Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಜಿಮ್ನಾಸ್ಟಿಕ್​ನಲ್ಲೂ ಭಾರತಕ್ಕೆ ಕೈತಪ್ಪಿದ ಪದಕ: ಫೈನಲ್ ಪ್ರವೇಶಿಸಲು ಪ್ರಣತಿ ವಿಫಲ

26 ವರ್ಷದ ಪಶ್ಚಿಮ ಬಂಗಾಳ ಮೂಲದ ಪ್ರಣತಿ, ನಾಲ್ಕು ವಿಭಾಗಗಳಲ್ಲಿ (ಫ್ಲೋರ್ ಎಕ್ಸೈಜ್, ವಾಲ್ಟ್, ಅನ್ಇವನ್ ಬಾರ್ಸ್, ಬ್ಯಾಲೆನ್ಸ್ ಬೀಮ್) ಒಟ್ಟು 42.565 ಸ್ಕೋರ್ ಕಲೆ ಹಾಕಿದರು.

Tokyo Olympics: ಜಿಮ್ನಾಸ್ಟಿಕ್​ನಲ್ಲೂ ಭಾರತಕ್ಕೆ ಕೈತಪ್ಪಿದ ಪದಕ: ಫೈನಲ್ ಪ್ರವೇಶಿಸಲು ಪ್ರಣತಿ ವಿಫಲ
Pranati Nayak
Follow us
TV9 Web
| Updated By: Vinay Bhat

Updated on: Jul 25, 2021 | 2:46 PM

ಟೋಕಿಯೋ ಒಲಿಂಪಿಕ್ಸ್‌ಗೆ (Tokyo Olympics) ಅರ್ಹತೆ ಪಡೆದುಕೊಂಡ ಭಾರತದ ಏಕೈಕ ಜಿಮ್ನಾಸ್ಟಿಕ್ ಪಟು ಪ್ರಣತಿ ನಾಯಕ್ (Pranati Nayak) ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಇದರೊಂದಿಗೆ ಭಾರತದ ಮತ್ತೊಂದು ಪದಕದ ಆಸೆ ಕಮರಿದೆ.

26 ವರ್ಷದ ಪಶ್ಚಿಮ ಬಂಗಾಳ ಮೂಲದ ಪ್ರಣತಿ, ನಾಲ್ಕು ವಿಭಾಗಗಳಲ್ಲಿ (ಫ್ಲೋರ್ ಎಕ್ಸೈಜ್, ವಾಲ್ಟ್, ಅನ್ಇವನ್ ಬಾರ್ಸ್, ಬ್ಯಾಲೆನ್ಸ್ ಬೀಮ್) ಒಟ್ಟು 42.565 ಸ್ಕೋರ್ ಕಲೆ ಹಾಕಿದರು. ಸಬ್ಡಿವಿಷನ್ 2ರ ಅಂತ್ಯಕ್ಕೆ ಒಟ್ಟಾರೆಯಾಗಿ 29ನೇ ರ್ಯಾಂಕ್ ಗಿಟ್ಟಿಸಿಕೊಂಡರು.

2ನೇ ಉಪವಿಭಾಗದ ಅಂತ್ಯದಲ್ಲಿ ಪ್ರಣತಿ ಒಟ್ಟಾರೆ 29ನೇ ಸ್ಥಾನವನ್ನು ಗಳಿಸಿದರು. ಒಟ್ಟು ಐದು ಉಪವಿಭಾಗಗಳಿದ್ದು ಇದರಲ್ಲಿ ಎಲ್ಲಾ ನಾಲ್ಕು ಉಪವಿಭಾಗದಲ್ಲೂ ಅತಿ ಹೆಚ್ಚು ಅಂಕಗಳಿಸಿದ ಅಗ್ರ 24 ಜಿಮ್ನಾಸ್ಟ್‌ಗಳು ಜುಲೈ 29 ರಂದು ನಡೆಯಲಿರುವ ಆಲ್-ಅರೌಂಡ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಪ್ರತಿ ವಿಭಾಗದಲ್ಲಿ ಅಗ್ರ ಎಂಟು ಸ್ಥಾನಗಳನ್ನು ಪಡೆಯಲಿರುವ ಜಿಮ್ನಾಸ್ಟ್‌ಗಳು ಆಗಸ್ಟ್ 1ರಿಂದ 3ರ ವರೆಗೆ ನಡೆಯಲಿರುವ ಆಯಾ ವೈಯಕ್ತಿಕ ವಿಭಾಗದ ಫೈನಲ್​ಗೆ ಅರ್ಹತೆಯನ್ನು ಗಿಟ್ಟಿಸಿದ್ದಾರೆ. ಹಾಗಿದ್ದರೂ ಪ್ರಣತಿ ನಾಯಕ್ ಎಲ್ಲ ನಾಲ್ಕು ವಿಭಾಗದಲ್ಲೂ ನಿರಾಸೆ ಮೂಡಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಚೀನಾದಲ್ಲಿ ಮೇ 29 ರಿಂದ ಜೂನ್ 1 ರವರೆಗೆ ನಡೆಯಬೇಕಿದ್ದ 9ನೇ ಹಿರಿಯ ಏಷ್ಯನ್ ಚಾಂಪಿಯನ್‌ಶಿಪ್‌ಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಕಾಂಟಿನೆಂಟಲ್ ಕೋಟಾ ಮೂಲಕ ಅರ್ಹತೆ ಪಡೆದ ನಾಯಕ್‌ಗೆ ಒಲಿಂಪಿಕ್ಸ್‌ಗೆ ತಯಾರಾಗಲು ಹೆಚ್ಚಿನ ಸಮಯಾವಕಾಶ ದೊರೆತಿರಲಿಲ್ಲ. ಹೀಗಾಗಿ ಈ ಬಾರಿ ಪೂರ್ವ ಸಿದ್ಧತೆಯ ಕೊರತೆಯಿಂದಾಗಿ ಪ್ರಣತಿ ಹಿನ್ನೆಡೆ ಅನುಭವಿಸಿದ್ದಾರೆ.

Tokyo Olympics: ಬೆಳ್ಳಿ ಹುಡುಗಿ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಫ್ರೀ ಪಿಜ್ಜಾ

The Hundred: 43 ಬಾಲ್​, ಅಜೇಯ 92 ರನ್: ಜೆಮಿಮಾ ರೊಡ್ರಿಗಸ್ ಏಕಾಂಗಿ ಹೋರಾಟ: ರೋಚಕ ಜಯ

(Tokyo Olympics 2020 Indian Pranati Nayak fails to qualify for artistic gymnastics final)