Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹ..ಭೂಕುಸಿತ; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಸೇನೆ

ಮಹಾರಾಷ್ಟ್ರದಲ್ಲಿ ಸದ್ಯ 1,35,313 ಮಂದಿಯನ್ನು ಈಗಾಗಲೇ ಪ್ರವಾಹಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳಿಸಲಾಗಿದೆ. ಇದರಲ್ಲಿ 78,111 ಜನರನ್ನು ಸಾಂಗ್ಲಿಗೆ 40,882 ಮಂದಿಯನ್ನು ಕೊಲ್ಲಾಪುರಕ್ಕೆ ಶಿಫ್ಟ್​ ಮಾಡಲಾಗಿದೆ.

Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹ..ಭೂಕುಸಿತ; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಸೇನೆ
ಮಹಾರಾಷ್ಟ್ರ ಪ್ರವಾಹ

ಕಳೆದ ಮೂರು ದಿನಗಳಿಂದಲೂ ಮಹಾರಾಷ್ಟ್ರ(Maharashtra Rain) ದ ಪುಣೆ ಮತ್ತು ಕೊಂಕಣ ವಿಭಾಗದಲ್ಲಿ ಮಿತಿಮೀರಿ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹ ಉಂಟಾಗಿದೆ. ಮಳೆ ಸಂಬಂಧಿತ ಸಾವಿನ ಸಂಖ್ಯೆಯೀಗ 112ಕ್ಕೆ ಏರಿಕೆಯಾಗಿದೆ. 99 ಜನರು ನಾಪತ್ತೆಯಾಗಿದ್ದಾರೆ. 3000ಕ್ಕೂ ಅಧಿಕ ಜಾನುವಾರು (Cattle)ಗಳು ಸಾವನ್ನಪ್ಪಿದ್ದು, ಅದರಲ್ಲಿ ಸತಾರಾ ಜಿಲ್ಲೆಯಲ್ಲೇ ಜಾಸ್ತಿ ಸಾವಾಗಿದೆ ಎಂದು ಮಹಾ ಸರ್ಕಾರ ತಿಳಿಸಿದೆ. ಹಾಗೇ, ಮೃತರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸಿನ ನೆರವು ನೀಡಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

1.35 ಲಕ್ಷ ಜನರ ಸ್ಥಳಾಂತರ
ಮಹಾರಾಷ್ಟ್ರದಲ್ಲಿ ಸದ್ಯ 1,35,313 ಮಂದಿಯನ್ನು ಈಗಾಗಲೇ ಪ್ರವಾಹಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳಿಸಲಾಗಿದೆ. ಇದರಲ್ಲಿ 78,111 ಜನರನ್ನು ಸಾಂಗ್ಲಿಗೆ 40,882 ಮಂದಿಯನ್ನು ಕೊಲ್ಲಾಪುರಕ್ಕೆ ಶಿಫ್ಟ್​ ಮಾಡಲಾಗಿದೆ. ಪ್ರವಾಹ ಪೀಡಿತ ಕೊಂಕಣದ ಪಟ್ಟಣಗಳಾದ ಚಿಪ್ಲುನ್​, ಖೇದ್​, ಮಹಾದ್​​​ಗಳಲ್ಲಿ ಕುಡಿಯುವ ನೀರು, ವಿದ್ಯುತ್​ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದ್ದು. ಆಹಾರ, ಔಷಧಗಳನ್ನೂ ನೀಡಲಾಗುತ್ತಿದೆ. ಒಟ್ಟು 34 ಎನ್​​ಡಿಆರ್​ಎಫ್​ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ತಾಲಿಯೆ ಗ್ರಾಮಕ್ಕೆ ಮುಖ್ಯಮಂತ್ರಿ ಭೇಟಿ
ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರು ಶನಿವಾರ ರಾಯ್​ಗಡ್​ ಜಿಲ್ಲೆಯ ತಾಲಿಯೆ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಪ್ರವಾಹದಿಂದ ತತ್ತರಿಸಿದ ಜನರ ಕಾಳಜಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆಂದು ಭರವಸೆ ನೀಡಿದ್ದಾರೆ. ಹಾಗೇ ಏರ್​ಫೋರ್ಸ್​ ಕೂಡ ಇಲ್ಲಿನ ಸಂತ್ರಸ್ತರ ನೆರವಿಗೆ ನಿಂತಿದ್ದು, ಈಗಾಗಲೇ ನೂರಾರು ಜನರನ್ನು ಏರ್​ಲಿಫ್ಟ್​ ಮಾಡಿದೆ.

ಇದನ್ನೂ ಓದಿ: Viral Video: ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನೋಡಿ ಬೆರಗಾದ ನೆಟ್ಟಿಗರು! ವಿಡಿಯೋ 1 ಮಿಲಿಯನ್ ವ್ಯೂವ್ಸ್

Tokyo Olympic 2020: ಇದೇ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿ ಉರಿಸಲು ಹೈಡ್ರೋಜನ್ ಬಳಕೆ

Click on your DTH Provider to Add TV9 Kannada