ರಾಜ್ಯದಲ್ಲಿ ಸಿಎಂ ಬದಲಾವಣೆಗಾಗಿ ಗಡ್ಡ, ತಲೆಗೂದಲು ಹರಕೆ ಬಿಟ್ಟಿದ್ದಾರಾ ಬಿಜೆಪಿ ಶಾಸಕ ಯತ್ನಾಳ್?

ಜುಲೈ 30ರ ವರೆಗೆ ಕಾದು ನೋಡಿ. ಜುಲೈ 30 ರ ಬಳಿಕ ನಾನು ಮತ್ತೇ ಮೊದಲಿನಂತೆ ಆಗುತ್ತೇನೆ. ಹರಕೆ ಹೊತ್ತಿದ್ದೀನಿ, ನಾವು ಹಿಂದೂಗಳು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಗಾಗಿ ಗಡ್ಡ, ತಲೆಗೂದಲು ಹರಕೆ ಬಿಟ್ಟಿದ್ದಾರಾ ಬಿಜೆಪಿ ಶಾಸಕ ಯತ್ನಾಳ್?
ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: preethi shettigar

Updated on:Jul 19, 2021 | 1:47 PM

ವಿಜಯಪುರ: ಗಡ್ಡ ಬಿಟ್ಟಿರಲ್ಲಾ ಎಂದು ಕೇಳಿದ್ದ ಪ್ರಶ್ನೆಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡಿದ್ದು, ಜುಲೈ 30ರ ವರೆಗೆ ಕಾದು ನೋಡಿ. ಜುಲೈ 30 ರ ಬಳಿಕ ನಾನು ಮತ್ತೇ ಮೊದಲಿನಂತೆ ಆಗುತ್ತೇನೆ. ಹರಕೆ ಹೊತ್ತಿದ್ದೀನಿ, ನಾವು ಹಿಂದೂಗಳು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತೇವೆ ಎಂದು ತಿಳಿಸಿದ್ದಾರೆ. ಇವರ ಈ ಉತ್ತರದಿಂದ ಹಲವಾರು ಪ್ರಶ್ನೆ ಹುಟ್ಟಿಕೊಂಡಿದ್ದು, ಮುಖ್ಯಮಂತ್ರಿಗಳ ಬದಲಾವಣೆಗಾಗಿ ಹರಕೆ ಕಟ್ಟಿಕೊಂಡಿದ್ದಾರಾ? ಹರಕೆಗಾಗಿಯೇ ಗಡ್ಡ, ತಲೆಗೂದಲು ಬಿಟ್ಟಿದ್ದಾರಾ ಯತ್ನಾಳ್ ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಈ ಮಧ್ಯೆ ಭಿನ್ನಮತೀಯ ಯತ್ನಾಳ್ ಏನು ಹೇಳ್ತಾರೆ? ಈ ಎಲ್ಲಾ ಬೆಳವಣಿಗೆ ಬಗ್ಗೆ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಾಂಗ ಪಕ್ಷದ ಸಭೆ ಕರೆದ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಆಧಿಕೃತವಾಗಿ ನಮಗೆ ಇನ್ನೂ ಮಾಹಿತಿ ಇಲ್ಲ. ಶಾಸಕಾಂಗ ಸಭೆ ಕರೆದರೆ ನಾವು ಹೋಗಲೇಬೇಕಾಗುತ್ತದೆ. ಸಭೆಗೆ ಹೋಗುವುದು ನಮ್ಮ ಕರ್ತವ್ಯ ಮತ್ತು ಹಕ್ಕು ಎಂದಿದ್ದಾರೆ. ಸಭೆಯನ್ನು ನಾವು ಉಪಯೋಗ ಮಾಡಿಕೊಂಡೇ ಮಾಡಿಕೊಳ್ಳುತ್ತೇವೆ. ಏನು ಹೇಳಬೇಕೋ ಅದನ್ನ ನಾವು ಶಾಸಕಾಂಗ ಸಭೆಯಲ್ಲಿ ಹೇಳುತ್ತೇವೆ. ಮತಕ್ಷೇತ್ರದ ಕೆಲಸ ಕಾರ್ಯಗಳು ಹಾಗೂ ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ವಿರೋಧ ಪಕ್ಷಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತಿವೆ, ಮಾರಾಟವಾಗಿವೆ. ನಿನ್ನೆ ಒಬ್ಬ ನಾಯಕರು ಜಿಲ್ಲೆಗೆ ಬಂದಿದ್ದರು, ಎಲ್ಲಾ ಮಾರಾಟವಾಗಿದ್ದಾರೆ. ಆ್ಯಂಡ್ ಕಂಪನಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ? – ಜುಲೈ 26ಕ್ಕೆ ಮೊದಲ ಮುಹೂರ್ತ, ತಪ್ಪಿದರೆ ಆಗಸ್ಟ್​ 15

ಮುರುಗೇಶ್ ನಿರಾಣಿ ನಂತರ ದೆಹಲಿಗೆ ತೆರಳಿರುವ ಬಸನಗೌಡ ಪಾಟೀಲ್​ ಯತ್ನಾಳ್,ರಾಜ್ಯ ಬಿಜೆಪಿ ಘಟಕದಲ್ಲಿ ಗೊಂದಲ

Published On - 1:46 pm, Mon, 19 July 21