ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ

ಚಂದ್ರನತ್ತ ಮಾನವಸಹಿತ ಬಾಹ್ಯಾಕಾಶಯಾನ ಮತ್ತು ಇತರ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಜ್ಜಾಗುತ್ತಿರುವ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ತನ್ನ ಗಗನಯಾತ್ರಿ ತಂಡಕ್ಕೆ ಆಯ್ಕೆಮಾಡಿದೆ. ಅಮೆರಿಕದ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಲ್​ ರಾಜಾ ಜಾನ್ ವೂರ್ಪುಟೂರ್ ಚಾರಿಯನ್ನು ನಾಸಾ ಸಂಸ್ಥೆ ಆಯ್ಕೆ ಮಾಡಿದೆ.

ಚಂದ್ರನತ್ತ ಪುನಃ NASA ಚಿತ್ತ: ಗಗನಯಾತ್ರಿ ತಂಡಕ್ಕೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ
ರಾಜಾ ಜಾನ್ ವೂರ್ಪುಟೂರ್ ಚಾರಿ
Follow us
preethi shettigar
| Updated By: KUSHAL V

Updated on: Dec 11, 2020 | 5:05 PM

ಚಂದ್ರನತ್ತ ಮಾನವಸಹಿತ ಬಾಹ್ಯಾಕಾಶಯಾನ ಮತ್ತು ಇತರ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಜ್ಜಾಗುತ್ತಿರುವ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ತನ್ನ ಗಗನಯಾತ್ರಿ ತಂಡಕ್ಕೆ ಆಯ್ಕೆಮಾಡಿದೆ. ಅಮೆರಿಕದ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಲ್​ ರಾಜಾ ಜಾನ್ ವೂರ್ಪುಟೂರ್ ಚಾರಿಯನ್ನು ನಾಸಾ ಸಂಸ್ಥೆ ಆಯ್ಕೆ ಮಾಡಿದೆ. 18 ಗಗನಯಾತ್ರಿಗಳ ಪೈಕಿ ರಾಜಾ ಚಾರಿ ಸಹ ಒಬ್ಬರಾಗಿದ್ದಾರೆ.

2024ರಲ್ಲಿ ಚಂದ್ರನತ್ತ ಓರ್ವ ಮಹಿಳಾ ಹಾಗೂ ಪುರುಷ ಗಗನಯಾತ್ರಿಗಳ ತಂಡವನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ನಾಸಾ ಹೊಂದಿದೆ. ಜೊತೆಗೆ, ಚಂದ್ರನ ಮೇಲೆ ಮನುಷ್ಯರು ಸುದೀರ್ಘ ಕಾಲದವರೆಗೆ ವಾಸಿಸಬಹುದಾದ ಅನುಕೂಲಕರ ವಸಾಹತ್ತನ್ನು ನಿರ್ಮಿಸುವ ಯೋಚನೆ ಹೊಂದಿದೆ. ಈ ನಿಟ್ಟಿನಲ್ಲಿ, ಸದ್ಯ, ಆಯ್ಕೆಯಾಗಿರುವ 18 ಜನರನ್ನು ಸೂಕ್ತ ತರಬೇತಿ ನೀಡಲಾಗುವುದು ಎಂದು ನಾಸಾ ತಿಳಿಸಿದೆ.

43 ವರ್ಷದ ಕರ್ನಲ್ ರಾಜಾ ಚಾರಿ ಅಮೆರಿಕಾದ ವಾಯುಪಡೆ ಅಕಾಡೆಮಿ, ಪ್ರತಿಷ್ಠಿತ MIT ತಂತ್ರಜ್ಞಾನ ಕಾಲೇಜು ಹಾಗೂ US ನೇವಲ್ ಟೆಸ್ಟ್ ಪೈಲಟ್ ಶಾಲೆಯ ಪದವೀಧರ.  2017ರಲ್ಲಿ ನಾಸಾ ತನ್ನ ಗಗನಯಾತ್ರಿ ಅಭ್ಯರ್ಥಿ ತರಗತಿಗೆ ರಾಜಾ ಚಾರಿಯವರ ಹೆಸರನ್ನು ಸೂಚಿಸಿತ್ತು. ಅದರಂತೆ, ಗಗನಯಾತ್ರಿ ತರಬೇತಿಯನ್ನು ಪೂರ್ಣಗೊಳಿಸಿರುವ ರಾಜಾ ಚಾರಿ ಈಗ ನಾಸಾದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಲಿದ್ದಾರೆ.

ಆರ್ಟೆಮಿಸ್ ಮಿಷನ್​ಗೆ ಆಯ್ಕೆಯಾಗಿರುವ ಗಗನಯಾತ್ರಿಗಳು ವೈವಿಧ್ಯಮಯ ಹಿನ್ನೆಲೆ, ಪರಿಣತಿ ಮತ್ತು ಅನುಭವ ಹೊಂದಿದ್ದಾರೆ. 55 ವರ್ಷದ ಹಿರಿಯರಿಂದ ಹಿಡಿದು 32 ವರ್ಷದ ಕಿರಿ ವಯಸ್ಸಿನ ಅಭ್ಯರ್ಥಿಗಳು ಸಹ ಈ ಗುಂಪಿನಲ್ಲಿದ್ದಾರೆ

ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ