ಬಿ.ಎಸ್​.ಯಡಿಯೂರಪ್ಪ ಕೆಳಗಿಳಿದರು ಅದಕ್ಕೆ ಗಡ್ಡ ತೆಗೆದೆ; ಬಸನಗೌಡ ಪಾಟೀಲ್ ಯತ್ನಾಳ್

ಹಿಂದೆ ಶಿವಾಜಿಯಾಗಿದ್ದೆ. ಈಗ ಬಸವಣ್ಣ ಆಗಿದ್ದೇನೆ ಎಂದು ಯತ್ನಾಳ್​ ಉತ್ತರ ನೀಡಿದ್ದಾರೆ. ಅಲ್ಲಿಗೆ ಬಿ.ಎಸ್​ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿ ಎಂದೇ ಹರಕೆ ಹೊತ್ತಿದ್ದರು ಎಂಬ ಊಹಾಪೊಹಗಳಿಗೆ ಕುಮ್ಮಕ್ಕು ನೀಡುವಂತೆ ಅಥವಾ ಅದೇ ಮಾತು ಸತ್ಯ ಎಂಬಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾನಾ ಬಗೆಯ ಚರ್ಚೆಗಳು ನಡೆದಿದ್ದು, ಅನೇಕ ಶಾಸಕರು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬದಲಾವಣೆಗಾಗಿ ಗಡ್ಡ, ತಲೆ ಕೂದಲು ಬಿಟ್ಟಿದ್ದು, ಹರಕೆ ಹೊತ್ತಿದ್ದರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಗಡ್ಡ ಬಿಟ್ಟಿರಲ್ಲಾ ಎಂದು ಕೇಳಿದ್ದ ಪ್ರಶ್ನೆಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜುಲೈ 30ರ ವರೆಗೆ ಕಾದು ನೋಡಿ. ಜುಲೈ 30 ರ ಬಳಿಕ ನಾನು ಮತ್ತೇ ಮೊದಲಿನಂತೆ ಆಗುತ್ತೇನೆ. ಹರಕೆ ಹೊತ್ತಿದ್ದೀನಿ, ನಾವು ಹಿಂದೂಗಳು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತೇವೆ ಎಂದು ತಿಳಿಸಿದ್ದರು.

ಅದರಂತೆ ಸಿಎಂ ಬದಲಾವಣೆಯಾಗಿದ್ದು, ಇಂದು ಮತ್ತೆ ಅವರ ತಲೆ ಕೂದಲು ಮತ್ತು ಗಡ್ಡ ಬಿಟ್ಟ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಹಾಕಿದ ಮಾಸ್ಕ್​ ತೆಗೆದು, ಹಿಂದೆ ಶಿವಾಜಿಯಾಗಿದ್ದೆ. ಈಗ ಬಸವಣ್ಣ ಆಗಿದ್ದೇನೆ ಎಂದು ಯತ್ನಾಳ್​ ಉತ್ತರ ನೀಡಿದ್ದಾರೆ. ಅಲ್ಲಿಗೆ ಬಿ.ಎಸ್​ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿ ಎಂದೇ ಹರಕೆ ಹೊತ್ತಿದ್ದರು ಎಂಬ ಊಹಾಪೊಹಗಳಿಗೆ ಕುಮ್ಮಕ್ಕು ನೀಡುವಂತೆ ಅಥವಾ ಅದೇ ಮಾತು ಸತ್ಯ ಎಂಬಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ರಾಜ್ಯದಲ್ಲಿ ಸಿಎಂ ಬದಲಾವಣೆಗಾಗಿ ಗಡ್ಡ, ತಲೆಗೂದಲು ಹರಕೆ ಬಿಟ್ಟಿದ್ದಾರಾ ಬಿಜೆಪಿ ಶಾಸಕ ಯತ್ನಾಳ್?

BSY ನಿರ್ಗಮನದ ಬಳಿಕ ಕೆಟ್ಟದಾಗಿ ಮಾತಾಡಬಾರದು; ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ -ಬಸನಗೌಡ ಪಾಟೀಲ್ ಯತ್ನಾಳ್

Click on your DTH Provider to Add TV9 Kannada