AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರಿಗೆ 4 ಕೋಟಿ ರೂ.ಮೌಲ್ಯದ ಬಂಗಾರದ ಖಡ್ಗ ಸಮರ್ಪಣೆ; ಫೋಟೋಗಳು ಇಲ್ಲಿವೆ..

Tirumala Tirupati Balaji Temple: ಈ ಭಕ್ತರ ಹೆಸರು ಎಂ.ಶ್ರೀನಿವಾಸ ಪ್ರಸಾದ. ಹೈದರಾಬಾದ್​ನವರಾದ ಇವರು ಪತ್ನಿಯೊಂದಿಗೆ ಸೇರಿ ಬಾಲಾಜಿ ಸ್ವಾಮಿಗೆ ಸ್ವರ್ಣ ನಂದಕ (ಬಂಗಾರದ ಖಡ್ಗ)ವನ್ನು ಅರ್ಪಿಸಿದ್ದಾರೆ. ಈ ಖಡ್ಗ 6.5ಕೆಜಿ ತೂಕವುಳ್ಳದ್ದಾಗಿದೆ.

ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರಿಗೆ 4 ಕೋಟಿ ರೂ.ಮೌಲ್ಯದ ಬಂಗಾರದ ಖಡ್ಗ ಸಮರ್ಪಣೆ; ಫೋಟೋಗಳು ಇಲ್ಲಿವೆ..
ಬಂಗಾರದ ಖಡ್ಗ ಅರ್ಪಿಸಿದ ಶ್ರೀನಿವಾಸ್​ಪ್ರಸಾದ್ ದಂಪತಿ
TV9 Web
| Updated By: Lakshmi Hegde|

Updated on: Jul 20, 2021 | 11:42 AM

Share

ಹೈದರಾಬಾದ್: ಭಾರತೀಯರಿಗೆ ಧಾರ್ಮಿಕ ಭಾವನೆಗಳು ತುಸು ಹೆಚ್ಚು. ಇಲ್ಲಿ ದೇವಸ್ಥಾನಗಳೂ ಹೆಚ್ಚು..ಅದಕ್ಕೆ ತಕ್ಕಂತೆ ತಮ್ಮಿಷ್ಟದ, ತಾವು ನಂಬಿದ ದೇವರಿಗೆ ಹರಕೆ ರೂಪದಲ್ಲಿ ದೊಡ್ಡದೊಡ್ಡ ದೇಣಿಗೆಗಳನ್ನು ನೀಡುವ ಭಕ್ತರ ಸಂಖ್ಯೆಯೂ ಅಪಾರವಾಗಿದೆ. ಹೀಗೆ ಭಕ್ತರಿಂದ ದೊಡ್ಡಮಟ್ಟದಲ್ಲಿ ಬೆಲೆಬಾಳುವ ದೇಣಿಗೆಗಳನ್ನು ಪಡೆಯುವ ದೇವಸ್ಥಾನಗಳ ಸಾಲಿನಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ (Tirumala Tirupati Balaji Temple)ವೂ ಒಂದು. ಇದೀಗ ಭಕ್ತರೊಬ್ಬರು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರೋಬ್ಬರಿ 4 ಕೋಟಿ ರೂ.ಮೌಲ್ಯದ ಬಂಗಾರದ ಖಡ್ಗ(Golden Sworn)ವನ್ನು ಅರ್ಪಿಸಿದ್ದಾರೆ. ಅದರ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.

Golden Sword

6.5 ಕೆಜಿ ತೂಕದ ಬಂಗಾರದ ಖಡ್ಗ

ಈ ಭಕ್ತರ ಹೆಸರು ಎಂ.ಶ್ರೀನಿವಾಸ ಪ್ರಸಾದ. ಹೈದರಾಬಾದ್​ನವರಾದ ಇವರು ಪತ್ನಿಯೊಂದಿಗೆ ಸೇರಿ ಬಾಲಾಜಿ ಸ್ವಾಮಿಗೆ ಸ್ವರ್ಣ ನಂದಕ (ಬಂಗಾರದ ಖಡ್ಗ)ವನ್ನು ಅರ್ಪಿಸಿದ್ದಾರೆ. ಈ ಖಡ್ಗ 6.5ಕೆಜಿ ತೂಕವುಳ್ಳದ್ದಾಗಿದೆ. ದಂಪತಿ ಖಡ್ಗವನ್ನು ಸೋಮವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಟ್ರಸ್ಟ್​ಗೆ ನೀಡಿದ್ದಾರೆ. ದೇವರಿಗೆ ಅರ್ಪಿಸುವುದಕ್ಕೂ ಮೊದಲು ಖಡ್ಗವನ್ನು ತಿರುಮಲದ ಕಲೆಕ್ಟಿವ್​ ಗೆಸ್ಟ್​ ಹೌಸ್​ನಲ್ಲಿ ಮಾಧ್ಯಮಗಳ ಎದುರು ಪ್ರದರ್ಶಿಸಿದ್ದಾರೆ.

ಶ್ರೀನಿವಾಸಪ್ರಸಾದ್ ದಂಪತಿ ಬಂಗಾರದ ಖಡ್ಗವನ್ನು ಕಳೆದವರ್ಷವೇ ತಿರುಪತಿ ದೇವಸ್ಥಾನಕ್ಕೆ ಅರ್ಪಿಸಲು ಯೋಜನೆ ರೂಪಿಸಿದ್ದರು. ಆದರೆ ಕೊರೊನಾ ವೈರಸ್ ಬಿಕ್ಕಟ್ಟಿನ ಕಾರಣದಿಂದ ಅದು ವಿಳಂಬವಾಯಿತು. ಅಂತಿಮವಾಗಿ ಇಂದು ಆ ಹರಕೆ ಸಂಪೂರ್ಣವಾಯಿತು ಎಂದು ಶ್ರೀನಿವಾಸ್​ಪ್ರಸಾದ್ ಹೇಳಿದ್ದಾರೆ. ಸೂರ್ಯ ಕಟಾರಿ ಖಡ್ಗವನ್ನು ಕೊಯಂಬತ್ತೂರಿನಲ್ಲಿ, ಹಲವು ತಜ್ಞ ಆಭರಣ ತಯಾರಕರು ಸೇರಿ ನಿರ್ಮಿಸಿಕೊಟ್ಟಿದ್ದಾರೆ. ಇದರ ತಯಾರಿಕೆಗೆ ಸುಮಾರು 6 ತಿಂಗಳ ಕಾಲ ಬೇಕಾಯಿತು. ಇದು 1.8 ಕೋಟಿ ರೂ.ಮೌಲ್ಯದ ಖಡ್ಗವಾಗಿದ್ದು, ಅದರ ಬೆಲೆಯೀಗ 4 ಕೋಟಿ ರೂ.ಆಗಿದೆ ಎಂದೂ ಹೇಳಿದ್ದಾರೆ. 2018ರಲ್ಲಿ ತಮಿಳುನಾಡಿನ ಖ್ಯಾತ ಬಟ್ಟೆ ವ್ಯಾಪಾರಿ ತಂಗಾ ದೊರೈ ಅವರೂ ಕೂಡ 1.75 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಖಡ್ಗವನ್ನು ತಿರುಪತಿ ತಿರುಮಲ ದೇವರಿಗೆ ಅರ್ಪಿಸಿದ್ದರು.

Golden Sword

ಇದನ್ನೂ ಓದಿ: ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿ; ಕೊಪ್ಪಳದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ

Hyderabad Couple Donates Golden Sword Worth Rs 4 Crore to Tirupati Temple Of Andra Pradesh

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ