Moon Day 2021: ಇಂದು ಚಂದ್ರನ ದಿನ; ಚಂದ್ರನ ಅಂಗಳದಲ್ಲಿ ಮನುಷ್ಯ ಇಳಿದು 52 ವರ್ಷಗಳು ಸಂದಿವೆ

ಚಂದ್ರನ ದಿನ 2021: 1971ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ರಾಷ್ಟ್ರೀಯ ಚಂದ್ರನ ದಿನವನ್ನು ಆಚರಿಸಲು ಅನುಮತಿ ನೀಡಿದರು. ಚಂದ್ರನ ಅಂಗಳಲ್ಲಿ ಮನುಷ್ಯ ಇಳಿದು ಜಗತ್ತೇ ಬೆರಗಾಗುವಂತೆ ಮಾಡಿದ ಆ ದಿನದ ನೆನಪಿಗಾಗಿ ಪ್ರತೀವರ್ಷ ಜುಲೈ 20ರಂದು ರಾಷ್ಟ್ರೀಯ ಚಂದ್ರನ ದಿನವನ್ನು ಆಚರಿಸಲಾಗುತ್ತದೆ.

Moon Day 2021: ಇಂದು ಚಂದ್ರನ ದಿನ; ಚಂದ್ರನ ಅಂಗಳದಲ್ಲಿ ಮನುಷ್ಯ ಇಳಿದು 52 ವರ್ಷಗಳು ಸಂದಿವೆ
ಸಾಂದರ್ಭಿಕ ಚಿತ್ರ

ಇತಿಹಾಸದ ಪುಟದಲ್ಲಿ ಅದೆಷ್ಟೋ ಆಕರ್ಷಕ ಘಟನೆಗಳು ನಡೆದಿವೆ. ಅದರಲ್ಲಿ ಮನುಷ್ಯನು ಚಂದ್ರನ ಮೇಲೆ ನಡೆದಾಡಿದ ಘಟನೆಯೂ ಒಂದು. ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ ದಿನವದು. 1969 ಜುಲೈ 20ರಂದು ನೀಲ್​ ಆರ್ಮ್​ಸ್ಟ್ರಂಗ್​ ಮತ್ತು ಬುಜ್​ ಅಲ್ಡ್ರಿನ್​ ಅವರು ಚಂದ್ರನ ಅಂಗಳದಲ್ಲಿ ಇಳಿದ ಸುದ್ದಿಯೊಂದು ಜಗತ್ತಿನಾದ್ಯಂತ ಕೇಳಿಬಂದಿತ್ತು.

1971ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ರಾಷ್ಟ್ರೀಯ ಚಂದ್ರನ ದಿನವನ್ನು ಆಚರಿಸಲು ಅನುಮತಿ ನೀಡಿದರು. ಚಂದ್ರನ ಅಂಗಳದಲ್ಲಿ ಮನುಷ್ಯ ಇಳಿದು ಜಗತ್ತೇ ಬೆರಗಾಗುವಂತೆ ಮಾಡಿದ ಆ ದಿನದ ನೆನಪಿಗಾಗಿ ಪ್ರತೀವರ್ಷ ಜುಲೈ 20ರಂದು ರಾಷ್ಟ್ರೀಯ ಚಂದ್ರನ ದಿನವನ್ನು ಆಚರಿಸಲಾಗುತ್ತದೆ. ಮನುಷ್ಯ ಚಂದ್ರನ ಅಂಗಳದಲ್ಲಿ ಇಳಿದು 52 ವರ್ಷಗಳು ಸಂದಿವೆ.

ಅಪೊಲೊ-11 ನೌಕೆಯಲ್ಲಿ ನೀಲ್​ ಆರ್ಮ್​ಸ್ಟ್ರಂಗ್​ ಹಾಗೂ ಜುಜ್​ ಅಲ್ಡ್ರಿನ್​ ಚಂದ್ರನ ಅಂಗಳಕ್ಕೆ ಪ್ರವೇಶಿಸಲು ಹೊರಟರು. ಚಂದ್ರನ ಅಂಗಳ ತಲುಪಿದ 6 ಗಂಟೆಯ ಬಳಿಕ ನೀಲ್​ ಆರ್ಮ್​ಸ್ಟ್ರಂಗ್​ ಚಂದ್ರನ ಅಂಗಳದಲ್ಲಿ ಹೆಜ್ಜೆ ಇರಿಸಿ ದಾಖಲೆ ಸೃಷ್ಟಿಸಿದರು. ಅದೇ ನೌಕೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕಳೆದರು. ಇಬ್ಬರು ಗಗನ ಯಾತ್ರಿಗಳು 21.5 ಕೆಜಿ ಚಂದ್ರನ ವಸ್ತುಗಳನ್ನು ಸಂಗ್ರಹಿಸಿದರು.

ಮಹತ್ವ
ಈ ದಿನದ ನೇರ ಪ್ರಸಾರವನ್ನು ಲಕ್ಷಾಂತರ ಜನರು ವೀಕ್ಷಿಸಿದರು. ಕಾರ್ಯಾಚರಣೆಯ ಯಶಸ್ಸಿನ ನಂತರ ನಾಸಾ,​ ಪ್ರಪ್ರಥಮ ಬಾರಿಗೆ ದೊಡ್ಡ ಸಾಧನೆ ಎಂದು ವಿವರಿಸಿದೆ. ಅಮೆರಿಕಾ ಇತಿಹಾಸದಲ್ಲಿಯೇ ಪ್ರಪಂಚವೇ ಬೆರಗಾಗುವಂತೆ ಮಾಡಿದ ದಿನ ಎಲ್ಲರಲ್ಲಿ ಅಚ್ಚಳಿಯದೇ ಉಳಿದಿದೆ.

ಚಂದ್ರನು ಭೂಮಿಗೆ ಹತ್ತಿರದಲ್ಲಿರುವುದರಿಂದ ಭೂಮಿಯಲ್ಲಿರುವ ಹಾಗೆ ಚಂದ್ರನ ಅಂಗಳದಲ್ಲಿಯೂ ನೀರಿರುವ ಸಾಧ್ಯತೆಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳಲಾಗಿತ್ತು. ಚಂದ್ರನ ಮೇಲೆ ಮಾನವರು ವಾಸ ಮಾಡಬಹುದು, ನಮ್ಮ ವಾಸಕ್ಕೆ ಚಂದ್ರನು ನೆಲೆಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಸಂಶೋಧನೆಗಳು ನಡೆದವು.

ಇದನ್ನೂ ಓದಿ:

Lunar Eclipse 2021: ಇಂದು ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ

NASA: ಚಂದ್ರನ ಮೇಲೆ ಮನೆ ಕಟ್ಟಲು ನಾಸಾದಿಂದ ಕಂಟ್ರಾಕ್ಟ್; 6,964 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ ಅಚ್ಚರಿಯ ಲೋಕ

Click on your DTH Provider to Add TV9 Kannada