NASA: ಚಂದ್ರನ ಮೇಲೆ ಮನೆ ಕಟ್ಟಲು ನಾಸಾದಿಂದ ಕಂಟ್ರಾಕ್ಟ್; 6,964 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ ಅಚ್ಚರಿಯ ಲೋಕ

NASA: ಅಮೆರಿಕಾದ ನಾಸಾದಿಂದ (NASA) ಚಂದ್ರಲೋಕದಲ್ಲಿ ಮನೆ ಕಟ್ಟಲು 6,964 ಕೋಟಿ ರೂ.ಗೆ ನಾರ್ತ್​ರೋಪ್ ಗ್ರುಮ್ಮನ್ ಕಾರ್ಪ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

NASA: ಚಂದ್ರನ ಮೇಲೆ ಮನೆ ಕಟ್ಟಲು ನಾಸಾದಿಂದ ಕಂಟ್ರಾಕ್ಟ್; 6,964 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ ಅಚ್ಚರಿಯ ಲೋಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 10, 2021 | 4:27 PM

ವಿಜ್ಞಾನ ಜಗತ್ತಿನಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಆಗಸದಲ್ಲಿ ಕಾಣುವ ಚಂದ್ರನ ಮೇಲೊಂದು ಮನೆ ಕಟ್ಟಬೇಕೆಂಬುದು ಇಲ್ಲಿಯವರೆಗೂ ಉಪಮೆಯಷ್ಟೇ ಆಗಿತ್ತು. ಆದರೆ, ಇನ್ನುಮುಂದೆ ಅದು ಅಸಾಧ್ಯವೇನಲ್ಲ. ಏಕೆಂದರೆ, ನಾಸಾದಿಂದ (NASA) ಚಂದ್ರಲೋಕದಲ್ಲಿ ಮನೆ ಕಟ್ಟಲು ಕಾಂಟ್ರಾಕ್ಟ್​ ನೀಡಲಾಗಿದ್ದು, 6,964 ಕೋಟಿ ರೂ.ಗೆ ನಾರ್ತ್​ರೋಪ್ ಗ್ರುಮ್ಮನ್ ಕಾರ್ಪ್ (NOC.N) ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅಮೆರಿಕದ ಬಾಹ್ಯಾಕಾಶ ಏಜೆನ್ಸಿಯಾಗಿರುವ ನಾಸಾದ ವಿಜ್ಞಾನಿಗಳಿಗೆ ಚಂದ್ರನ ಮೇಲೆ ವಾಸ್ತವ್ಯ ಹೂಡಲು ಸಹಕಾರಿಯಾಗುವಂತೆ ವಸತಿ ವ್ಯವಸ್ಥೆಯನ್ನು ಪ್ಲಾನ್ ಮಾಡುವ ಜವಾಬ್ದಾರಿಯನ್ನು ಈ ಕಂಪನಿ ಹೊತ್ತಿದೆ.

ನಾಸಾದ ಗಗನಯಾತ್ರಿಗಳು ಚಂದ್ರನ ಮೇಲೆಯೇ ವಾಸ್ತವ್ಯ ಹೂಡಿ, ಸಂಶೋಧನೆ ನಡೆಸಲು ಅನುಕೂಲವಾಗಬೇಕೆಂಬ ಕಾರಣಕ್ಕೆ ನಾಸಾ ಈ ಗುತ್ತಿಗೆ ನೀಡಿದೆ. ಚಂದ್ರಲೋಕದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾದ ವಾತಾವರಣವಿದೆ ಎಂಬುದನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಹೀಗಾಗಿ ನಾರ್ತ್​ರೋಪ್ ಕಂಪನಿ ಚಂದ್ರನ ಮೇಲೆ ವಾಸಕ್ಕೆ ಯೋಗ್ಯವಾದ ಸಣ್ಣದಾದ ಮನೆಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಕೇವಲ ಅಮೆರಿಕ ಮಾತ್ರವಲ್ಲ ಚೀನಾ ದೇಶ ಕೂಡ ಚಂದ್ರನ ದಕ್ಷಿಣ ಭಾಗದಲ್ಲಿ ಮನೆ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. 2030ರ ವೇಳೆಗೆ ಗುರು ಗ್ರಹದ ಮೇಲೆ ರೊಬೋಟಿಕ್ ದಂಡಯಾತ್ರೆ ನಡೆಸಲು ಚೀನಾ ಚಿಂತನೆ ನಡೆಸಿದೆ. ಜಗತ್ತಿನಾದ್ಯಂತ ವೈಜ್ಞಾನಿಕ ಜಗತ್ತಿನಲ್ಲಿ ಹೊಸ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ನಾಸಾ ಕೂಡ ಕೈಜೋಡಿಸಿದ್ದು, ವಿಜ್ಞಾನ ಜಗತ್ತಿನ ಸಂಶೋಧನೆಗೆ ಗೇಟ್​ವೇ ನಿರ್ಮಿಸಲು ನಾಸಾ ಮತ್ತು ನಾಸಾದ ಕಮರ್ಷಿಯಲ್ ಹಾಗೂ ಇಂಟರ್​ನ್ಯಾಷನಲ್ ಪಾರ್ಟನರ್​ಗಳು ಮುಂದಾಗಿದ್ದಾರೆ.

ಚಂದ್ರನ ಬಗ್ಗೆ ಸಂಶೋಧನೆ ನಡೆಸಲು ಜಗತ್ತಿನ 8 ದೇಶಗಳು ಈಗಾಗಲೇ ನಾಸಾದ ಜೊತೆಗೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಚಂದ್ರನ ಮೇಲೆ ದೀರ್ಘಾವಧಿಗೆ ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಕಾನೂನು ಮತ್ತು ಯೋಜನೆಯನ್ನು ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಇದೀಗ ನಾಸಾದಿಂದ ಚಂದ್ರನ ಮೇಲೆ ಮನೆಯನ್ನು ನಿರ್ಮಿಸಲು ಕಂಟ್ರಾಕ್ಟ್ ಕೂಡ ನೀಡಲಾಗಿದೆ.

ಇದನ್ನೂ ಓದಿ: ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ

ಇದನ್ನೂ ಓದಿ: Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ