ದೆಹಲಿ ಆಂಗ್ಲ ಪತ್ರಿಕೆಯಲ್ಲಿ ರಾಜ್ಯ ಬಿಜೆಪಿ ಸಚಿವೆಯಿಂದ ಮುಖಪುಟ ಜಾಹೀರಾತು! ಆದ್ರೆ ಯಡಿಯೂರಪ್ಪ ಫೋಟೋ ಮಾಯ! ಏನಿದರ ಮಾಯೆ?

Karnataka Minister Shashikala Jolle: ಸಚಿವೆ ಜೊಲ್ಲೆ ನೀಡಿರುವ ಮುಖಪುಟ ಜಾಹೀರಾತು ಪಕ್ಷದೊಳಗಿನ ಭಿನ್ನಮತೀಯ ಚಟುವಟಿಕೆ ಸಮ್ಮುಖದಲ್ಲಿ ಬಿಜೆಪಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇರುಸುಮುರುಸು ತಂದಿಟ್ಟದ್ದರೆ ಇತರೆ ನಾಯಕರಿಗೆ ಆತಂಕ ತಂದೊಡ್ಡಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿದ್ದುಕೊಂಡು ಶಶಿಕಲಾ ಜೊಲ್ಲೆ ಸಹ ದೆಹಲಿ ಕೋಟೆಯಲ್ಲಿ ಬಂಡಾಯದ ಬಾವುಟ ಹಾರಿಸಿಬಿಟ್ಟರಾ ಎಂಬ ಆತಂಕ ಮನೆ ಮಾಡಿದೆ.

ದೆಹಲಿ ಆಂಗ್ಲ ಪತ್ರಿಕೆಯಲ್ಲಿ ರಾಜ್ಯ ಬಿಜೆಪಿ ಸಚಿವೆಯಿಂದ ಮುಖಪುಟ ಜಾಹೀರಾತು! ಆದ್ರೆ ಯಡಿಯೂರಪ್ಪ ಫೋಟೋ ಮಾಯ! ಏನಿದರ ಮಾಯೆ?
ಇಂಡಿಯನ್​ ಎಕ್ಸ್​ಪ್ರೆಸ್​​ ದೆಹಲಿ ಆವೃತ್ತಿಯಲ್ಲಿ ರಾಜ್ಯ ಬಿಜೆಪಿ ಸಚಿವೆಯಿಂದ ಮುಖಪುಟ ಜಾಹೀರಾತು! ಆದ್ರೆ ಯಡಿಯೂರಪ್ಪ ಫೋಟೋ ಮಾಯ! ಏನಿದರ ಮಾಯೆ?

ಬೆಂಗಳೂರು: ಇತ್ತ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕಾವು ಜೋರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ನಡೆಯಲಿದೆ. ಅವರನ್ನಿಳಿಸಿ, ಇವರನ್ನ ಕೂಡಿಸ್ತಾರಂತೆ ಎಂಬ ಮಾತುಗಳು ರಾಜ್ಯ ಬಿಜೆಪಿಯಲ್ಲಿ ಚಾಲ್ತಿಗೆ ಬಂದು ಯಾವುದೋ ಕಾಲವಾಯಿತು. ಆದರೆ ಅಂತಹ ಮಹತ್ತರ ಬದಲಾವಣೆಗಳು ಮಾತ್ರ ಯಾವುದೂ ಘಟಿಸಿಲ್ಲ ಎಂಬುದು ರಾಜ್ಯದ ಜನಕ್ಕೆ ಮನವರಿಕೆಗೆ ಬರುತ್ತಿದೆ. ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲಿ ಒಂದು ಸಂಚಲನಾತ್ಮಕ ಜಾಹೀರಾತು ನಿನ್ನೆ ಸೋಮವಾರ ಪ್ರಮುಖ ಆಂಗ್ಲ ಪತ್ರಿಕೆಯೊಂದರಲ್ಲಿ ಮುಖಪುಟದಲ್ಲಿ ರಾರಾಜಿಸಿದೆ.

ನಿನ್ನೆ ಸೋಮವಾರ Indian Express Delhi Edition ಆವೃತ್ತಿಯಲ್ಲಿ ಯಡಿಯೂರಪ್ಪ ಸಂಪುಟದ ಸಚಿವೆ ಶಶಿಕಲಾ ಜೊಲ್ಲೆ ಅವರು With best wishes from Jolle Group of Companies ಅಂತಾ ವೈಯಕ್ತಿಕ ನೆಲೆಗಟ್ಟಿನಲ್ಲಿ ಜಾಹೀರಾತು ನೀಡಿದ್ದಾರೆ. ಅದರಲ್ಲಿ ಸಹಕಾರ ಖಾತೆ ಸೃಷ್ಟಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ವಂದನೆಗಳನ್ನು ತಿಳಿಸುತ್ತಾ, ಸಹಕಾರ ಸಚಿವ ಸ್ಥಾನ ಪಡೆದ ಅಮಿತ್​ ಶಾ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಕರ್ನಾಟಕಕ್ಕೆ 6 ಸಚಿವ ಸ್ಥಾನಗಳನ್ನು ದಯಪಾಲಿಸಿ, ರಾಜ್ಯಕ್ಕೆ ಗರಿಷ್ಠ ಸ್ಥಾನಮಾನ ನೀಡಿದ್ದಕ್ಕೆ ಥ್ಯಾಂಕ್ಸ್​ ಅಂದಿದ್ದಾರೆ ತಮ್ಮ ಕಂಪನಿಗಳ ಮೂಲಕ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ (Shashikala Annasaheb Jolle). ಇದರ ಜೊತೆಗೆ ಇಡೀ ಪುಟದಲ್ಲಿ ಹತ್ತಾರು ಬಿಜೆಪಿ ನಾಯಕರ ಫೋಟೋಗಳು ರಾರಾಜಿಸಿವೆ.

ಇದೆಲ್ಲಾ ಓಕೆ! ಆದ್ರೆ ಜಾಹೀರಾತಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಅವರ ಫೋಟೋ ಇಲ್ಲ ಯಾಕೆ ಎಂಬುದು ದಿಲ್ಲಿಯಿಂದ ಹಳ್ಳಿಯವರೆಗೂ ಈಗ ಚರ್ಚೆಯ ಮೇಲೆ ಚರ್ಚೆಯಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಆಯಕಟ್ಟಿನ ಸ್ಥಾನದಲ್ಲಿರುವ ಬಿ ಎಸ್​ ಯಡಿಯೂರಪ್ಪನವರ ಫೋಟೋ ಯಾಕೆ ಜಾಹೀರಾತಿನಲ್ಲಿ (advertisement) ಇಲ್ಲ ಎಂಬುದು ಬಿಎಸ್​​ವೈ ನಿಷ್ಠರಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ. ಇನ್ನು ಯಡಿಯೂರಪ್ಪ ವಿರೋಧಿ ಪಾಳಯದಲ್ಲಿ ಪ್ರಭಾವೀ ನಾಯಕಿ ಶಶಿಕಲಾ ಜೊಲ್ಲೆ ನಮ್ಮ ಕಡೆಯೇನಾದರೂ ವಾಲಿಕೊಂಡರಾ? ಎಂದು ಹುಬ್ಬೇರಿಸಿದ್ದಾರೆ.

ಒಟ್ಟಿನಲ್ಲಿ ಸಚಿವೆ ಜೊಲ್ಲೆ ನೀಡಿರುವ ಮುಖಪುಟ ಜಾಹೀರಾತು ಪಕ್ಷದೊಳಗಿನ ಭಿನ್ನಮತೀಯ ಚಟುವಟಿಕೆ ಸಮ್ಮುಖದಲ್ಲಿ ಬಿಜೆಪಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇರುಸುಮುರುಸು ತಂದಿಟ್ಟಿದ್ದರೆ ಇತರೆ ನಾಯಕರಿಗೆ ಆತಂಕ ತಂದೊಡ್ಡಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿದ್ದುಕೊಂಡು ಶಶಿಕಲಾ ಜೊಲ್ಲೆ ಸಹ ದೆಹಲಿ ಕೋಟೆಯಲ್ಲಿ ಬಂಡಾಯದ ಬಾವುಟ ಹಾರಿಸಿಬಿಟ್ಟರಾ? ಎಂಬ ಆತಂಕ ಮನೆ ಮಾಡಿದೆ. ಆದರೆ ವೈಯಕ್ತಿವಾಗಿ ತಾವು ಈ ಜಾಹೀರಾತು ಕೊಟ್ಟದ್ದೇವೆ. ಹಾಗಾಗಿ ಸಿಎಂ ಫೋಟೋ ಬೇಡ ಅಂತಾ ಹಾಕಿಲ್ಲ ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ.

Karnataka Minister Shashikala Jolle front page advertisement in national daily raises eyebrows in Karnataka bjp

ಯಡಿಯೂರಪ್ಪ ಸಂಪುಟದ ಸಚಿವೆ ಶಶಿಕಲಾ ಜೊಲ್ಲೆ ಅವರು With best wishes from Jolle Group of Companies ಅಂತಾ ವೈಯಕ್ತಿಕ ನೆಲೆಗಟ್ಟಿನಲ್ಲಿ ನೀಡಿರುವ ಜಾಹೀರಾತು

ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ; ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ – ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
(Karnataka Minister Shashikala Jolle front page advertisement in national daily raises eyebrows in Karnataka bjp)