AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ

Crime News Today: ಡಾ. ಸ್ವಪ್ನಾ ದತ್ತ ಅಲ್ಲಿ ಸುತ್ತಮುತ್ತಲೂ ಬಹಳ ಪ್ರಸಿದ್ಧಿ ಪಡೆದ ವೈದ್ಯೆಯಾಗಿದ್ದು, ಅಲ್ಲಿನ ಮಾಜಿ ಶಾಸಕ ರಜನಿಕಾಂತ್ ದತ್ತಾ ಅವರ ಮಗನನ್ನು ಮದುವೆಯಾಗಿದ್ದರು.

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 21, 2021 | 8:19 PM

Share

ವಾರಾಣಸಿ: ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದ ಕಾರಣದಿಂದ ಉತ್ತರ ಪ್ರದೇಶದ ವಾರಾಣಸಿಯ ಮಹಿಳೆ ತನ್ನ ಗಂಡನನ್ನು ವೈದ್ಯೆಯಾದ ತನ್ನ ತಂಗಿಯ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯಲ್ಲಿ ಯಾವ ಸಮಸ್ಯೆಯೂ ಇಲ್ಲವೆಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಬಳಿಕ ತನ್ನ ಭಾವನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಆಕೆ ಅವರಿಬ್ಬರಿಗೂ ಮಕ್ಕಳಾಗದಿರುವುದಕ್ಕೆ ಆತನೇ ಕಾರಣ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಆತ ತನ್ನ ನಾದಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ವಾರಾಣಸಿಯ ಮಹಮೋರ್​ಗಂಜ್ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡದಿದ್ದು, ಈ ಭೀಕರ ಕೊಲೆಗೆ ವಾರಾಣಸಿ ಬೆಚ್ಚಿಬಿದ್ದಿದೆ. ಇಲ್ಲಿ ಬಹಳ ಫೇಮಸ್ ಆಗಿರುವ ಡಾ. ಸ್ವಪ್ನಾ ದತ್ತಾ ತನ್ನ ಭಾವನಿಂದಲೇ ಕೊಲೆಯಾಗಿರುವ ವೈದ್ಯೆ. ಸ್ವಪ್ನಾ ಅವರ ಅಕ್ಕನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ, ತಾನೇ ಅವರಿಬ್ಬರಿಗೂ ಪರೀಕ್ಷೆ ಮಾಡಿಸಿದ್ದಳು. ಆ ಪರೀಕ್ಷೆಯಲ್ಲಿ ತನ್ನ ಭಾವ ಅನಿಲ್ ದತ್ತನಿಗೆ ಮಕ್ಕಳಾಗಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿತ್ತು. ಆದರೆ, ತನ್ನ ನಾದಿನಿ ಬೇಕೆಂದೇ ತನ್ನ ಗಂಡಸ್ತನದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವಮಾನ ಮಾಡಿದ್ದಾಳೆಂಬ ಕೋಪದಲ್ಲಿ ಆತ ಡಾ. ಸ್ವಪ್ನಾ ಅವರನ್ನು ಕೊಲೆ ಮಾಡಿದ್ದಾನೆ.

ಡಾ. ಸ್ವಪ್ನಾ ದತ್ತ ಅಲ್ಲಿ ಸುತ್ತಮುತ್ತಲೂ ಬಹಳ ಪ್ರಸಿದ್ಧಿ ಪಡೆದ ವೈದ್ಯೆಯಾಗಿದ್ದು, ಅಲ್ಲಿನ ಮಾಜಿ ಶಾಸಕ ರಜನಿಕಾಂತ್ ದತ್ತಾ ಅವರ ಮಗನನ್ನು ಮದುವೆಯಾಗಿದ್ದರು. ಹೀಗಾಗಿ, ಈ ಕೊಲೆ ಪ್ರಕರಣ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಅನಿಲ್ ದತ್ತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮುಂದೆ ಅನಿಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸುತ್ತಿಗೆಯಿಂದ ಹೊಡೆದು ಸೀಸರ್​ನಿಂದ ಡಾ. ಸ್ವಪ್ನಾಳನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.

ನಾನು ಮನೆಗೆ ಹೋದಾಗ ನನ್ನೊಂದಿಗೆ ಜಗಳವಾಡಿದ್ದ ಸ್ವಪ್ನಾ ನನ್ನ ಅಕ್ಕನಿಗೆ ಒಂದು ಮಗು ಕೊಡುವ ಯೋಗ್ಯತೆಯೂ ನಿನಗಿಲ್ಲ ಎಂದು ಹೀಯಾಳಿಸಿದ್ದಳು. ಇದರಿಂದ ಕೋಪ ಬಂದು ಆಕೆಯನ್ನು ಕೊಲೆ ಮಾಡಿದೆ ಎಂದು ಅನಿಲ್ ದತ್ತಾ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Crime News: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಸೆಕ್ಸ್​ ದಂಧೆ; ನಿರ್ಮಾಪಕ ಸೇರಿ ಮೂವರ ಬಂಧನ

(Crime News Varanasi Lady Doctor Brutally Murders by Brother-in-law for calling him impotent)

Published On - 8:18 pm, Wed, 21 July 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ