Tokyo Olympics 2020: ಕ್ರೀಡಾಕೂಟದ ಎರಡನೇ ದಿನ ಭಾರತದ ಕೆಲ ಪ್ರಮುಖ ಸ್ಪರ್ಧಿಗಳು ಪದಕದ ಬೇಟೆ ಆರಂಭಿಸಲಿದ್ದಾರೆ
ಕ್ರೀಡಾಕೂಟದ ಎರಡನೇ ದಿನವಾಗಿರುವ ರವಿವಾರ ಭಾರತದ ಕೆಲ ಪ್ರಮುಖ ಅಥ್ಲೀಟ್ಗಳು ಌಕ್ಷನ್ನಲ್ಲಿ ಕಾಣಿಸಲಿದ್ದಾರೆ. ಮೇರಿ ಕೋಮ್, ಪಿವಿ ಸಿಂಧೂ, ಸಾನಿಯಾ ಮಿರ್ಜಾ ರವಿವಾರದಿಂದ ತಮ್ಮ ತಮ್ಮ ಕ್ರೀಡೆಗಳಲ್ಲಿ ಪದಕದ ಬೇಟೆ ಆರಂಭಿಸಲಿದ್ದಾರೆ.

ಟೊಕಿಯೋ ಒಲಂಪಿಕ್ಸ್ ಮೊದಲ ದಿನ ಭಾರತ ಮಿಶ್ರಫಲ ಅನುಭವಿಸಿತು. ಮಿರಾಬಾಯಿ ಚಾನು ಭಾರತಕ್ಕೆ ಮೊದಲ ಪದಕ ಗೆದ್ದರೆ, ಶೂಟರ್ಗಳು ನಿರಾಸೆಗೊಳಿಸಿದರು. ಎಲಾವೆನಿಲ್ ವಲಾರಿವನ್ ಮತ್ತು ಅಪೂರ್ವಿ ಚೌಧುರಿ ಮಹಿಳೆಯರ 10 ಮೀ ಪಿಸ್ಟಲ್ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಹಂತಕ್ಕೆ ಅರ್ಹತೆ ಗಿಟ್ಟಿಸಲು ವಿಫಲರಾದರು. ಪುರುಷರ 10 ಮೀ ಪಿಸ್ಟಲ್ ಈವೆಂಟ್ನಲ್ಲಿ ಸೌರಭ್ ಚೌಧುರಿ 7ನೇ ಸ್ಥಾನ ಗಳಿಸಿದರು. ಪುರುಷರ ಹಾಕಿಯಲ್ಲಿ ಭಾರತ 3-2 ಆಂತರದಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ, ಮಹಿಳೆಯರು ನೆದರ್ಲ್ಯಾಂಡ್ಸ್ ವಿರುದ್ಧ 1-5 ಅಂತರದ ಸೋಲು ಅನುಭವಿಸಿದರು. ಕ್ರೀಡಾಕೂಟದ ಎರಡನೇ ದಿನವಾಗಿರುವ ರವಿವಾರ ಭಾರತದ ಕೆಲ ಪ್ರಮುಖ ಅಥ್ಲೀಟ್ಗಳು ಌಕ್ಷನ್ನಲ್ಲಿ ಕಾಣಿಸಲಿದ್ದಾರೆ. ಮೇರಿ ಕೋಮ್, ಪಿವಿ ಸಿಂಧೂ, ಸಾನಿಯಾ ಮಿರ್ಜಾ ರವಿವಾರದಿಂದ ತಮ್ಮ ತಮ್ಮ ಕ್ರೀಡಗಳಲ್ಲಿ ಪದಕದ ಬೇಟೆ ಆರಂಭಿಸಲಿದ್ದಾರೆ. ಶೂಟರ್ಗಳು-ಮನು ಭಾಕರ್, ಯಶಸ್ವಿನಿ ದೆಸ್ವಾಲ್ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಪದಕಗಳ ಸುತ್ತಿಗೆ ಅರ್ಹತೆ ಗಿಟ್ಟಿಸುವರೆ ಎನ್ನವುದು ರವಿವಾರ ಗೊತ್ತಾಗಲಿದೆ.
ಟೊಕಿಯೋ ಒಲಂಪಿಕ್ಸ್ ಎರಡನೇ ದಿನ ಭಾರತದ ಶೆಡ್ಯೂಲ್ ಕೆಳಗಿನಂತಿದೆ:
ಶೂಟಿಂಗ್:
ಮನು ಭಾಕರ್ ಮತ್ತು ಯಶಸ್ವಿನಿ ದೆಸ್ವಾಲ್ ಮಹಿಳೆಯರ 10 ಮೀ ಏರ್ ಪಿಸ್ಟಲ್ ಆರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ: ಭಾರತೀಯ ಕಾಲಮಾನ (ಐಎಸ್ಟಿ) ಪ್ರಕಾರ ಬೆಳಗ್ಗೆ 5:30 ಕ್ಕೆ
ಮಹಿಳೆಯರ 10ಮೀ ಏರ್ ಪಿಸ್ಟಲ್ ಫೈನಲ್: ಬೆಳಗ್ಗೆ 7:45 ಐಎಸ್ಟಿ
ಮೈರಾಜ್ ಅಹ್ಮದ್ ಖಾನ್ ಮತ್ತು ಅಂಗದ್ ವೀರ್ ಸಿಂಗ್ ಬಾಜ್ವಾ ಪುರುಷರ ಸ್ಕೀಟ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ- ಬೆಳಗ್ಗೆ 6:30 ಐಎಸ್ಟಿ
ದೀಪಕ್ ಕುಮಾರ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಪುರುಷರ 10 ಮೀ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ-ಬೆಳಗ್ಗೆ 9:30 ಐಎಸ್ಟಿ
ಪುರುಷರ 10 ಮೀ ಏರ್ ರೈಫಲ್ ಫೈನಲ್: ಮಧ್ಯಾಹ್ನ 12:00 ಐಎಸ್ಟಿ
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್
ಮಹಿಳೆಯರ ಅರ್ಹತಾ ಸುತ್ತಿನಲ್ಲಿ ಪ್ರಣತಿ ನಾಯಕ್ ಭಾಗವಹಿಸಲಿದ್ದಾರೆ-ಸಬ್ಡಿವಿಷನ್ 1-ಬೆಳಗ್ಗೆ 6:30 ಐಎಸ್ಟಿ
ಬ್ಯಾಡ್ಮಿಂಟನ್
ಗ್ರೂಪ್ ಜೆನಲ್ಲಿ ಪಿವಿ ಸಿಂಧೂ ಇಸ್ರೇಲಿನ ಸಿನಿಯಾ ಪೊಲಿಕಾರ್ಪೋವಾ ವಿರುದ್ಧ ಸೆಣಸಲಿದ್ದಾರೆ-ಬೆಳಗ್ಗೆ 7:10 ಐಎಸ್ಟಿ
ಬಾಕ್ಸಿಂಗ್
ಮೇರಿ ಕೋಮ್ ಡಾಮೊನಿಕನ್ ರಿಪಬ್ಲಿಕ್ನ ಮಿಗ್ವೆಲಿನಾ ಹರ್ನಾಂಡೆಜ್ ಗಾರ್ಸಿಯಾ ವಿರುದ್ಧ 51 ಕೆಜಿ ವಿಭಾಗದಲ್ಲಿ ರೌಂಡ್ ಆಫ್ 32 ಬೌಟ್ನಲ್ಲಿ ಸೆಣಸಲಿದ್ದಾರೆ- ಮಧ್ಯಾಹ್ನ 1:30 ಐಎಸ್ಟಿ
ಪುರುಷರ 63 ಕೆಜಿ ವಿಭಾಗ ರೌಂಡ್ ಆಫ್ 32 ಬೌಟ್ನಲ್ಲಿ ಮನೀಷ್ ಕೌಶಿಕ್ ಅವರ ಗ್ರೇಟ್ ಬ್ರಿಟನ್ನಿನ ಲೂಕ್ ಮ್ಯಾಕರ್ಮಾಕ್ ಅವರ ವಿರುದ್ಧ ಸೆಣಸಲಿದ್ದಾರೆ-ಮಧ್ಯಾಹ್ನ 3:06 ಐಎಸ್ಟಿ