Tokyo Olympics: ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ; ಪ್ರತಿ ದೇಶದ 6 ಅಧಿಕಾರಿಗಳಿಗೆ ಮಾತ್ರ ಪ್ರವೇಶ.. 15 ದೇಶಗಳ ನಾಯಕರು ಭಾಗಿ

Tokyo Olympics: ಪ್ರತಿ ದೇಶದ ಆರು ಅಧಿಕಾರಿಗಳು ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 70 ಕ್ಯಾಬಿನೆಟ್ ಮಟ್ಟದ ಅಧಿಕಾರಿಗಳು ಜಪಾನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಕೈಟೊ ಹೇಳಿದರು.

Tokyo Olympics: ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ; ಪ್ರತಿ ದೇಶದ 6 ಅಧಿಕಾರಿಗಳಿಗೆ ಮಾತ್ರ ಪ್ರವೇಶ.. 15 ದೇಶಗಳ ನಾಯಕರು ಭಾಗಿ
ಟೋಕಿಯೋ ಒಲಿಂಪಿಕ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 21, 2021 | 7:43 PM

ಕೋವಿಡ್ ಸಾಂಕ್ರಾಮಿಕ ಪೀಡಿತ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ ಶುಕ್ರವಾರ ಉದ್ಘಾಟನೆಯಾಗುತ್ತಿದ್ದು, ಸಮಾರಂಭದಲ್ಲಿ ಸುಮಾರು 15 ದೇಶಗಳ ನಾಯಕರು ಹಾಜರಾಗುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಎಲ್ಲಾ ದೇಶಗಳ ಆರು ಅಧಿಕಾರಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಸಿಗುತ್ತದೆ. ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಇದನ್ನು ಖಚಿತಪಡಿಸಿದ್ದಾರೆ. ಮಂಗಳವಾರವೇ, ಟೋಕಿಯೊ ಒಲಿಂಪಿಕ್ಸ್‌ನ ಸಂಘಟನಾ ಸಮಿತಿಯು ಕೊರೊನಾದ ಪ್ರಕರಣಗಳು ಈ ರೀತಿ ಹೆಚ್ಚುತ್ತಿದ್ದರೆ ಕ್ರೀಡಾಕೂಟವನ್ನು ರದ್ದುಗೊಳಿಸಬಹುದೆಂಬ ಆತಂಕ ವ್ಯಕ್ತಪಡಿಸಿದ್ದರು. ವರದಿಗಳ ಪ್ರಕಾರ, ಸಮಾರಂಭದಲ್ಲಿ ವೈಯಕ್ತಿಕವಾಗಿ ಕ್ರೀಡಾಂಗಣಕ್ಕೆ ಹಾಜರಾಗುವವರ ಸಂಖ್ಯೆ ಸುಮಾರು 1000 ರಷ್ಟಿರಬಹುದು.

ಪ್ರತಿ ದೇಶದಿಂದ ಕೇವಲ ಆರು ಆಟಗಾರರು ಭಾಗವಹಿಸಲಿದ್ದಾರೆ ಈ ಕಾರಣಕ್ಕಾಗಿ, ಪ್ರತಿ ದೇಶದ ಆರು ಅಧಿಕಾರಿಗಳು ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 70 ಕ್ಯಾಬಿನೆಟ್ ಮಟ್ಟದ ಅಧಿಕಾರಿಗಳು ಜಪಾನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಕೈಟೊ ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ ಎಷ್ಟು ವಿಐಪಿಗಳು ಹಾಜರಾಗುತ್ತಾರೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ ಎಂದು ಅವರು ಹೇಳಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಮಂಗೋಲಿಯನ್ ಪ್ರಧಾನಿ ಲುವ್ಸನಮ್ಸರಾಯ್ ಒಯುನ್ ಎರ್ಡೆನ್ ಮತ್ತು ಯುಎಸ್ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಇತರ ಜಾಗತಿಕ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಅನೇಕ ನಾಯಕರು ಪ್ರವಾಸವನ್ನು ರದ್ದುಗೊಳಿಸಬೇಕಾಯಿತು ಆದಾಗ್ಯೂ, ಜಪಾನ್‌ನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ, ಅನೇಕ ನಾಯಕರು ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಭೇಟಿಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜಾಗತಿಕ ನಾಯಕರೊಂದಿಗಿನ ಸಂಬಂಧವನ್ನು ಬಲಪಡಿಸಲು ಕ್ರೀಡಾಕೂಟವು ಪ್ರಧಾನಿ ಯೋಶಿಹೈಡ್ ಸುಗಾ ಅವರಿಗೆ ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಕೈಟೊ ಹೇಳಿದರು. ಕಳೆದ ವರ್ಷ ಮುಂದೂಡಲ್ಪಟ್ಟ ಟೋಕಿಯೋ ಕ್ರೀಡಾಕೂಟವು ತುರ್ತು ಪರಿಸ್ಥಿತಿಯ ಮಧ್ಯೆ ನಡೆಯಲಿದ್ದು, ಈ ಸಮಯದಲ್ಲಿ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಅನುಮತಿಸಲಾಗುವುದಿಲ್ಲ.