Crime News: 26 ವರ್ಷದ ಹಿಂದಿನ ಕೊಲೆ ಆರೋಪ ಸಾಬೀತು; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ
Murder News Today: ಸೂರ್ಯ ಪ್ರಕಾಶ್ ಯಾದವ್ ಎಂಬುವವರನ್ನು 1995ರ ಜೂನ್ 30ರಂದು ಚುನಾವಣೆ ಸಂದರ್ಭದಲ್ಲಿ ಕೊಲೆ ಮಾಡಲಾಗಿತ್ತು. ಚುನಾವಣೆ ವೇಳೆ ರಾಜಕೀಯ ದ್ವೇಷದ ಕಾರಣಕ್ಕೆ ಸೂರ್ಯಪ್ರಕಾಶ್ ಯಾದವ್ ಅವರನ್ನು 26 ವರ್ಷದ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಸುಲ್ತಾನ್ಪುರ: ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರಿಗೆ ಜೀವಾವಧಿ ಶಿಕ್ಷೆ (Life Sentence) ವಿಧಿಸಲಾಗಿದೆ. 26 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ (Murder Case) ಇದೀಗ ಶಿಕ್ಷೆ ಪ್ರಕಟವಾಗಿದೆ. ಕೊಲೆಯ ಆರೋಪ ಸಾಬೀತಾಗಿರುವುದರಿಂದ ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.
ಎಂಪಿ-ಎಂಎಲ್ಎ ಕೋರ್ಟ್ ನ್ಯಾಯಾಧೀಶ ಪಿಕೆ. ಜಯಂತ್ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯ ಜಲಮಂಡಳಿ ಮಾಜಿ ಅಧ್ಯಕ್ಷ ಜಂಗ್ ಬಹದ್ದೂರ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸೂರ್ಯ ಪ್ರಕಾಶ್ ಯಾದವ್ ಎಂಬುವವರನ್ನು 1995ರ ಜೂನ್ 30ರಂದು ಚುನಾವಣೆ ಸಂದರ್ಭದಲ್ಲಿ ಕೊಲೆ ಮಾಡಲಾಗಿತ್ತು. ಚುನಾವಣೆ ವೇಳೆ ರಾಜಕೀಯ ದ್ವೇಷದ ಕಾರಣಕ್ಕೆ ಸೂರ್ಯಪ್ರಕಾಶ್ ಯಾದವ್ ಅವರನ್ನು 26 ವರ್ಷದ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಸೂರ್ಯಪ್ರಕಾಶ್ ಯಾದವ್ ಅವರ ಸೋದರ ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣವನ್ನು ಮರು ವಿಚಾರಣೆ ಮಾಡಲಾಗಿತ್ತು. ಬಿಜೆಪಿ ನಾಯಕ ಜಂಗಹ್ ಬಹದ್ದೂರ್ ಸಿಂಗ್, ಅವರ ಮಗ ದದ್ದನ್ ಸಿಂಗ್ ಮತ್ತು ಅಕ್ಕನ ಮಗ ರಮೇಶ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿತ್ತು. ಅವರಲ್ಲಿ ದದ್ದನ್ ಸಿಂಗ್ ಅವರನ್ನು ಕೆಲವು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು. ಇದೀಗ, ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.
ಇದನ್ನೂ ಓದಿ: Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ
(Crime News Uttar Pradesh BJP Leader gets Life Term in 26 Year old Murder Case)
Published On - 9:20 pm, Thu, 22 July 21