Tokyo Olympics 2020: ಆರ್ಚರಿ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ-ಪ್ರವೀಣ್
ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಪ್ರವೀಣ್ ಅವರು ಸೌತ್ ಕೊರಿಯಾ ತಂಡವನ್ನು ಎದುರಿಸಲಿದೆ.
ಭಾರತದ ಕ್ರೀಡಾಪಟುಗಳು ಪ್ರಸಕ್ತ ಟೋಕಿಯೋ ಒಲಿಂಪಿಕ್ಸ್ನಲ್ಲಿ (Tokyo Olympics 2020) ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಭಾರತದ ಕಾಲಮಾನದ ಪ್ರಕಾರ ಇಂದು ಮುಂಜಾನೆ ನಡೆದ ಆರ್ಚರಿ ಮಿಶ್ರ ಡಬಲ್ಸ್‌ನಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ (Deepika Kumari) ಮತ್ತು ಪ್ರವೀಣ್ ಜಾದವ್ ಗೆದ್ದು ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಶನಿವಾರ ನಡೆದ ಆರ್ಚರಿ ಮಿಶ್ರ ಡಬಲ್ಸ್ನ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಅವರು ಚೈನೀಸ್ ತೈಪೆ ವಿರುದ್ಧ 5-3 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಪ್ರವೀಣ್ ಅವರು ಸೌತ್ ಕೊರಿಯಾ ತಂಡವನ್ನು ಎದುರಿಸಲಿದೆ.
? to win…
Deepika Kumari delivers a victory for India in the first-ever mixed team match at the @Olympics.#ArcheryatTokyo #archery pic.twitter.com/x0JwjEdz4m
— World Archery (@worldarchery) July 24, 2021
ಇದೇ ಮೊದಲ ಬಾರಿಗೆ ಈ ಇಬ್ಬರು ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಿಳಾ ಹಾಗೂ ಪುರುಷರ ತಂಡ ಸ್ಪರ್ಧಿಗಳನ್ನು ಮಿಶ್ರ ಡಬಲ್ಸ್‌ಗೆ ಆಯ್ಕೆ ಮಾಡುವ ಕಾರಣ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಈ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಆರಂಭದಲ್ಲಿ ಭಾರತ ತಂಡ ಮೊದಲ ಸೆಟ್‌ನ ಅಂತ್ಯಕ್ಕೆ 0-2 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ಬಳಿಕ ಅದ್ಭುತ ಪ್ರದರ್ಶನದ ಮೂಲಕ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದ ಭಾರತದ ಜೋಡಿ ಎರಡನೇ ಸೆಟ್‌ನಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ ಚೈನೀಸ್ ತೈಪೆ ವಿರುದ್ಧ ಮೇಲುಗೈ ಸಾಧಿಸಿ ಗೆಲುವು ಸಂಪಾದಿಸಿದೆ.
ಈ ಬಗ್ಗೆ ಮಾತನಾಡಿದ ದೀಪಿಕಾ, “ನಾವು ಒಲಿಂಪಿಕ್ ಮೆಡಲ್ ತೊಡಲು ಕಾಯುತ್ತಿದ್ದೇವೆ. ಅತನು ಜೊತೆ ಆಡಬಬೇಕೆಂದು ಅಂದುಕೊಂಡಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. ನನ್ನ ಕೈಲಕಾದಷ್ಟು ಪ್ರಯತ್ನ ಪಡುತ್ತೇನೆ” ಎಂದು ಹೇಳಿದರು. ಮಹಿಳಾ ಆರ್ಚರಿಯಲ್ಲಿ ವೈಯಕ್ತಿಕ 9ನೇ ಸ್ಥಾನದೊಂದಿಗೆ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
ಇನ್ನೂ ಮಹಿಳಾ ಆರ್ಚರಿ ಸ್ಪರ್ಧೆಯನ್ನು ಸೋನಿ ನೆಟ್ವರ್ಕ್ ಪ್ರಸಾರಗೊಳಿಸಿರಲಿಲ್ಲ. ಭಾರತೀಯ ಸ್ಪರ್ಧಿಯಿದ್ದ ಈ ಈವೆಂಟನ್ನು ವೀಕ್ಷಿಸಲು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೀಗಾಗಿ ಅಧಿಕೃತ ಪ್ರಸಾರಕ ಸೋನಿ ನೆಟ್ವರ್ಕ್ಸ್ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಟ್ವಿಟ್ಟರ್ ಮೂಲಕ ಹೆಚ್ಚಿನವರು ಅಸಮಾಧಾನ ಹೊರಹಾಕಿದ್ದಾರೆ.
(Tokyo Olympics 2020 Pair of Deepika and Pravin qualify for quarterfinals in Archery Mixed Team event)
Published On - 7:17 am, Sat, 24 July 21