕ ದುರ್ಯೋಧನ ಐಹೊಳೆ
ಶಾಸಕ ದುರ್ಯೋಧನ ಐಹೊಳೆ

ಬೆಳಗಾವಿ: ಸಂಪುಟದಲ್ಲಿ ಬದಲಾವಣೆ ಮಾಡಿದರೆ ನನಗೂ ಮಂತ್ರಿ ಸ್ಥಾನ ಕೊಡಿ ಅಂತಾ ಕೇಳುತ್ತೇನೆ ಅಂತ ಬೆಳಗಾವಿಯಲ್ಲಿ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ ನೀಡಿದ್ದಾರೆ. ಮೂರು ಬಾರಿ ನಾನು ಶಾಸಕನಾಗಿ ಆಯ್ಕೆ ಆಗಿದ್ದೇನೆ. ಸಂಪುಟದಲ್ಲಿ ಬದಲಾವಣೆ ಮಾಡಿದರೆ ನನಗೂ ಮಂತ್ರಿ ಸ್ಥಾನ ಕೊಡಿ ಅಂತಾ ಕೇಳುತ್ತೇನೆ. ನಮಗೂ ಮಂತ್ರಿ ಆಗಬೇಕೆಂಬ ಅಪೇಕ್ಷೆ ಇದೆ. ನಾನೂ ಮಂತ್ರಿ ಸ್ಥಾನ ಕೇಳುತ್ತೇನೆ. ಇಲ್ಲವಾದರೆ ಅನಿವಾರ್ಯವಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುವೆ ಅಂತ ಶಾಸಕ ದುರ್ಯೋಧನ ಐಹೊಳೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ಸಾಧ್ಯತೆ ಸುದ್ದಿ ಬೆನ್ನಲ್ಲೆ ಸಿಎಂ ಸೀಟಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಆದರೆ ಸದ್ಯ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ನಿಗೂಢವಾಗಿದೆ. ಈಗಾಗಲೇ ನಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ದೆಹಲಿಗೆ ಹೈಕಮಾಂಡ್ ಕರೆಯದಿದ್ದರೂ ಹಲವು ಭಾರಿ ಭೇಟಿ ಕೊಡುತ್ತಿದ್ದಾರೆ.

ಕೆಲ ಶಾಸಕರು ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಸೀಟ್ಗಾಗಿ 2,000 ಕೋಟಿ ಕೊಡಲು ಓಡಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಉಮೇಶ್ ಕತ್ತಿ ಕೂಡಾ ನಿನ್ನೆ ಬಹಿರಂಗವಾಗಿಯೇ ನಾನು ಸಿಎಂ ಆಗುವ ಎಲ್ಲಾ ಲಕ್ಷಣ ಹೊಂದಿದ್ದೇನೆ ಎಂದಿದ್ದರು. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಭಾರಿ ಪೈಪೋಟಿ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ

‘ಲೀಡರ್ ಚೇಂಜ್’ಗೆ ಸಜ್ಜಾಗಿ ಬಿಟ್ಟಿದೆಯಾ ಕಮಲ ಹೈಕಮಾಂಡ್? ನಿಜಕ್ಕೂ ‘ಕೇಸರಿ ಮನೆ’ಯಲ್ಲಿನ ಬೆಳವಣಿಗೆಗಳು ಏನು? ಇಲ್ಲಿದೆ ಒಂದು ಇಣುಕು ನೋಟ

ಆಪ್ತ ಸಚಿವರ ಜತೆ ಭೋಜನಕೂಟದಲ್ಲಿ ಸಿಎಂ ಯಡಿಯೂರಪ್ಪ ಮೌನ, ಟೆನ್ಷನ್; ದಿಲ್ಲಿ ಭೇಟಿ ಮುಂದೂಡಿದ ನಳೀನ್ ಕುಮಾರ್ ಕಟೀಲ್

(MLA Duryodhan Aihole says I will demand a ministerial post in belagavi)