ನಾನು, ಬೊಮ್ಮಾಯಿ ಜೋಡೆತ್ತು ಇದ್ದಂಗೆ: ಆರ್.ಅಶೋಕ್
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಮಾತನಾಡಿರುವ ಆರ್.ಅಶೋಕ್, ಇದು ನಮಗೆ ಸಂತಸ ತಂದಿದೆ. ಬಸವರಾಜ್ ಬೊಮ್ಮಾಯಿ, ನಾನು ಎಲ್ಲಾ ಜೋಡೆತ್ತು ಇದ್ದಂತೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ ಎಂದಿದ್ದಾರೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಮಾತನಾಡಿರುವ ಆರ್.ಅಶೋಕ್, ಇದು ನಮಗೆ ಸಂತಸ ತಂದಿದೆ. ಬಸವರಾಜ್ ಬೊಮ್ಮಾಯಿ, ನಾನು ಎಲ್ಲಾ ಜೋಡೆತ್ತು ಇದ್ದಂತೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಬೊಮ್ಮಾಯಿ ಸಿಎಂ ಆಗಿರುವುದು ಬಹಳ ಸಂತೋಷ. ಇಡೀ ರಾಜ್ಯದ ಜನತೆಗೆ ಸಂತೋಷವಾಗಿದೆ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ಇಂದು ಪಿಎಂ ಭೇಟಿಗೆ ತೆರಳಬಹುದು. ಇಂದು ಸಂಜೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಬಹುದು. ಸಂಪುಟ ರಚನೆಗೆ ಒಂದು ವಾರ ಆಗಬಹುದು ಎಂದು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ವೇದಿಕೆಗೆ ತೆರಳಿ ಹೂಗುಚ್ಛ ನೀಡಿ ಅಭಿನಂದಿಸಿದ್ದು, ಉಳಿದ ಶಾಸಕರು ಕೂಡಾ ಶುಭಾಶಯ ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಹೈಕಮಾಂಡ್. ಎಲ್ಲರ ಸರ್ವಾನುಮತದಿಂದ ಘೋಷಣೆ ಮಾಡಲಾಗಿದೆ. ನಾನು ಸೂಪರ್ ಸಿಎಂ ಟ್ಯಾಗ್ನಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ. ಬೇರೆ ಪಕ್ಷದಿಂದ ಬಂದವರನ್ನು ಒಳ್ಳೆಯ ರೀತಿ ನಡೆಸಿಕೊಳ್ತಾರೆ. ಸಚಿವ ಸಂಪುಟದಲ್ಲಿ ಯುವಕರಿಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.