India vs Sri Lanka 1st T20: ಟೀಮ್ ಇಂಡಿಯಾದಲ್ಲಿ ಯುವ ಸ್ಪಿನ್ನರ್​ಗೆ ಚೊಚ್ಚಲ ಅವಕಾಶ: ತಂಡದಲ್ಲಿ 2 ಬದಲಾವಣೆ ಸಾಧ್ಯತೆ..!

ಪೃಥ್ವಿ ಶಾ , ಶಿಖರ್ ಧವನ್ (ನಾಯಕ) , ಸಂಜು ಸ್ಯಾಮ್ಸನ್ , ಮನೀಶ್ ಪಾಂಡೆ , ಸೂರ್ಯಕುಮಾರ್ ಯಾದವ್ , ನಿತೀಶ್ ರಾಣಾ , ಹಾರ್ದಿಕ್ ಪಾಂಡ್ಯ , ಕೃಷ್ಣಪ್ಪ ಗೌತಮ್ , ರಾಹುಲ್ ಚಹರ್ , ನವದೀಪ್ ಸೈನಿ , ಚೇತನ್ ಸಕರಿಯಾ, ದೇವದತ್ ಪಡಿಕ್ಕಲ್ , ಇಶಾನ್ ಕಿಶನ್ ,ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ರುತುರಾಜ್ ಗಾಯಕವಾಡ್ , ಕುಲ್ದೀಪ್ ಯಾದವ್ , ವರುಣ್ ಚಕ್ರವರ್ತಿ

India vs Sri Lanka 1st T20: ಟೀಮ್ ಇಂಡಿಯಾದಲ್ಲಿ ಯುವ ಸ್ಪಿನ್ನರ್​ಗೆ ಚೊಚ್ಚಲ ಅವಕಾಶ: ತಂಡದಲ್ಲಿ 2 ಬದಲಾವಣೆ ಸಾಧ್ಯತೆ..!
India vs Sri Lanka 1st T20
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 24, 2021 | 9:26 PM

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಟಿ20 ಸರಣಿಗಾಗಿ ಸಜ್ಜಾಗಿದೆ. ಭಾನುವಾರ ಆರ್​.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಏಕೆಂದರೆ ಏಕದಿನ ಸರಣಿ ಮೂಲಕ ಟೀಮ್ ಇಂಡಿಯಾ ಪರ 7 ಆಟಗಾರರು ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದಿದ್ದರು. ಇದಾಗ್ಯೂ ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ವರುಣ್ ಚಕ್ರವರ್ತಿಗೆ ಟೀಮ್ ಇಂಡಿಯಾ ಪರ ಆಡುವ ಭಾಗ್ಯ ದೊರೆತಿರಲಿಲ್ಲ.

ಹೀಗಾಗಿಯೇ ಈ ಮೂವರಲ್ಲಿ ಟಿ20 ಸರಣಿಯಲ್ಲಿ ಯಾರಿಗೆ ಅವಕಾಶ ದೊರೆಯಲಿದೆ ಎಂಬ ಚರ್ಚೆ ಶುರುವಾಗಿದೆ. ಪ್ರಸ್ತುತ ತಂಡದಲ್ಲಿ ಚೈನಾಮನ್ ಸ್ಪಿನ್ನರ್​ಗಳಾಗಿ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಇದ್ದಾರೆ. ಆದರೆ ಟಿ20 ಕ್ರಿಕೆಟ್​ನಲ್ಲಿ ಒಂದೇ ಶೈಲಿಯ ಇಬ್ಬರು ಬೌಲರುಗಳನ್ನು ಕಣಕ್ಕಿಳಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲ್ಲ. ಹೀಗಾಗಿಯೇ ಮತ್ತೋರ್ವ ಸ್ಪಿನ್ನರ್​ನ್ನು ಕಣಕ್ಕಿಳಿಸಲು ರಾಹುಲ್ ದ್ರಾವಿಡ್ ಕಣಕ್ಕಿಳಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ.

ಅದರಂತೆ ಆಫ್-ಬ್ರೇಕ್, ಕ್ಯಾರಮ್ ಬಾಲ್ ಎಸೆಯುವ ಸಾಮರ್ಥ್ಯ ಹೊಂದಿರುವ ವರುಣ್ ಚಕ್ರವರ್ತಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಐಪಿಎಲ್​ನಲ್ಲಿ ಕ್ಯಾರಮ್ ಬಾಲ್ ಹಾಗೂ ಆಫ್-ಬ್ರೇಕ್ ಮೂಲಕ ಬ್ಯಾಟ್ಸ್​ಮನ್​ಗಳನ್ನು ಕಂಗೆಡಿಸಿರುವ ವರುಣ್ ಬೌಲಿಂಗ್ ಲಂಕಾ ಪಿಚ್​ನಲ್ಲೂ ನಡೆಯುವ ವಿಶ್ವಾಸವಿದೆ. ಏಕೆಂದರೆ 3ನೇ ಏಕದಿನ ಪಂದ್ಯದಲ್ಲಿ ಸ್ಪಿನ್ನರ್​ಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದರು.

ಇದೀಗ ಟಿ20 ಪಂದ್ಯ ಕೂಡ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುವುದರಿಂದ ವರುಣ್ ಸ್ಪಿನ್ ಮೋಡಿ ವರ್ಕೌಟ್ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮೊದಲ ಟಿ20 ಪಂದ್ಯದ ಮೂಲಕ ವರುಣ್ ಚಕ್ರವರ್ತಿಗೆ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ದೊರೆಯಲಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ವರುಣ್ ಚಕ್ರವರ್ತಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಕ್ಕರೆ ಕುಲ್ದೀಪ್ ಯಾದವ್ ಹೊರಗುಳಿಯಲಿದ್ದಾರೆ. ಹಾಗೆಯೇ ಏಕದಿನ ಸರಣಿಯಲ್ಲಿ ಕ್ರಮವಾಗಿ 26 ರನ್​, 37 ರನ್, 11 ರನ್ ಬಾರಿಸಿ ಸಂಪೂರ್ಣ ವಿಫಲರಾಗಿದ್ದ ಮನೀಷ್ ಪಾಂಡೆ ಸ್ಥಾನದಲ್ಲಿ ಟಿ20ಯಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಮೊದಲ ಟಿ20ಗೆ ಟೀಮ್ ಇಂಡಿಯಾ ಸಂಭ್ಯಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ: ಪೃಥ್ವಿ ಶಾ , ಶಿಖರ್ ಧವನ್ (ನಾಯಕ) , ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ ,ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ

ಟೀಮ್ ಇಂಡಿಯಾ ಹೀಗಿದೆ:- ಪೃಥ್ವಿ ಶಾ , ಶಿಖರ್ ಧವನ್ (ನಾಯಕ) , ಸಂಜು ಸ್ಯಾಮ್ಸನ್ , ಮನೀಶ್ ಪಾಂಡೆ , ಸೂರ್ಯಕುಮಾರ್ ಯಾದವ್ , ನಿತೀಶ್ ರಾಣಾ , ಹಾರ್ದಿಕ್ ಪಾಂಡ್ಯ , ಕೃಷ್ಣಪ್ಪ ಗೌತಮ್ , ರಾಹುಲ್ ಚಹರ್ , ನವದೀಪ್ ಸೈನಿ , ಚೇತನ್ ಸಕರಿಯಾ, ದೇವದತ್ ಪಡಿಕ್ಕಲ್ , ಇಶಾನ್ ಕಿಶನ್ ,ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ರುತುರಾಜ್ ಗಾಯಕವಾಡ್ , ಕುಲ್ದೀಪ್ ಯಾದವ್ , ವರುಣ್ ಚಕ್ರವರ್ತಿ

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ