ಎಲ್ಲಾ ಪ್ಲಾನ್ ಪ್ರಕಾರ ನಡೆದರೂ ಲಾಕರ್ ಓಪನ್ ಮಾಡಲು ಆಗಿಲ್ಲ; ಅಮೆಜಾನ್ ಪಿಕ್ ಪಾಯಿಂಟ್​ನಲ್ಲಿ ಕಳ್ಳತನ ಯತ್ನ ವಿಫಲ

ಬರೊಬ್ಬರಿ 10 ಲಕ್ಷ ನಗದು, ದಾಖಲೆಗಳು ತುಂಬಿದ್ದ ಲಾಕರ್ ಪತ್ತೆಯಾಗಿದೆ. ಪಕ್ಕಾ ಪ್ಲ್ಯಾನ್ ಮಾಡಿ, ಸಿಸಿಟಿವಿ ಡಿವಿಆರ್ ಎಲ್ಲವನ್ನೂ ಮಾಯ ಮಾಡಿರುವ ಕಳ್ಳರು ಕೊನೆಗೂ ಲಾಕರ್ ಓಪನ್ ಮಾಡಲಾಗದೇ ಸೋತಿದ್ದಾರೆ.

ಎಲ್ಲಾ ಪ್ಲಾನ್ ಪ್ರಕಾರ ನಡೆದರೂ ಲಾಕರ್ ಓಪನ್ ಮಾಡಲು ಆಗಿಲ್ಲ; ಅಮೆಜಾನ್ ಪಿಕ್ ಪಾಯಿಂಟ್​ನಲ್ಲಿ ಕಳ್ಳತನ ಯತ್ನ ವಿಫಲ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಮೆಜಾನ್ ಪಿಕ್ ಪಾಯಿಂಟ್ ಗೋಡೌನ್​ನಲ್ಲಿ ಕಳವು ಮಾಡಲು ಯತ್ನಿಸಿ, ವಿಫಲರಾಗಿ, ಬಳಿಕ ಲಾಕರ್​ನ್ನು ಹಾಗೇ ಬಿಟ್ಟುಹೋದ ಘಟನೆ ನಗರದ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮೆಜಾನ್ ಪಿಕ್ ಪಾಯಿಂಟ್ ಗೋಡೌನ್‌ನಲ್ಲಿ ಕಳವು ಮಾಡಲು ಯತ್ನಸಿದ್ದ ಖದೀಮರು, ಗೋದಾಮಿನಲ್ಲಿದ್ದ 60 ಕೆಜಿಯ ಲಾಕರ್ ಎಗರಿಸಿದ್ದರು. ಭದ್ರತಾ ಸಿಬ್ಬಂದಿಗೂ ತಿಳಿಯದಂತೆ ಲಾಕರ್ ಎಗರಿಸಿದ್ದರು. ಆದರೆ ಕಳ್ಳತನ ಮಾಡಲು ಆಗಿಲ್ಲ.

ಗೋದಾಮಿನಿಂದ ಕದ್ದು ತಂದ ಲಾಕರ್ ಓಪನ್ ಮಾಡಲಾಗಲಿಲ್ಲ. ಹಾಗಾಗಿ, ಕಳ್ಳರು ಲಾಕರ್​ನ್ನು ಹಾಗೇ ಬಿಟ್ಟುಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಇದ್ದ ಲಾಕರ್ ಬಿಟ್ಟುಹೋಗಿದ್ದಾರೆ. ಲಾಕರ್ ಓಪನ್ ಮಾಡಲಾಗದೆ ಬಿಟ್ಟು ಪರಾರಿ ಆಗಿದ್ದಾರೆ. ಗೋದಾಮಿನಿಂದ 500 ಮೀಟರ್ ದೂರದಲ್ಲಿ ಲಾಕರ್ ಪತ್ತೆಯಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮೀಯ ವಿಧಾನದಲ್ಲಿ ಕಳ್ಳತನ ಯತ್ನ ನಡೆದಿತ್ತು. ಆದರೆ, ಕೈಚಳಕ ತೊರಿಸಲಾಗದೆ ಖದೀಮರು ಸೋತಿದ್ದಾರೆ. ಇದೇ ತಿಂಗಳ 17ರಂದು ನಡೆದಿದ್ದ ಕಳ್ಳತನ ನಡೆದಿತ್ತು. ತಡರಾತ್ರಿ ಮಳೆಯ ಮಧ್ಯೆ ಎಂಟ್ರಿ ಕೊಟ್ಟ ಕಳ್ಳರಿಂದ ಕೃತ್ಯ ನಡೆದಿತ್ತು. ಆದರೆ, 10 ಅಡಿ ಕಾಂಪೌಂಡ್ ಹಾರಿದ ಖದೀಮರಿಗೆ ಲಾಕರ್ ಬಿಚ್ಚಲಾಗಿಲ್ಲ. ಬಳಿಕ 60 ಕೆಜಿಯ ಲಾಕರ್ ಸಮೇತ ಎಸ್ಕೇಪ್ ಕಳ್ಳರು ಪರಾರಿ ಆಗಿದ್ದಾರೆ.

ಮರುದಿನ ಕೃತ್ಯದ ಮಾಹಿತಿ ಹಿನ್ನಲೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ಸಂಬಂಧ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಜೊತೆಗೆ ಡಾಗ್ ಸ್ಕ್ವಾಡ್ ಕರೆಸಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಡಾಗ್ ಸ್ಕ್ವಾಡ್​ನಿಂದ ಕದ್ದ ಲಾಕರ್ ಟ್ರೇಸ್ ಮಾಡಲಾಗಿದೆ. ಅಮೇಜಾನ್ ಪಾಯಿಂಟ್​ನಿಂದ 500 ಮೀಟರ್ ದೂರದ ಪೊದೆಯಲ್ಲಿ ಲಾಕರ್ ಪತ್ತೆಯಾಗಿದೆ.

ಬರೊಬ್ಬರಿ 10 ಲಕ್ಷ ನಗದು, ದಾಖಲೆಗಳು ತುಂಬಿದ್ದ ಲಾಕರ್ ಪತ್ತೆಯಾಗಿದೆ. ಪಕ್ಕಾ ಪ್ಲ್ಯಾನ್ ಮಾಡಿ, ಸಿಸಿಟಿವಿ ಡಿವಿಆರ್ ಎಲ್ಲವನ್ನೂ ಮಾಯ ಮಾಡಿರುವ ಕಳ್ಳರು ಕೊನೆಗೂ ಲಾಕರ್ ಓಪನ್ ಮಾಡಲಾಗದೇ ಸೋತಿದ್ದಾರೆ. ಆದರೆ, ಈಗ ಸೆಕ್ಯೂರಿಟಿ ಗಮನಕ್ಕೂ ಬಾರದ ರೀತಿ ಕೃತ್ಯ ನಡೆದಿರುವುದರಿಂದ ಪೊಲೀಸರಿಗೆ ಅನುಮಾನ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರು: ಎಫ್​ಐಆರ್ ಆದರೂ ಬಂಧಿಸದಿದ್ದವರ ಮಾಹಿತಿ ಸಂಗ್ರಹಿಸಲು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ

Crime News: 26 ವರ್ಷದ ಹಿಂದಿನ ಕೊಲೆ ಆರೋಪ ಸಾಬೀತು; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ

(Amazon Pick Point Godown Theft attempt at Bengaluru Thieves could not Open Locker)

Click on your DTH Provider to Add TV9 Kannada