Tokyo Olympics Day 2: ಭಾರತಕ್ಕೆ ಶನಿವಾರ ಸಾಲು ಸಾಲು ಸವಾಲು: ಹಾಕಿಯಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ

ನಾಳೆ ಶನಿವಾರದಿಂದ ಕ್ರೀಡಾಕೂಟದ ಕಾವು ಹೆಚ್ಚಲಿದ್ದು ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ ಭಾರತದ ಕ್ರೀಡಾಪಟುಗಳು ಸುಮಾರು 10 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

Tokyo Olympics Day 2: ಭಾರತಕ್ಕೆ ಶನಿವಾರ ಸಾಲು ಸಾಲು ಸವಾಲು: ಹಾಕಿಯಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ
Tokyo Olympics 2020
Follow us
TV9 Web
| Updated By: Vinay Bhat

Updated on: Jul 23, 2021 | 6:59 PM

ಸಾವಿರಾರು ಖಾಲಿ ಆಸನಗಳ ಮುಂದೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (Tokyo Olympics 2020) ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ. ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ಮುಂದೂಡಿಕೆಯಾಗಿದ್ದ ಒಲಿಂಪಿಕ್ ಗೇಮ್ಸ್​ಗೆ ಕ್ವಿಕ್ ಸ್ಟಾರ್ಟ್​ ಸಿಕ್ಕಿದೆ. 68,000 ಪ್ರೇಕ್ಷಕರ ಸಾಮರ್ಥ್ಯದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಸಮಾರಂಭದಲ್ಲಿ ಜಪಾನ್ ಚಕ್ರವರ್ತಿ ನರುಹಿಟೊ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸೇರಿದಂತೆ ಕೆಲವೇ ನೂರು ಅಧಿಕಾರಿಗಳು ಮತ್ತು ಗಣ್ಯರು ಹಾಜರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರವಾಗಿ ಕೇವಲ 19 ಅಥ್ಲೀಟ್‌ಗಳು ಮಾತ್ರವೇ ಭಾಗಿಯಾದರು. ಇವರ ಜೊತೆಗೆ 6 ಅಧಿಕಾರಿಗಳು ಕೂಡ ಸಾಥ್ ನೀಡದರು. ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡರು.

ನಾಳೆ ಶನಿವಾರದಿಂದ ಕ್ರೀಡಾಕೂಟದ ಕಾವು ಹೆಚ್ಚಲಿದ್ದು ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ ಭಾರತದ ಕ್ರೀಡಾಪಟುಗಳು ಸುಮಾರು 10 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಭಾರತದ ಪಾಲಿಗೆ ಶೂಟಿಂಗ್ ದೊಡ್ಡ ಸ್ಪರ್ಧೆಯಾಗಿರಲಿದೆ. ಯಾಕೆಂದರೆ ಪುರುಷರ ಹಾಗೂ ಮಹಿಳೆಯರ 10ಮೀ ಏರ್‌ರೈಫಲ್‌ ಮೆಡಲ್ ಇಂಟೆಂಟ್ ನಡೆಯಲಿದೆ. ಇದರಲ್ಲಿ ಭಾರತ ಮೊದಲ ಪದಕವನ್ನು ನಿರೀಕ್ಷಿಸಲಾಗಿದೆ.

ಭಾರತದ ಶೂಟರ್‌ಗಳ ಪೈಕಿ ದಿವ್ಯಾನ್ಶ್ ಸಿಂಗ್ ಪನ್ವಾರ್ ಹಾಗೂ ಯಶಸ್ವಿನಿ ದೇಸ್ವಾಲ್ ಈ ಇಬ್ಬರು ಪದಕದ ಮೇಲೆ ಗುರಿಯಿಡುವ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಹೀಗಾಗಿ ಬೆಳಗ್ಗೆ 5 ಗಂಟೆಗೆ ಆರಂಭವಾಗುವ ಈ ಸ್ಪರ್ಧೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಭಾರತೀಯ 10 ಎಂ ಏರ್ ರೈಫಲ್ ಶೂಟಿಂಗ್​ನಲ್ಲಿ ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲ್, ದಿವ್ಯಾನ್ಶ್ ಸಿಂಗ್ ಪನ್ವಾರ್, ದೀಪಕ್ ಕುಮಾರ್, ಮನು ಭಾಕರ್, ಯಶಸ್ವಿನಿ ದೇಸ್ವಾಲ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಪಾಲ್ಗೊಳ್ಳಲಿದ್ದಾರೆ. ಇತ್ತ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ವಿರುದ್ಧ ಹೋರಾಟ ಆರಂಭಿಸಲಿದೆ.

ಜುಲೈ 24 ರಂದು ನಡೆಯಲಿರುವ ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ ಹೀಗಿದೆ:

  1. ಈಕ್ವೆಸ್ಟ್ರಿಯನ್: ವೈಯಕ್ತಿಕ ಡ್ರೆಸ್ಸೇಜ್ ಗ್ರ್ಯಾಂಡ್ ಪ್ರಿಕ್ಸ್
  2. ಶೂಟಿಂಗ್ – ಮಹಿಳೆಯರ 10 ಮೀ ಏರ್ ರೈಫಲ್ ಅರ್ಹತಾ ಸುತ್ತು – ಬೆಳಗ್ಗೆ 5:00
  3. ಟೇಬಲ್ ಟೆನಿಸ್ – ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು – ಬೆಳಗ್ಗೆ 5:30
  4. ಟೇಬಲ್ ಟೆನಿಸ್ – ಮಹಿಳಾ ಸಿಂಗಲ್ಸ್ ಪ್ರಾಥಮಿಕ ಸುತ್ತು – ಬೆಳಗ್ಗೆ 5:30
  5. ಬಿಲ್ಲುಗಾರಿಕೆ – ಮಿಕ್ಸ್ಡ್ ಟೀಮ್ – ಬೆಳಗ್ಗೆ 6:00
  6. ಹಾಕಿ – ಪುರುಷರು vs ನ್ಯೂಜಿಲೆಂಡ್ – ಬೆಳಗ್ಗೆ 6.30
  7. ಶೂಟಿಂಗ್ – ಮಹಿಳೆಯರ 10 ಮೀ ಏರ್ ರೈಫಲ್ ಫೈನಲ್ – ಬೆಳಗ್ಗೆ 7:15
  8. ಜೂಡೋ – ಮಹಿಳೆಯರು 48 ಕೆಜಿ, ಎಲ್ಲಾ ಸುತ್ತುಗಳು – ಬೆಳಗ್ಗೆ 7:30
  9. ಟೇಬಲ್ ಟೆನಿಸ್ – ಮಿಶ್ರ ಡಬಲ್ಸ್ 16 ನೇ ಸುತ್ತಿನ ಪಂದ್ಯ – ಬೆಳಗ್ಗೆ 7:45
  10. ರೋಯಿಂಗ್ – ಪುರುಷರ ಲೈಟ್ವೈಟ್ ಡಬಲ್ ಸ್ಕಲ್ಸ್ – ಬೆಳಗ್ಗೆ 7:50
  11. ಬಾಕ್ಸಿಂಗ್ – ಮಹಿಳಾ ವೆಲ್ಟರ್ವೈಟ್ – ಬೆಳಗ್ಗೆ 8:00
  12. ಶೂಟಿಂಗ್ – ಪುರುಷರ 10ಮೀ ಏರ್ ಪಿಸ್ತೂಲ್ ಅರ್ಹತೆ – ಬೆಳಗ್ಗೆ 9:30
  13. ವೇಟ್ಲಿಫ್ಟಿಂಗ್ – ಮಹಿಳೆಯರ 49 ಕೆಜಿ – ಬೆಳಗ್ಗೆ 10:20
  14. ಬಿಲ್ಲುಗಾರಿಕೆ – ಮಿಶ್ರ ತಂಡದ ಪದಕ ಸುತ್ತುಗಳು – ಬೆಳಗ್ಗೆ 10:45
  15. ಶೂಟಿಂಗ್ – ಪುರುಷರ 10 ಮೀ ಏರ್ ಪಿಸ್ತೂಲ್, ಫೈನಲ್ – 12:00 PM
  16. ಬ್ಯಾಡ್ಮಿಂಟನ್ – ಪುರುಷರ ಡಬಲ್ಸ್ – ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ Vs ಲೀ ಯಾಂಗ್ ಮತ್ತು ಚಿ-ಲಿನ್ ವಾಂಗ್ (ತೈಪೆ) – 12:20 PM
  17. ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ – ಬಿ ಸಾಯಿ ಪ್ರಣೀತ್ vs ಮಿಶಾ ಜಿಲ್ಬರ್ಮನ್ (ಇಸ್ರೇಲ್) – 13:00 PM
  18. ಬಾಕ್ಸಿಂಗ್ – 32 ರ ಪುರುಷರ ವೆಲ್ಟರ್ವೈಟ್ ಸುತ್ತು – ವಿಕಾಸ್ ಕ್ರಿಶನ್ vs ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ – 15:54 PM
  19. ಹಾಕಿ – ಭಾರತ ವುಮೆನ್ vs ನೆದರ್ಲ್ಯಾಂಡ್ಸ್ ವುಮೆನ್ – 17.15 PM

Tokyo Olympics 2020: ಪುರುಷರ ಆರ್ಚರಿಯಲ್ಲಿ ಭಾರತಕ್ಕೆ ನಿರಾಸೆ: ದೀಪಿಕಾಗೆ 9ನೇ ಸ್ಥಾನ

Tokyo Olympics 2020 Live:

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ