Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

Brain Tumor | ಬ್ರೈನ್ ಟ್ಯೂಮರ್​ನಿಂದ ಆಪರೇಷನ್​ಗೆ ಒಳಗಾದ ದೆಹಲಿಯ ರೋಗಿಯೊಬ್ಬರು ಆಪರೇಷನ್ ಶುರುವಾಗಿ ಮುಗಿಯುವವರೆಗೂ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು.

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!
ಮೆದುಳು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 24, 2021 | 9:38 PM

ನವದೆಹಲಿ: ದೇವರನ್ನು ನಂಬಿದರೆ ಎಂತಹ ಕಷ್ಟ ಕೂಡ ದೂರವಾಗುತ್ತದ ಎಂಬುದು ಹಲವರ ನಂಬಿಕೆ. ಜನರ ಜೀವ ಉಳಿಸುವ ಆಸ್ಪತ್ರೆಗಳಲ್ಲಿ ಅದೇ ಕಾರಣಕ್ಕೆ ದೇವರ ಮೂರ್ತಿಯನ್ನು ಇರಿಸಲಾಗಿರುತ್ತದೆ. ವೈದ್ಯರ ಪ್ರಯತ್ನವೆಲ್ಲ ಮಾಡಿ ಆದ ಮೇಲೆ ಕೊನೆಗೆ ದೇವರಾದರೂ ಏನಾದರೂ ಪವಾಡ ಮಾಡುತ್ತೇನೆಂಬ ನಂಬಿಕೆ ರೋಗಿಗಳದ್ದು. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಬಹಳ ಗಂಭೀರವಾದ ಬ್ರೈನ್ ಟ್ಯೂಮರ್​ನಿಂದ ಬಳಲುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಲು ಸಿದ್ಧತೆ ನಡೆದಿತ್ತು. ಆಪರೇಷನ್ ಥಿಯೇಟರ್​ಗೆ ಬಂದ ರೋಗಿ ಆಪರೇಷನ್ ನಡೆಯುವಾಗಲೂ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಇದನ್ನು ನೋಡಿ ಆಪರೇಷನ್​ ಮಾಡಲು ಸಿದ್ಧವಾಗಿದ್ದ ವೈದ್ಯರು ಕೂಡ ಒಂದು ಕ್ಷಣ ಬೆರಗಾದರು.

ಆಂಜನೇಯನ ಭಕ್ತೆಯಾಗಿದ್ದ ರೋಗಿ ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಗೊತ್ತಾದ ನಂತರ ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಏಮ್ಸ್​ ಆಸ್ಪತ್ರೆಯಲ್ಲಿ ಆಕೆಗೆ ಆಪರೇಷನ್ ಮಾಡಲು ಎಲ್ಲ ಸಿದ್ಧತೆಗಳೂ ನಡೆದಿತ್ತು. ಆಪರೇಷನ್ ಥಿಯೇಟರ್​ನಲ್ಲಿ ಮಲಗಿದ ಆಕೆ ಇಡೀ ಆಪರೇಷನ್ ಮುಗಿಯುವವರೆಗೂ ಎಚ್ಚರವಾಗಿಯೇ ಇದ್ದರು. ಮೂರು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಮುಗಿಯುವವರೆಗೂ ಹನುಮಾನ್ ಚಾಲೀಸನ್ನು ಪಠಿಸುತ್ತಲೇ ಇದ್ದರು. ಆ ದೈವೀ ಭಾವನೆ ಆಪರೇಷನ್ ಥಿಯೇಟರ್​ನಲ್ಲೆಲ್ಲ ಹರಡಿದಂತೆ, ಬಹಳ ಕಠಿಣವಾದ ಆಪರೇಷನ್ ಕೂಡ ಯಶಸ್ವಿಯಾಗಿ ನೆರವೇರಿತು.

ಆ ಮಹಿಳೆಗೆ ಆಪರೇಷನ್ ಮಾಡಿರುವ ತಂಡದಲ್ಲೊಬ್ಬರಾದ ಡಾ. ದೀಪಕ್ ಗುಪ್ತಾ, ಆಪರೇಷನ್​ಗೆ ಒಳಗಾದ ಮಹಿಳೆಗೆ ಲೋಕಲ್ ಅನಸ್ತೇಷಿಯಾ ಮತ್ತು ಪೈನ್ ಕಿಲ್ಲರ್ ಕೂಡ ನೀಡಲಾಗಿತ್ತು. ಶಾಲಾ ಶಿಕ್ಷಕಿಯಾಗಿರುವ ಆ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದ್ದು, ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Viral Video: ಅಚ್ಚರಿಯಾದರೂ ಸತ್ಯ; ವಕೀಲನ ಮೇಲೆ ದಾಳಿ ಮಾಡಿದ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ!

(Viral News Woman Recites Hanuma Chalisa While Undergoing Complex Brain Tumor Surgery in AIIMS)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ