ಪರಪ್ಪನ ಜೈಲಿನಲ್ಲಿ ರೌಡಿ ನೆಟ್​​ವರ್ಕ್​​ಗೆ ಬ್ರೇಕ್​ ಹಾಕಲು ಫೀಲ್ಡ್​​ಗೆ ಇಳಿದ ಆಯುಕ್ತ ಕಮಲ್ ಪಂತ್ ಮತ್ತು ಡಿಜಿ ಅಲೋಕ್ ಮೋಹನ್

parappana agrahara jail: ಒಂದೇ ಗ್ಯಾಂಗ್​ಗೆ ಸೇರಿದ ಹಲವು ಮಂದಿ ಒಂದೇ ಕಡೆ ಸೇರಿ ಪಾತಕಗಳಿಗೆ ಸ್ಕೆಚ್ ಹಾಕುತ್ತಿದ್ದಾರೆ. ಹೀಗಾಗಿ ಆ ಗ್ಯಾಂಗ್ ನ ಸದಸ್ಯರ ಡಿವೈಡ್ ಗೆ ಚಿಂತನೆ ಮಾಡಲಾಗುತ್ತಿದೆ. ಈ ಬಗ್ಗೆ ಕಾರಾಗೃಹ ಡಿಜಿ ಜೊತೆ ಚರ್ಚೆ ನಡೆಸಲಿರುವ ಕಮಲ್ ಪಂತ್​ ಮುಂದಿನ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತವರ ಬೆಂಗಳೂರು ನೆಟ್ವರ್ಕ್ ಬ್ಲಾಕ್ ಮಾಡಲು ತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪರಪ್ಪನ ಜೈಲಿನಲ್ಲಿ ರೌಡಿ ನೆಟ್​​ವರ್ಕ್​​ಗೆ ಬ್ರೇಕ್​ ಹಾಕಲು ಫೀಲ್ಡ್​​ಗೆ ಇಳಿದ ಆಯುಕ್ತ ಕಮಲ್ ಪಂತ್ ಮತ್ತು ಡಿಜಿ ಅಲೋಕ್ ಮೋಹನ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಕಾರಾಗೃಹ ಡಿಜಿ ಅಲೋಕ್ ಮೋಹನ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮೇರೆಮೀರಿದೆ. ಬೆಂಗಳೂರು ನಗರ ಪೊಲೀಸರು ಸಾವಿರಾರು ರೌಡಿಗಳನ್ನು ಮಟ್ಟ ಹಾಕುತ್ತಾ ಬಂದಿದ್ದರೂ ಹತ್ಯೆ ಪ್ರಕರಣಗಳು ನಡೆದಿವೆ. ಇತ್ತೀಚೆಗೆ ಮಾಜಿ ರೌಡಿಶೀಟರ್​ನ ಹತ್ಯೆಯಾದ ಬಳಿಕ ನಗರ ಪೊಲೀಸರು ಎದ್ದುಕುಳಿತಿದ್ದಾರೆ. ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಕಾರಾಗೃಹ ಡಿಜಿ ಅಲೋಕ್ ಮೋಹನ್​ ಫೀಲ್ಡ್​​ಗೆ ಇಳಿದಿದ್ದಾರೆ.

ಪರಪ್ಪನ ಅಗ್ರಹಾರ ಜೈಲನ್ನೇ ಅಡ್ಡೆಯಾಗಿ ಮಾಡಿಕೊಂಡ ರೌಡಿಗಳಿಗೆ ಶಾಕ್ ನೀಡಲು ಶೀಘ್ರದಲ್ಲೇ ಜೈಲಿನಲ್ಲಿ ಹೊಸ ಬದಲಾವಣೆ ತರಲು ಕಮಿಷನರ್ ಪಂತ್ ತಂತ್ರ ಹೆಣೆದಿದ್ದಾರೆ. ನಗರ ಪೊಲೀಸ್ ಆಯುಕ್ತರೇ ಖುದ್ದು ಕಾರಾಗೃಹ ಡಿಜಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಡಿಜಿ ಅಲೋಕ್ ಮೋಹನ್ ಜೊತೆ ಚರ್ಚೆ ನಡೆಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಮುಂದಾಗಿದ್ದಾರೆ. ಇದರೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾರೀ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

ಅಸಲಿಗೆ ಕಾರಗೃಹ ಡಿಜಿ ಹಾಗೂ ಕಮಿಷನರ್ ಚರ್ಚೆಗ ಕಾರಣವಾದರೂ ಏನು..?

ಜೈಲಿನಲ್ಲಿ ಕುಳಿತ ರೌಡಿಗಳ ಬೆಂಗಳೂರು ನೆಟ್ವರ್ಕ್ ಗೆ ಬ್ರೇಕ್ ಹಾಕುವುದು ಈ ಹಿರಿಯ ಅಧಿಕಾರಿಗಳಿಬ್ಬರ ಭೇಟಿ, ಚರ್ಚೆಯ ಉದ್ದೇಶವಾಗಿದೆ. ಜೈಲಿನಲ್ಲೇ ಕುಳಿತು ಅಕ್ರಮ ಚಟುವಟಿಕೆಗಳಿಗೆ ಸ್ಕೆಚ್ ಹಾಕುವ, ನಗರದಲ್ಲಿ ನಡೆದ ಕೆಲ ಕೊಲೆ, ಹಫ್ತಾ ವಸೂಲಿಗೆ ಜೈಲಿಂದಲೇ ನೆಟ್ವರ್ಕ್ ಸಿದ್ಧಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ರೌಡಿಶೀಟರ್ ಬಬ್ಲಿ ಹತ್ಯೆಗೂ ಜೈಲಿಂದಲೇ ಸ್ಕೆಚ್ ಹಾಕಿರುವುದು ಸ್ಪಷ್ಟವಾಗಿದೆ. ಹಾಗಾಗಿ ಅಕ್ರಮ ಕೂಟಗಳ ಅಡ್ಡೆಗೆ ಬ್ರೇಕ್ ಹಾಕಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ಲಾನ್​ ಹಾಕಿದ್ದಾರೆ.

ಜೈಲಿನಲ್ಲೇ ಗ್ಯಾಂಗ್ ಕಟ್ಟಿಕೊಂಡ ರೌಡಿಗಳು..

ಒಂದೇ ಗ್ಯಾಂಗ್​ಗೆ ಸೇರಿದ ಹಲವು ಮಂದಿ ಒಂದೇ ಕಡೆ ಸೇರಿ ಪಾತಕಗಳಿಗೆ ಸ್ಕೆಚ್ ಹಾಕುತ್ತಿದ್ದಾರೆ. ಹೀಗಾಗಿ ಆ ಗ್ಯಾಂಗ್ ನ ಸದಸ್ಯರ ಡಿವೈಡ್ ಗೆ ಚಿಂತನೆ ಮಾಡಲಾಗುತ್ತಿದೆ. ಬೇರೆ ಬ್ಯಾರಕ್ ಅಥವಾ ಜೈಲಿಗೆ ಶಿಫ್ಟ್ ಮಾಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬಗ್ಗೆ ಕಾರಾಗೃಹ ಡಿಜಿ ಜೊತೆ ಚರ್ಚೆ ನಡೆಸಲಿರುವ ಕಮಲ್ ಪಂತ್​ ಮುಂದಿನ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತವರ ಬೆಂಗಳೂರು ನೆಟ್ವರ್ಕ್ ಬ್ಲಾಕ್ ಮಾಡಲು ತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್‌ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ

(Bengaluru police commissioner kamal pant and prisons dg alok mohan plan to break rowdy network in parappana agrahara jail)