Tokyo Olympics 2020: ರಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದ ಸಿಂಧೂ ಈ ಬಾರಿ ಚಿನ್ನದ ಬೇಟೆಯನ್ನು ರವಿವಾರದಿಂದ ಆರಂಭಿಸಲಿದ್ದಾರೆ

ಐದು ವರ್ಷಗಳ ಹಿಂದೆ ರಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧೂ ಈ ಬಾರಿ ಭಾರತಕ್ಕೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇದುವರೆಗೆ ಸಿಗದ ಬಂಗಾರ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿರುವುದು ನಿಶ್ಚಿತ. ಬ್ಯಾಡ್ಮಿಂಟನ್ ಸ್ಫರ್ಧೆಗಳು ಟೊಕಿಯೋನಲ್ಲಿ ಶನಿವಾರದಿಂದ ಆರಂಭವಾಗಲಿವೆ.

Tokyo Olympics 2020: ರಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದ ಸಿಂಧೂ ಈ ಬಾರಿ ಚಿನ್ನದ ಬೇಟೆಯನ್ನು ರವಿವಾರದಿಂದ ಆರಂಭಿಸಲಿದ್ದಾರೆ
ಪಿ ವಿ ಸಿಂಧೂ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2021 | 10:07 PM

ಟೊಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದು ಕೊಡಬಲ್ಲ ಆಶಾಕಿರಣವಾಗಿರುವ ಶಟ್ಲರ್ ಪಿವಿ ಸಿಂಧೂ ತಮ್ಮ ಪದಕ ಬೇಟೆಯನ್ನು ರವಿವಾರದಿಂದ ಅರಂಭಿಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ ಸಾಯಿ ಪ್ರಣೀತ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್​ಸಾಯಿರಾಜ್ ರಣ್ಕಿರಣ್ ರೆಡ್ಡಿ ತಮ್ಮ ಪಂದ್ಯಗಳನ್ನು ಶನಿವಾರ ಆಡಲಿದ್ದಾರೆ.ಐದು ವರ್ಷಗಳ ಹಿಂದೆ ರಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧೂ ಈ ಬಾರಿ ಭಾರತಕ್ಕೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇದುವರೆಗೆ ಸಿಗದ ಬಂಗಾರ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿರುವುದು ನಿಶ್ಚಿತ. ಬ್ಯಾಡ್ಮಿಂಟನ್ ಸ್ಫರ್ಧೆಗಳು ಟೊಕಿಯೋನಲ್ಲಿ ಶನಿವಾರದಿಂದ ಆರಂಭವಾಗಲಿವೆ.

2016 ರಲ್ಲಿ 21 ರ ಪ್ರಾಯದವರಾಗಿದ್ದ ಸಿಂಧೂ ಪದಕ ಗೆಲ್ಲಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಈ ಬಾರಿ ಅವರ ಚಿನ್ನದ ಪದಕ ಗೆದ್ದೇ ತೀರುತ್ತಾರೆಂಬ ವಿಶ್ವಾಸ ಭಾರತೀಯರಿಗಿದೆ. ಅವರಿಗೆ ನೆರವಾಗಲಿರುವ ಒಂದು ಅಂಶವೆಂದರೆ ಕಳೆದ ಬಾರಿಯ ಚಾಂಪಿಯನ್ ಕರೊಲಿನಾ ಮರೀನ್ ಗಾಯದಿಂದಾಗಿ ಈ ಬಾರಿ ಸ್ಪರ್ಧಿಸುತ್ತಿಲ್ಲ.

2020 ರಲ್ಲೇ ನಡೆಯಬೇಕಿದ್ದ ಟೊಕಿಯೋ ಒಲಂಪಿಕ್ಸ್ ಕೋವಿಡ್ ಪಿಡುಗಿನಿಂದ ಒಂದು ವರ್ಷ ಮುಂದೂಟಲ್ಪಟ್ಟ ನಂತರ ಸಿಂಧೂ ಅವರು ಲಂಡನ್​ನಲ್ಲಿ ತರಬೇತಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ನಂತರ ಹೊಸ ವಿದೇಶಿ ಕೋಚ್​ ಪಾರ್ಕ್ ಟೆ ಸಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಜಾರಿಯಲ್ಲಿಟ್ಟರು. ಮೂಲಗಲ ಪ್ರಕಾರ ಸಂಗ್ ಅವರು ಸಿಂಧೂರ ಡಿಫೆನ್ಸ್ ಉತ್ತಮಗೊಳಿಸಲು ಬಹಳ ಶ್ರಮ ಪಟ್ಟಿದ್ದಾರೆ. ‘ಕೋವಿಡ್ ಪಿಡುಗಿನಿಂದಾಗಿ ದೊರೆತ ಬ್ರೇಕ್ ನನಗೆ ನಹಳ ಪ್ರಯೋಜನಕಾರಿಯಾಗಿ ಸಾಬೀತಾಗಿದೆ. ಈ ಅವದಧಿಯಲ್ಲಿ ಪಡೆದ ತರಬೇತಿಯಲ್ಲಿ ನನ್ನ ಟೆಕ್ನಿಕ್ ಮತ್ತು ಸ್ಕಿಲ್​ಗಳನ್ನು ಉತ್ತಮಪಡಿಸಿಕೊಂಡೆ,’ ಎಂದು ವಿಶ್ವದ6 ನೇ ಕ್ರಮಾಂಕದ ಆಟಗಾರ್ತಿ ಟೊಕಿಯೊನಲ್ಲಿ ಮಾಧ್ಯಮದವರಿಗೆ ಹೇಳಿದರು.

‘ಪ್ರತಿಯೊಬ್ಬ ಆಟಗಾರ್ತಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಉತ್ತಮ ಪ್ರದರ್ಶನ ನೀಡುವ ಭರವಸೆ ನನಗಿದೆ. ಎಲ್ಲ ಪಂದ್ಯಗಳ ಬಗ್ಗೆ ಯೋಚಿಸದೆ ಒಂದಾದ ಮೇಲೆ ಒಂದು ಪಂದ್ಯದ ಮೇಲೆ ಫೋಕಸ್ ಮಾಡುತ್ತೇನೆ. ಹಾಗೆ ಮಾಡಿದರೆ ಒತ್ತಡವೂ ಕಡಿಮೆಯಾಗುತ್ತದೆ,‘ ಎಂದು ಹೈದರಾಬಾದಿನ ವಾಸಿ ಸಿಂಧೂ ಹೇಳಿದರು.

ಆರಂಭಿಕ ಪಂದ್ಯಗಳನ್ನು ಗೆಲ್ಲುತ್ತಾ ಹೋದರೆ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧೂ ಅವರು ಮಿಯಾ ಬ್ಲಿಚ್​ಫೆಲ್ಟ್ ಮತ್ತು ಕ್ವಾರ್ಟರ್ ಫೈನಲ್​ನಲ್ಲಿ ವಿಶ್ವ ನಂಬರ್ 5 ಅಕನೆ ಯಮಗುಚಿ ಅವರನ್ನು ಎದುರಿಸುವ ಸಾಧ್ಯತೆ ಇದೆ. ಕೋಚ್, ಪಾರ್ಕ್ ಟೆ ಸಂಗ್ ತನ್ನ ಕಟ್ಟಾ ಎದುರಾಳಿ ಎಂದು ಪರಿಗಣಿಸುವ ಮತ್ತು ವಿಶ್ವದ ನಂಬರ್ ವನ್ ಆಟಗಾರ್ತಿ ಚೈನೀಸ್ ತೈಪೆಯ ತಾಯ್ ಜು ಯಿಂಗ್ ಅವರನ್ನು ಸಿಂಧೂ ಸೆಮಿಫೈನಲ್​ನಲ್ಲಿ ಎದುರಿಸಬಹುದು. ರಿಯೋ ಒಲಂಪಿಕ್ಸ್​ನಲ್ಲಿ ಸಿಂಧೂ ಅವರು ಯಿಂಗ್​ರನ್ನು ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದರು,

ಪುರುಷರ ವಿಭಾಗಲ್ಲಿ ಪ್ರಣೀತ್​ಗೆ ಇದು ಮೊದಲ ಒಲಂಪಿಕ್ಸ್ ಆಗಿದ್ದು ನಾಳೆ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ 47 ನೇ ವಿಶ್ವ ಱಂಕಿನ ಇಸ್ರೇಲಿನ ಮಿಶಾ ಜಿಲ್ಬರ್​ಮನ್ ಅವರನ್ನು ಎದುರಿಸಲಿದ್ದಾರೆ. ಪರುಷರ ಡಬಲ್ಸ್ ನಲ್ಲಿ ಚಿರಾಗ್ ಮತ್ತು ಸಾತ್ವಿಕ್ ಸಹ ಬಾರತಕ್ಕೆ ಮೆಡಲ್ ಗೆದ್ದು ಕೊಡುವ ನಿರೀಕ್ಷೆಇದೆ.

ಇದನ್ನೂ ಓದಿ: Tokyo Olympics: ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ; ಪ್ರತಿ ದೇಶದ 6 ಅಧಿಕಾರಿಗಳಿಗೆ ಮಾತ್ರ ಪ್ರವೇಶ.. 15 ದೇಶಗಳ ನಾಯಕರು ಭಾಗಿ

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ