Tokyo Olympics 2020: ಹಾಕಿಯಲ್ಲಿ ಗತವೈಭವಕ್ಕೆ ಮರಳಲು ಪ್ರಯತ್ನಿಸುತ್ತಿರುವ ಭಾರತ ತನ್ನ ಅಭಿಯಾನವನ್ನು ಶನಿವಾರದಿಂದ ಆರಂಭಿಸಲಿದೆ

1980ರ ಮಾಸ್ಕೋ ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಕಂಚಿನ ಪದಕ ಗೆಲ್ಲುವುದು ಸಹ ಸಾಧ್ಯವಾಗಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಟೀಮಿನ ಪ್ರದರ್ಶನಗಳು ಉತ್ತಮಗೊಂಡಿದ್ದು ವಿಶ್ವ ಱಂಕಿಂಗ್​ನಲ್ಲಿ 4 ನೇ ಸ್ಥಾನದಲ್ಲಿದೆ. ಪರಿಣಿತರು ಹೇಳುವ ಹಾಗೆ ಈ ಬಾರಿ ಭಾರತಕ್ಕೆ ಪದಕ ಗೆಲ್ಲುವ ಅತ್ಯುತ್ತಮ ಅವಕಾಶವಿದೆ.

Tokyo Olympics 2020: ಹಾಕಿಯಲ್ಲಿ ಗತವೈಭವಕ್ಕೆ ಮರಳಲು ಪ್ರಯತ್ನಿಸುತ್ತಿರುವ ಭಾರತ ತನ್ನ ಅಭಿಯಾನವನ್ನು ಶನಿವಾರದಿಂದ ಆರಂಭಿಸಲಿದೆ
ಭಾರತ ಪುರುಷರ ಹಾಕಿ ತಂಡ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2021 | 8:48 PM

ಹಾಕಿಯೆಂದರೆ ಭಾರತ, ಭಾರತವೆಂದರೆ ಹಾಕಿ ಎಂಬ ಕಾಲವೊಂದಿತ್ತು. ಆದರೆ ಕಳೆದ ನಾಲ್ಕು ದಶಕಗಳಲ್ಲಿ ಬಾರತದ ಹಾಕಿ ತನ್ನ ಹಿರಿಮೆಯನ್ನು ಕಳೆದುಕೊಂಡಿದೆ. ಗತವೈಭವಕ್ಕೆ ಮರಳಲು ಪ್ರಯತ್ನಿಸುತ್ತಿರುವ ಭಾರತದ ಪುರುಷರ ಹಾಕಿ ತಂಡ ನಾಳೆಯಿಂದ (ಶನಿವಾರ) ಟೊಕಿಯೊ ಒಲಂಪಿಕ್ಸ್​ನಲ್ಲಿ ತನ್ನ ಅಭಿಯಾನವನ್ನು ಅಷ್ಟೇನೂ ಬಲಿಷ್ಠವಲ್ಲದ ನ್ಯೂಜಲೆಂಡ್​ ವಿರುದ್ಧ ಆರಂಭಿಸಲಿದೆ. ಮಹಿಳಾ ತಂಡವೂ ತನ್ನ ಮೊದಲ ಪಂದ್ಯವನ್ನು ನಾಳೆ ಆಡಲಿದೆ. ಒಲಂಪಿಕ್ಸ್ ಕೂಟಗಳಲ್ಲಿ 8 ಬಾರಿ ಚಿನ್ನದ ಪದಕವನ್ನು ಗೆದ್ದಿರುವ ಭಾರತದ ಪುರುಷ ಹಾಕಿ ತಂಡದ ಸಾಧನೆ ಅಮೋಘವಾಗಿದೆ. ಆದರೆ, 1980ರ ಮಾಸ್ಕೋ ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಕಂಚಿನ ಪದಕ ಗೆಲ್ಲುವುದು ಸಹ ಸಾಧ್ಯವಾಗಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಟೀಮಿನ ಪ್ರದರ್ಶನಗಳು ಉತ್ತಮಗೊಂಡಿದ್ದು ವಿಶ್ವ ಱಂಕಿಂಗ್​ನಲ್ಲಿ 4 ನೇ ಸ್ಥಾನದಲ್ಲಿದೆ. ಪರಿಣಿತರು ಹೇಳುವ ಹಾಗೆ ಈ ಬಾರಿ ಭಾರತಕ್ಕೆ ಪದಕ ಗೆಲ್ಲುವ ಅತ್ಯುತ್ತಮ ಅವಕಾಶವಿದೆ.

ಆದರೆ ಕೊಂಚ ಚಿಂತೆಯ ವಿಷಯವೆಂದರೆ ಭಾರತ ಹಾಕಿಯಲ್ಲಿ ಬಲಿಷ್ಠವೆನಿಸಿಕೊಂಡಿರುವ ರಾಷ್ಟ್ರಗಳ ಗುಂಪಿನಲ್ಲಿದೆ. ಎ ಗುಂಪಿನಲ್ಲಿರುವ ಭಾರತದೊಂದಿಗೆ, ಕಳೆದ ಬಾರಿಯ ಚಾಂಪಿಯನ್ಸ್ ಅರ್ಜೆಂಟೀನಾ, ಪ್ರಬಲ ಆಸ್ಟ್ರೇಲಿಯ, ಜಪಾನ್, ನ್ಯೂಜಿಲೆಂಡ್ ಮತ್ತು ಸ್ಪೇನ್ ಇವೆ. ಬಿ ಗುಂಪಿನಲ್ಲಿ ಬೆಲ್ಜಿಯಂ, ಜರ್ಮನಿ, ಗ್ರೇಟ್​ ಬ್ರಿಟನ್, ನೆದರ್​ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕ ಇವೆ.

ಪ್ರಸಕ್ತ ಱಂಕಿಂಗ್ ದೃಷ್ಟಿಯಿಂದ ನೋಡಿದರೆ ನಾಳಿನ ಪಂದ್ಯದಲ್ಲಿ ಭಾರತವೇ ನೆಚ್ಚಿನ ತಂಡವಾಗಿದೆ. 2016 ರ ರಿಯೋ ಒಲಂಪಿಕ್ಸ್ ನಂತರ ಭಾರತವು ನ್ಯೂಜಲೆಂಡ್ ವಿರುದ್ಧ ಆಡಿರುವ 11 ಪಂದ್ಯಗಳಲ್ಲಿ 8 ಬಾರಿ ಗೆದ್ದಿದೆ. ಈ 11 ಪಂದ್ಯಗಳಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ 34ಗೋಲುಗಳನ್ನು ಬಾರಿಸಿದ್ದು ಕೇವಲ 14 ಗೋಲುಗಳನ್ನು ಬಿಟ್ಟುಕೊಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಕೊನೆಯ ಬಾರಿ ಇದೇ ಮೈದಾನದಲ್ಲಿ ಎಫ್​ಐಎಚ್ ಟೆಸ್ಟ್​ ಈವೆಂಟ್​ನಲ್ಲಿ ಆಡಿ ಎದುರಾಳಿಗಳನ್ನು 5-0 ಅಂತರದಿಂದ ಸದೆಬಡೆದಿತ್ತು.

ಭಾರತ ಟೀಮಿನ ಕೋಚ್ ಗ್ರಹಾಮ್ ರೀಡ್ ಅವರು ಅತಿಯಾದ ಆತ್ಮವಿಶ್ವಾಸದೊಂದಿಗೆ ಮೈದಾನಿಕ್ಕಿಳಿಯದೆ, ಒಂದೊಂದು ಪಂದ್ಯದ ಮೇಲೆ ಮಾತ್ರ ಏಕಾಗ್ರತೆ ವಹಿಸುವಂತೆ ಆಟಗಾರರಿಗೆ ಹೇಳಿದ್ದಾರೆ.

‘ನ್ಯೂಜಿಲೆಂಡ್ ಒಂದು ಉತ್ತಮ ತಂಡವಾಗಿದೆ ಮತ್ತು ಅವರು ಆಡುವ ರೀತಿ ಬಗ್ಗೆ ನನಗೆ ಗೌರವವಿದೆ, ಮಾನಸಿಕವಾಗಿ ಅವರು ಬಲಿಷ್ಠರಾಗಿದ್ದಾರೆ ಮತ್ತು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ. ತಂಡದ ಸದಸ್ಯರ ಧೋರಣೆಯೇ ನ್ಯೂಜಿಲೆಂಡ್ ಅನ್ನು ಒಂದು ಅಪಾಯಕಾರಿ ಟೀಮನ್ನಾಗಿ ಪರಿವರ್ತಿಸಿದೆ,’ ಎಂದು ರೀಡ್​ ಹೇಳಿದರು.

‘ಅವರ ಫ್ರಂಟ್​ಲೈನ್ ಬಹಳ ಕೌಶಲ್ಯಯುಕ್ತ ಆಟಗಾರರಿಂದ ಕೂಡಿದೆ. ನಿಜ ಹೇಳಬೇಕೆಂದರೆ, ಒಲಂಪಿಕ್ಸ್​ನಲ್ಲಿ ವಿಶ್ವ ಱಂಕಿಂಗ್​ಗೆ ಹೆಚ್ಚು ಮಹತ್ವವಿರುವುದಿಲ್ಲ. ಹಾಗಾಗಿ ಶನಿವಾರ ನಾವು ಉತ್ತಮವಾಗಿ ಆಟಬೇಕಿದೆ,’ ಎಂದು ರೀಡ್​ ಹೇಳಿದರು.

ಟೊಕಿಯೋಗೆ ಆಗಮಿಸಿ ನಂತರ ಭಾರತದ ತಂಡ ನಾಳೆ ಪಂದ್ಯ ನಡೆಯಲಿರುವ ಮೈದಾನದಲ್ಲೇ ಸಾಕಷ್ಟು ಸಮಯವನನ್ನು ಕಳೆದಿದೆ. ಹಾಗಾಗಿ ಆಟಗಾರರ ಸಿದ್ಧತೆ ಜೋರಾಗಿದೆ ಎಂದು ಅವರು ಹೇಳಿದರು.

‘ಯಾವುದಾದರೂ ಹೊಸ ಸ್ಥಳದಲ್ಲಿ ಪಂದ್ಯ ಆಡುವ ಪರಿಸ್ಥಿತಿ ಎದುರಾದರೆ, ಆ ಮೈದಾನದಲ್ಲಿ ಹೆಚ್ಚಿನ ಸಮಯ ಕಳೆದು ಅದರೊಂದಿಗೆ ಫ್ಯಾಮಿಲರೈಸ್ ಆಗುವಂತೆ ಆಟಗಾರರಿಗೆ ಹೇಳುತ್ತೇನೆ. ಪೆನಾಲ್ಟಿ ಕಾರ್ನರ್​ಗಳು, ಪಿಚ್​ನ ಬೌನ್ಸ್ ಬಹಳ ಮುಖ್ಯವಾಗಿರುತ್ತವೆ, ಯಾಕೆಂದರೆ ತಲೆ ಮೇಲಿನ ಪಾಸ್​ಗಳಿಗೆ ಈಗಿನ ಪಂದ್ಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ,’ ಎಂದು ರೀಡ್​ ಹೇಳಿದರು.

‘ಕಳೆದ 3-4 ದಿನಗಳಿಂದ ಮೈದಾನದ ಪ್ರತಿಯೊಂದು ಆಯಾಮವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದ್ದೇವೆ ಮತ್ತು ತರಬೇತಿ ಸೆಷನ್​ಗಳನ್ನು ನಡೆಸಿದ್ದೇವೆ,’ ಎಂದು ರೀಡ್​ ಹೇಳಿದರು.

ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೇರಿ ಕೋಮ್ ಜೊತೆ ಭಾರತದ ಧ್ವಜ ಹಿಡಿಯವ ಗೌರವಕ್ಕೆ ಪಾತ್ರರಾಗಿದ್ದ ಟೀಮನ ನಾಯಕ ಮನ್ಪ್ರೀತ್ ಸಿಂಗ್ ಅವರು ನಾಳಿನ ಪಂದ್ಯವನ್ನು ಹಗುರವಾಗಿ ಪರಿಗಣಿಸುವ ಚಾನ್ಸೇ ಇಲ್ಲವೆಂದು ಹೇಳಿದರು.

‘ನ್ಯೂಜಿಲೆಂಡ್​ ನಿಸ್ಸಂದೇಹವಾಗಿ ಒಂದು ಉತ್ತಮ ತಂಡವಾಗಿದೆ, ಅವರರನ್ನು ಹಗುರವಾಗಿ ಪರಿಗಣಿಸುವುದು ಸಾಧ್ಯವೇ ಇಲ್ಲ, ನಮ್ಮ ಯೋಜನೆಗಳನ್ನು ಸೂಕ್ತವಾಗಿ ಕಾರ್ಯರೂಪಕ್ಕೆ ತರಬೇಕು, ಯಾವ ಸಂದರ್ಭದಲ್ಲೂ ಯಮಾರಬಾರದು,’ ಎಂದು ಸಿಂಗ್ ಹೇಳಿದರು.

ಇದುವರೆಗೆ 217 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವಿ ಬ್ಲೇರ್ ಟ್ಯಾರಂಟ್ ಕಿವೀಸ್ ತಂಡದ ನಾಯಕರಾಗಿದ್ದಾರೆ.

ಭುವನೇಶ್ವರ್​ನಲ್ಲಿ 2018 ರ ಎಫ್​ಐಎಚ್​ ಪುರುಷರ ವಿಶ್ವಕಪ್​ ಆರಂಭವಾಗುವ ಸಾಕಷ್ಟು ಮೊದಲೇ ನ್ಯೂಜಿಲೆಂಡ್, ಭಾರತಕ್ಕೆ ಆಗಮಿಸಿ ಟೆಸ್ಟ್​ಗಳನ್ನು ಆಡಿದ್ದಾಗ ಅತಿಥೇಯರು 4-0, 3-1 ಮತ್ತು 4-2 ಅಂತರದಿಂದ ಸುಲಭವಾಗಿ ಗೆದ್ದಿದ್ದರು. ಆದರೆ ಕಾಮನ್ವೆಲ್ತ್ ಕ್ರೀಡಾಕೂಟದ ನಿರ್ಣಾಯಕ ಸೆಮಿಫೈನಲ್​ನಲ್ಲಿ ಭಾರತ 2-3 ಅಂತರದ ಸೋಲು ಅನುಭವಿಸಿತ್ತು.

ಕಳೆದ ಬಾರಿಯ ಒಲಂಪಿಕ್ಸ್​ನಲ್ಲಿ (ರಿಯೋ 2016) ಕಳಪೆ ಪ್ರದರ್ಶನ ನೀಡಿದ ಭಾರತ 8 ನೇ ಸ್ಥಾನ ಗಳಿಸಿತ್ತು.

ಇದನ್ನೂ ಓದಿ: Tokyo Olympics 2020 Live: ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ವಿದ್ಯುಕ್ತ ಚಾಲನೆ: ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದ ಮೇರಿ ಕೋಮ್-ಮನ್ಪ್ರೀತ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ