ಆದೇಶಗಳನ್ನು ಉಲ್ಲಂಘಿಸಿದ ಬಿಡಿಎಗೆ ಹೈಕೋರ್ಟ್ ತರಾಟೆ

ಬಿಡಿಎಗೆ ಆಯುಕ್ತರಾಗಿ ಬಂದು ಎರಡು ತಿಂಗಳಷ್ಟೇ ಆಗಿದೆ. ಕಂಪ್ಯೂಟರೀಕರಣ ಮಾಡಿ ಪರಿಸ್ಥಿತಿ ಸುಧಾರಿಸುತ್ತಿದ್ದೇವೆ. ಬಿಡಿಎ ಕಾನೂನು ವಿಭಾಗವನ್ನು ಬದಲಿಸಲಾಗಿದೆ. ಬಿಡಿಎ ಅಧಿಕಾರಿಗಳ ತಪ್ಪಿಗೆ ಕೋರ್ಟ್​ಗೆ ಓಡಾಡಬೇಕಿದೆ.

ಆದೇಶಗಳನ್ನು ಉಲ್ಲಂಘಿಸಿದ ಬಿಡಿಎಗೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್
TV9kannada Web Team

| Edited By: sandhya thejappa

Jul 19, 2021 | 2:20 PM

ಬೆಂಗಳೂರು: ಪದೇ ಪದೇ ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಬಿಡಿಎಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬಿಡಿಎ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಬಿಡಿಎ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೋರ್ಟ್ ಆದೇಶ ಜಾರಿಗೆ ಜನರು ಬಿಡಿಎನ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಅಲೆಯಬೇಕೇ. ಕೋರ್ಟ್ ಆದೇಶ ನೀಡಿದರೂ ಪಾಲಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡರನ್ನು ಹೈಕೋರ್ಟ್ ಪ್ರಶ್ನಿಸಿದೆ.

ಬಿಡಿಎಗೆ ಆಯುಕ್ತರಾಗಿ ಬಂದು ಎರಡು ತಿಂಗಳಷ್ಟೇ ಆಗಿದೆ. ಕಂಪ್ಯೂಟರೀಕರಣ ಮಾಡಿ ಪರಿಸ್ಥಿತಿ ಸುಧಾರಿಸುತ್ತಿದ್ದೇವೆ. ಬಿಡಿಎ ಕಾನೂನು ವಿಭಾಗವನ್ನು ಬದಲಿಸಲಾಗಿದೆ. ಬಿಡಿಎ ಅಧಿಕಾರಿಗಳ ತಪ್ಪಿಗೆ ಕೋರ್ಟ್​ಗೆ ಓಡಾಡಬೇಕಿದೆ. ಬೇರೆ ಕೆಲಸ ಮಾಡಲಾಗುತ್ತಿಲ್ಲವೆಂದು ಆಯುಕ್ತರು ಉತ್ತರಿಸಿದರು. ಆಯುಕ್ತರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ನೀವು ಆರಾಮವಾಗಿ ಕಚೇರಿಯಲ್ಲಿ ಕುಳಿತು ವಿಸಿಯಲ್ಲಿ ಹಾಜರಾಗಿದ್ದೀರಿ. ಮೊದಲ ಬಾರಿಗೆ ನ್ಯಾಯಾಂಗ ನಿಂದನೆ ಕೇಸ್​​ನಲ್ಲಿ ಹಾಜರಾಗಿದ್ದೀರಿ. ಕೋರ್ಟ್ ಆದೇಶ ಪಾಲಿಸಲು ಬಿಡಿಎ ವಿಳಂಬ ಮಾಡುವುದೇಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಹೈಕೋರ್ಟ್​ನಲ್ಲಿರುವ ಅರ್ಧದಷ್ಟು ನ್ಯಾಯಾಂಗ ನಿಂದನೆ ಕೇಸ್​ಗಳು ಬಿಡಿಎ ವಿರುದ್ಧವಿದೆ. ಇದು ಬಿಡಿಎ ಶೋಚನೀಯ ಸ್ಥಿತಿಗೆ ನಿದರ್ಶನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್​ರವರಿದ್ದ ವಿಭಾಗೀಯ ಪೀಠ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದೆ. 23 ರೊಳಗೆ ಪ್ರಮಾಣ ಪತ್ರ ಸಲ್ಲಿಸಲು ಆಯುಕ್ತರಿಗೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ನಿಖಿಲ್ ಕನ್ಸ್ಟ್ರಕ್ಷನ್​ಗೆ ಸೇರಿದ ಬೆಂಗಳೂರು ಉತ್ತರ ತಾಲೂಕು ಚಿಕ್ಕಮಾರೇನಹಳ್ಳಿಯ 37 ಗುಂಟೆ ಜಮೀನನ್ನು ಬಿಡಿಎ ಅನಧಿಕೃತವಾಗಿ ಬಳಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಶೇ.50 ರಷ್ಟು ಬದಲಿ ನಿವೇಶನ ನೀಡುವುದಾಗಿ ನಿಖಿಲ್ ಕನ್ಸ್ಟ್ರಕ್ಷನ್​ಗೆ ಬಿಡಿಎ ಭರವಸೆ ನೀಡಿತ್ತು. ಆದರೂ ನಿವೇಶನ ಹಂಚಿಕೆ ಮಾಡದ ಬಿಡಿಎ ವಿರುದ್ಧ ನಿಖಿಲ್ ಕನ್ಸ್ಟ್ರಕ್ಷನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಸೂಚನೆ ಹೊರತಾಗಿಯೂ ಬದಲಿ ನಿವೇಶನ ನೀಡದ ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿತ್ತು. ಹೈಕೋರ್ಟ್ ಬಿಡಿಎ ಆಯುಕ್ತರಿಗೆ ಸಮನ್ಸ್ ಜಾರಿಗೊಳಿಸಿದ ಕಾರಣ ಎಂ.ಬಿ.ರಾಜೇಶ್ ಗೌಡ ಹೈಕೋರ್ಟ್​ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ಇದನ್ನೂ ಓದಿ

ಬಕ್ರೀದ್ ಸ್ಪೆಷಲ್: 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ

ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ? – ಜುಲೈ 26ಕ್ಕೆ ಮೊದಲ ಮುಹೂರ್ತ, ತಪ್ಪಿದರೆ ಆಗಸ್ಟ್​ 15

(High Court has upset the BDA for violating the High Court orders)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada