AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2020: ಮಹಿಳೆಯರ ಡಬಲ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸಾನಿಯಾ ಮಿರ್ಜಾಗೆ ಇದು ನಾಲ್ಕನೇ ಒಲಂಪಿಕ್ಸ್

ಒಂದು ಚಿತ್ರದಲ್ಲಿ ಅವರು ಒಲಂಪಿಕ್​ ರಿಂಗ್​ಗಳ ಮುಂದೆ ಕೂತು ಮುಗುಳ್ನಗುತ್ತಿದ್ದಾರೆ. ತಾನು ಅಭ್ಯಾಸ ನಡೆಸುತ್ತಿರುವ ಒಂದು ಇಮೇಜನ್ನು ಸಹ ಅವರು ಪೋಸ್ಟ್​ ಮಾಡಿದ್ದಾರೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರಿರುವ ಸಾನಿಯಾ ಮತ್ತೊಂದಲ್ಲಿ ಫೋಟೋದಲ್ಲಿ ಭಾರತದ ಟೊಕಿಯೋ ಒಲಂಪಿಕ್ಸ್ ಕಿಟ್​ನೊಂದಿಗಿದ್ದಾರೆ.

Tokyo Olympics 2020: ಮಹಿಳೆಯರ ಡಬಲ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸಾನಿಯಾ ಮಿರ್ಜಾಗೆ ಇದು ನಾಲ್ಕನೇ ಒಲಂಪಿಕ್ಸ್
ಸಾನಿಯಾ ಮಿರ್ಜಾ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Jul 24, 2021 | 9:13 PM

Share

ಡಬಲ್ಸ್​ನಲ್ಲಿ ಹಿಂದೊಮ್ಮೆ ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿದ್ದ ಸಾನಿಯಾ ಮಿರ್ಜಾ ಒಲಂಪಿಕ್ಸ್​ನಲ್ಲಿ ನಾಲ್ಕನೇ ಬಾರಿ ಭಾಗವಹಿಸಿರುವ ಮೂವರು ಭಾರತೀಯ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ ಅಂತ ಅವರ ಲಕ್ಷಾಂತರ ಅಭಿಮಾನಿಗಳಿಗೆ ಗೊತ್ತಿರಬಹುದು. ಅವರಲ್ಲಿ ಮೊದಲನೆಯವರೆಂದರೆ ಮಾಜಿ ಸ್ಪ್ರಿಂಟರ್ ಶೈನಿ ವಿಲ್ಸನ್. ಸಾನಿಯಾ ಈ ಬಾರಿ ಅಂಕಿತಾ ರಾಯ್​ ಅವರೊಂದಿಗೆ ಜೊತೆಗೂಡಿ ಮಹಿಳೆಯರ ಟೆನಿಸ್ ಡಬಲ್ಸ್ ಈವೆಂಟ್​ನಲ್ಲಿ ಆಡಲಿದ್ದಾರೆ. ಡಿಸ್ಕಸ್ ಎಸೆತಗಾತಿ ಸೀಮಾ ಪೂನಿಯಾ ಸಹ ನಾಲ್ಕನೆ ಬಾರಿಗೆ ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಟೆನಿಸ್ ಸ್ಪರ್ಧೆಗಳು ಇನ್ನೂ ಆರಂಬವಾಗಬೇಕಿರುವುದರಿಂದ, ಸಾನಿಯಾ ಇನ್​ಸ್ಟಾಗ್ರಾಮ್​ನಲ್ಲಿ ಪೋಟೋಗಳನ್ನು ಪೋಸ್ಟ್​ ಮಾಡುತ್ತಾ ಟೊಕಿಯೋದಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದಾರೆ.

ಒಂದು ಚಿತ್ರದಲ್ಲಿ ಅವರು ಒಲಂಪಿಕ್​ ರಿಂಗ್​ಗಳ ಮುಂದೆ ಕೂತು ಮುಗುಳ್ನಗುತ್ತಿದ್ದಾರೆ. ತಾನು ಅಭ್ಯಾಸ ನಡೆಸುತ್ತಿರುವ ಒಂದು ಇಮೇಜನ್ನು ಸಹ ಅವರು ಪೋಸ್ಟ್​ ಮಾಡಿದ್ದಾರೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರಿರುವ ಸಾನಿಯಾ ಮತ್ತೊಂದಲ್ಲಿ ಫೋಟೋದಲ್ಲಿ ಭಾರತದ ಟೊಕಿಯೋ ಒಲಂಪಿಕ್ಸ್ ಕಿಟ್​ನೊಂದಿಗಿದ್ದಾರೆ.

ಎಂದಿನಂತೆ ಅವರ ಅಭಿಮಾನಿಗಳು ಎಲ್ಲ ಪೋಸ್ಟ್​ಗಳನ್ನು ಲೈಕ್ ಮಾಡಿದ್ದಾರೆ.

View this post on Instagram

A post shared by Sania Mirza (@mirzasaniar)

ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸಾನಿಯಾ ಅವರು ಒಲಂಪಿಕ್​ ಗ್ರಾಮದ ಹಲವಾರು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಅವರು ರಿಯೋ ಒಲಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿಪದಕ ಪಡೆದ ಪಿವಿ ಸಿಂಧೂ ಅವರ ಜೊತೆ ಇದ್ದಾರೆ.

ಬೇರೆ ಸ್ಟೊರಿಗಳಲ್ಲಿ ಅವರು, ಭಾರತದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕಳಿಸಿದ ಸಂದೇಶವನ್ನು ಶೇರ್ ಮಾಡಿದ್ದಾರೆ. ಆ ಸಂದೇಶ ಹೀಗಿದೆ: ‘ಅತ್ಯಂತ ಅನುಭವಿ ಮತ್ತು ಭಾರತದ ಹೆಮ್ಮೆ ಸಾನಿಯಾ ಮಿರ್ಜಾ ಮತ್ತು ಯುವ ಪ್ರತಿಭೆ, ಅಂಕಿತಾ ರೈನಾ ಮಹಿಳೆಯರ ಡಬಲ್ಸ್​ ಪಂದ್ಯಗಳನ್ನು ಆಡಲು ಸಿದ್ಧರಾಗಿದ್ದಾರೆ.’ ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆನಿಸ್​ನಲ್ಲಿ ಸದ್ದು ಮಾಡುತ್ತಿರುವ ಸುಮಿತ್ ನಗಲ್, ಸಾನಿಯಾ ಅವರನ್ನು ಕೊಂಡಾಡುತ್ತಾ ಹೇಳಿರುವುದನ್ನು ಸಹ ಹೈದರಾಬಾದಿನ ಸುಂದರಿ ಶೇರ್ ಮಾಡಿದ್ದಾರೆ.

‘ನನಗೆ ಗೊತ್ತಿರುವ ಹಾಗೆ ಅವರ ವಯಸ್ಸು ಈಗ 34, ಒಂದು ಮಗುವಿನ ತಾಯಿಯಾಗಿ, ಬಹಳ ವರ್ಷಗಳ ಕಾಲ ಟೆನಿಸ್​ನಿಂದ ದೂರವಿದ್ದು, ಗಾಯದಿಂದ ಚೇತರಿಸಿಕೊಂಡು ಒಲಂಪಿಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸುವುದು ಸಾಮಾನ್ಯ ಮಾತಲ್ಲ. ದೇಶದ ಅನೇಕ ಜನರಲ್ಲಿ ಅವರು ಖಂಡಿತವಾಗಿಯೂ ಸ್ಫೂರ್ತಿ ತುಂಬುತ್ತಿದ್ದಾರೆ, ಅಂತ ಸಾನಿಯಾ ಬೀರಿರುವ ಪ್ರಭಾವದ ಬಗ್ಗೆ ಕೇಳಿದಾಗ ನಗಲ್ ಹಾಗೆ ಹೇಳಿದ್ದರು.

ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಉಕ್ರೇನಿನ ಲುಡ್ಮಿಲಾ ಕಿಚನೊಕ್ ಮತ್ತಯ ನಾದಿಯಾ ಕಿಚನೊಕ್​ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: Tokyo Olympics 2020: ರಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದ ಸಿಂಧೂ ಈ ಬಾರಿ ಚಿನ್ನದ ಬೇಟೆಯನ್ನು ರವಿವಾರದಿಂದ ಆರಂಭಿಸಲಿದ್ದಾರೆ

Published On - 9:12 pm, Sat, 24 July 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ