AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympic 2020: ಇದೇ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿ ಉರಿಸಲು ಹೈಡ್ರೋಜನ್ ಬಳಕೆ

ವಿಶೇಷ ಎಂದರೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಜ್ಯೋತಿ ಉರಿಸಲು ಇದೇ ಮೊದಲ ಬಾರಿಗೆ ಹೈಡ್ರೋಜನ್ ಬಳಕೆಯನ್ನು ಮಾಡಲಾಗಿದೆ.

Tokyo Olympic 2020: ಇದೇ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿ ಉರಿಸಲು ಹೈಡ್ರೋಜನ್ ಬಳಕೆ
Tokyo Olympic flame
TV9 Web
| Updated By: Vinay Bhat|

Updated on: Jul 25, 2021 | 9:43 AM

Share

ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಅಧಿಕೃತ ಚಾಲನೆ ಸಿಕ್ಕಿ ಎರಡು ದಿನಗಳಾಗಿದ್ದು ಕ್ರೀಡಾಕೂಟದ ಕಾವು ಹೆಚ್ಚುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಸಾಕಷ್ಟು ವಿಶೇಷವಾಗಿದೆ. ಕಳೆದ ವರ್ಷ ನಡೆಯಬೇಕಿದ್ದ ಕ್ರೀಡಾಕೂಟ ಕೊರೋನಾ ವೈರಸ್ ಕಾರಣದಿಂದ ಬರೋಬ್ಬರಿ ಒಂದು ವರ್ಷಕ್ಕೆ ಮುಂದಕ್ಕೋಗಿ ಶುರುವಾಗಿದೆ.

ವಿಶೇಷ ಎಂದರೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಜ್ಯೋತಿ ಉರಿಸಲು ಇದೇ ಮೊದಲ ಬಾರಿಗೆ ಹೈಡ್ರೋಜನ್ ಬಳಕೆಯನ್ನು ಮಾಡಲಾಗಿದೆ. ಈ ಹಿಂದೆ ಒಲಿಂಪಿಕ್ಸ್​ನಲ್ಲಿ ಜ್ಯೋತಿ ಉರಿಸಲು ಸಾಮಾನ್ಯವಾಗಿ ಪ್ರೋಪೇನ್‌ ಅನ್ನು ಬಳಸಲಾಗುತ್ತಿತ್ತು. ಆದಾಗ್ಯೂ 1928 ರಲ್ಲಿ ಆಮ್ಸ್ಟರ್‌ಡ್ಯಾಮ್ ಕ್ರೀಡಾಕೂಟಕ್ಕಾಗಿ ಮೊದಲ ಆಧುನಿಕ ಕೌಲ್ಡ್ರಾನ್ ಅನ್ನು ಬೆಳಗಿಸಿದಾಗಿನಿಂದ ಮೆಗ್ನೀಸಿಯಮ್, ಗನ್‌ಪೌಡರ್, ರಾಳ ಮತ್ತು ಆಲಿವ್ ಎಣ್ಣೆಯನ್ನು ಸಹ ಉಪಯೋಗಿಸುತ್ತಾರೆ. ಬರ್ಲಿನ್​ಗೆ ಟಾರ್ಚ್ ರಿಲೇ ಕೂಡ ಪರಿಚಯಿಸಿದ್ದು ಎಂಟು ವರ್ಷಗಳ ನಂತರ. ಆದರೆ, ಹೈಡ್ರೋಜನ್ ಬಳಕೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ.

ಹೈಡ್ರೋಜನ್ ಬಳಕೆ ಮಾಡಲು ಕಾರಣ ಏನೆಂದರೆ ಇದು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುವುದಿಲ್ಲ. ಇದನ್ನು ಟೋಕಿಯೋದ ಕೌಲ್ಡ್ರಾನ್ ಫುಕುಶಿಮಾ ಕಾರ್ಖಾನೆಯಿಂದ ತೆಗೆದುಕೊಳ್ಳಲಾಗಿದೆಯಂತೆ.

ಈ ಹಿಂದೆ ಲಂಡನ್ ಕ್ರೀಡಾಕೂಟದ ಸಂಘಟಕರು 2012 ರಲ್ಲಿ ಕಡಿಮೆ ಇಂಗಾಲದ ಟಾರ್ಚ್‌ನ ಯೋಜನೆಗಳನ್ನು ತಯಾರಿಸಲು ಮುಂದಾಗಿದ್ದರು. ಆದರೆ ಅದು ಸರಿಯಾದ ಸಮಯಕ್ಕೆ ತಯಾರಾಗದ ಕಾರಣ ಈ ಯೋಜನೆಯನ್ನು ಕೈಬಿಡಲಾಯಿತು. ಬೇರೆ ದಾರಿಯಿಲ್ಲದೆ ಪ್ರೋಪೇನ್ ಮತ್ತು ಬ್ಯುಟೇನ್ ಮಿಶ್ರಣವನ್ನು ಬಳಸಿ ಜ್ಯೋತಿ ತಯಾರಿಸಿದ್ದರು. ಇಷ್ಟೆಲ್ಲಾ ಇತಿಹಾಸ ಹೊಂದಿರುವ ಈ ಒಲಿಂಪಿಕ್ಸ್ ಜ್ಯೋತಿಯನ್ನು ಉರಿಸಲು ಟೋಕಿಯೋ ಹೈಡ್ರೋಜನ್ ಬಳಕೆ ಮಾಡಿರುವುದು ವಿಶೇಷವಾದ ಸಂಗತಿಯಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದೆ. ಜುಲೈ 24ರ ಶನಿವಾರ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಭಾರತಕ್ಕೆ ಬೆಳ್ಳಿಯ ಪದಕ ಗೆದ್ದಿದ್ದರು. ಇದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸಿದ ಮೊದಲ ಪದಕ ಮತ್ತು ಒಲಿಂಪಿಕ್ಸ್‌ನಲ್ಲಿ ವೇಟ್‌ ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಸಿಗುತ್ತಿರುವ ಎರಡನೇ ಪದಕ.

ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು ಅವರು ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್‌ ಲಿಫ್ಟ್‌ ಮಾಡುವ ಸ್ಯಾಚ್‌ ಲಿಫ್ಟ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಒಲಿಂಪಿಕ್ಸ್‌ ದಾಖಲೆ ಬರೆದರು.

Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು

Tokyo Olympics 2020: ರೋಯಿಂಗ್​ನಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಅರ್ಜುನ್-ಅರವಿಂದ್: ಮಹಿಳಾ ಶೂಟಿಂಗ್​ನಲ್ಲಿ ಹಿನ್ನಡೆ

(Tokyo Olympic flame is the first powered by hydrogen)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ