The Hundred: 43 ಬಾಲ್, ಅಜೇಯ 92 ರನ್: ಜೆಮಿಮಾ ರೊಡ್ರಿಗಸ್ ಏಕಾಂಗಿ ಹೋರಾಟ: ರೋಚಕ ಜಯ
Jemimah Rodrigues: ವಿಕೆಟ್ ಕಳೆದುಕೊಳ್ಳದಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಮಾ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 17 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಚಚ್ಚುವ ಮೂಲಕ ತಂಡಕ್ಕೆ ರೋಚಕ ಜಯ ತಂದಿಟ್ಟರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್’ (The Hundred) ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ (Jemimah Rodrigues) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ನಾರ್ಥನ್ ಸೂಪರ್ ಚಾರ್ಜರ್ಸ್ ತಂಡದ ಪರ ಆಡುತ್ತಿರುವ ಜೆಮಿಮಾ ವೇಲ್ಸ್ ಫೈರ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಅಜೇಯ 92 ರನ್ ಸಿಡಿಸಿ ಏಕಾಂಗಿಯಾಗಿ ನಿಂತು ತಂಡಕ್ಕೆ ರೋಚಕ ಜಯ ತಂದಿಟ್ಟರು.
ಮೊದಲು ಬ್ಯಾಟ್ ಮಾಡಿದ ವೇಲ್ಸ್ ಫೈರ್ ತಂಡ ನಿಗದಿತ 100 ಬಾಲ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಬಾರಿಸಿತು. ತಂಡದ ಪರ ಹೇಲೇ ಮ್ಯಾಥ್ಯೂಸ್ 30 ರನ್ ಗಳಿಸಿದರೆ, ಟೇಲರ್ 18 ಹಾಗೂ ಬ್ರೋನಿ ಸ್ಮಿತ್ 19 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ನಾರ್ಥನ್ ಪರ ಲೆನ್ಸೆ ಸ್ಮಿತ್ 3 ವಿಕೆಟ್ ಕಿತ್ತರು.
ಇತ್ತ 131 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ನಾರ್ಥನ್ ತಂಡ 19 ರನ್ ಆಗುವ ಹೊತ್ತಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ನಾಯಕಿ ಲೌರೆನ್ ವಿನ್ಫಿಲ್ಡ್ ಸೊನ್ನೆ ಸುತ್ತಿದರೆ, ಲೌರಾ ವೋಲ್ವಾರ್ಡ್ ಹಾಗೂ ಹೋಲಿ ಅರ್ಮಿತೇಗ್ 1 ರನ್ಗೆ ಸುಸ್ತಾದರು. ಬೆಸ್ ಹೇಥ್ 12 ರನ್ಗೆ ನಿರ್ಗಮಿಸಿದರು. ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇತ್ತ ಓಪನರ್ ಆಗಿ ಕಣಕ್ಕಿಳಿದಿದ್ದ ಜೆಮಿಮಾ ರೊಡ್ರಿಗಸ್ ಬೌಂಡರಿಗಳ ಮಳೆ ಸುರಿಸಿದರು.
ಅಲಿಸ್ ಡೇವಿಡ್ಸನ್ ಇವರಿಗೆ ಉತ್ತಮ ಸಾಥ್ ನೀಡಿದರು. ವಿಕೆಟ್ ಕಳೆದುಕೊಳ್ಳದಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಮಾ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 17 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಚಚ್ಚುವ ಮೂಲಕ ತಂಡಕ್ಕೆ ರೋಚಕ ಜಯ ತಂದಿಟ್ಟರು.
ನಾರ್ಥನ್ ಸೂಪರ್ ಚಾರ್ಜಸ್ ತಂಡ 85 ಎಸೆತದಲ್ಲೇ 4 ವಿಕೆಟ್ ನಷ್ಟಕ್ಕೆ 131 ರನ್ ಬಾರಿಸುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ತನ್ನ ಚೊಚ್ಚಲ ಪಂದ್ಯದಲ್ಲೇ ನಾರ್ಥನ್ ತಂಡ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಭಾರತದ ಜೆಮಿಮಾ ರೊಡ್ರಿಗಸ್ ಭರವಸೆ ಮೂಡಿಸಿದ್ದಾರೆ.
Tokyo Olympics 2020: ಪಿವಿ ಸಿಂಧೂ ಭರ್ಜರಿ ಆರಂಭ: ಇಸ್ರೇಲ್ ವಿರುದ್ಧ ಭಾರೀ ಅಂತರದ ಗೆಲುವು
IND vs SL: ಇಂದು ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ ಈ ಸ್ಫೋಟಕ ಬ್ಯಾಟ್ಸ್ಮನ್?
(The Hundred Jemimah Rodrigues slams unbeaten 92 off 43 balls to power Northern Superchargers to victory)