IND vs SL: ಇಂದು ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಈ ಸ್ಫೋಟಕ ಬ್ಯಾಟ್ಸ್​ಮನ್​?

ಪೃಥ್ವಿ ಶಾ ಬದಲು ಚೊಚ್ಚಲ ಅವಕಾಶಕ್ಕಾಗಿ ಕಾಯುತ್ತಿರುವ ದೇವದತ್ ಪಡಿಕ್ಕಲ್ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

IND vs SL: ಇಂದು ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಈ ಸ್ಫೋಟಕ ಬ್ಯಾಟ್ಸ್​ಮನ್​?
Devdutt Padikkal

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡ ನಂತರ ಟೀಮ್ ಇಂಡಿಯಾ ಸದ್ಯ ಟಿ-20 ಸರಣಿಗೆ ಸಜ್ಜಾಗುತ್ತಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಣಗಂಣ ಭಾರತ – ಶ್ರೀಲಂಕಾದ (India vs Sri lanka) ಮೊದಲ ಟಿ-20 (1st T20I) ಕದನಕ್ಕೆ ವೇದಿಕೆಯಾಗಲಿದೆ. ಉಭಯ ತಂಡಗಳಿಗೆ ಈ ಪಂದ್ಯ ತುಂಬಾನೆ ಮುಖ್ಯವಾಗಲಿದೆ. ಲಂಕಾನ್ನರು ಏಕದಿನ ಸರಣಿ ಸೋತ ಹತಾಶೆಯಲ್ಲಿದ್ದರೆ, ಇತ್ತ ಧವನ್ (Shikhar Dhawan) ಪಡೆ ಆಡಿದ ಕೊನೆಯ ಪಂದ್ಯದಲ್ಲಿ ಸೋತಿದೆ. ಹೀಗಾಗಿ ಗೆಲುವಿನ ಅನಿವಾರ್ಯತೆ ಎರಡೂ ತಂಡಕ್ಕಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆ ಇದೆ.

ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ನಾಯಕ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಯಶಸ್ಸು ಕಂಡಿದ್ದಾರೆ. ಆದರೆ, ಟಿ-20 ಪಂದ್ಯದಲ್ಲಿ ಇದೇ ಜೋಡಿ ಇನ್ನಿಂಗ್ಸ್ ಆರಂಭಿಸುವುದು ಅನುಮಾನ. ಯಾಕಂದ್ರೆ ಮೂಲಗಳ ಪ್ರಕಾರ ಪೃಥ್ವಿ ಶಾ ಇಂಗ್ಲೆಂಡ್​ನಲ್ಲಿರುವ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲು ಇಂದು ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಲಿದ್ದಾರಂತೆ. ಹೀಗಾಗಿ ಪೃಥ್ವಿ ಶಾ ಬದಲು ಚೊಚ್ಚಲ ಅವಕಾಶಕ್ಕಾಗಿ ಕಾಯುತ್ತಿರುವ ದೇವದತ್ ಪಡಿಕ್ಕಲ್ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಐಪಿಎಲ್ 2020 ರಲ್ಲಿ ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ತೋರಿದ ಪಡಿಕ್ಕಲ್ 400 ರನ್ ಕಲೆಹಾಕಿ ಚೊಚ್ಚಲ ಸೀಸನ್​ನಲ್ಲೇ ದಾಖಲೆ ಬರೆದಿದ್ದರು. ಇಷ್ಟಲ್ಲದೆ ಲಂಕಾ ಸರಣಿಗೆ ಆಯ್ಕೆಯಾದ ಯುವ ಆಟಗಾರರ ಪೈಕಿ ಪಡಿಕ್ಕಲ್​ಗೆ ಮಾತ್ರ ಈವರೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮೊದಲ ಟಿ-20 ಪಂದ್ಯದಲ್ಲಿ ಇವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಇಶಾನ್ ಕಿಶನ್ ತಂಡಕ್ಕೆ ಮರಳಲಿದ್ದಾರೆ. ಇನ್ನೂ ಮನೀಶ್ ಪಾಂಡೆ ಲಯದಲ್ಲಿ ಇಲ್ಲದ ಕಾರಣ ಅಂತಿಮ ಏಕದಿನದಲ್ಲಿ 46 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬಹುದು. ಆಲ್ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಸ್ಥಾನ ಭದ್ರವಾಗಿದ್ದರೆ, ದೀಪಕ್ ಚಹಾರ್ ಹಾಗೂ ಭುವನೇಶ್ವರ್ ಕುಮಾರ್ ಬೌಲಿಂಗ್​ ವಿಭಾಗವನ್ನು ಮುನ್ನಡೆಸಲಿದ್ದಾರೆ.

ನವ್​ದೀಪ್ ಸೈನಿ ಕಳೆದ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಡದಿರದ ಕಾರಣ ಟಿ-20 ಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಅಂತೆಯೆ ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್ ಅಥವಾ ರಾಹುಲ್ ಚಹಾರ್ ಪೈಕಿ ಯಾರಿಗೆ ಸ್ಥಾನ ಎಂಬುದು ಕಾದುನೋಡಬೇಕಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

Tokyo Olympics 2020: ಕ್ರೀಡಾಕೂಟದ ಎರಡನೇ ದಿನ ಭಾರತದ ಕೆಲ ಪ್ರಮುಖ ಸ್ಪರ್ಧಿಗಳು ಪದಕದ ಬೇಟೆ ಆರಂಭಿಸಲಿದ್ದಾರೆ

Tokyo Olympics 2020: ಎಡಗಣ್ಣು ಮತ್ತು ಭುಜಕ್ಕೆ ಗಾಯಗೊಂಡು ಒಲಂಪಿಕ್ಸ್​ನಿಂದಲೇ ಹೊರಬಿದ್ದ ಬಾಕ್ಸರ್ ವಿಕಾಸ ಕೃಷ್ಣನ್

(India vs Sri lanka India Predicted XI RCB Devdutt Padikkal set for debut in 1st T20I against Sri Lank)

Click on your DTH Provider to Add TV9 Kannada