ಬಕ್ರೀದ್ ಸ್ಪೆಷಲ್: 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ

ಸುಮಾರು ಒಂದು ವರ್ಷದಿಂದ ರೈತ ಶಂಭು ಎನ್ನುವವರು ಸಾಕಿದ್ದ ಜೋಡಿ ಟಗರುಗಳನ್ನು ಭಾರಿ ಮೊತ್ತಕ್ಕೆ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎಂಬುವವರು ಖರೀದಿಸಿದ್ದಾರೆ. ಟಗರುಗಳು ತಲಾ 80 ಕೆಜಿ ತೂಕದ್ದಾಗಿವೆ.

ಬಕ್ರೀದ್ ಸ್ಪೆಷಲ್: 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ
ಬಂಡೂರು ತಳಿಯ ಟಗರು

ಮಂಡ್ಯ: ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ಇದರಲ್ಲಿ ವಿಶೇಷ ಎಂಬಂತೆ ಈ ಬಾರಿ ಬರೋಬರಿ 1.25 ಲಕ್ಷ ರೂ.ಗೆ ಎರಡು ಬಂಡೂರು ತಳಿಯ ಟಗರು ಮಾರಾಟವಾಗಿದೆ. ಮಂಡ್ಯ ತಾಲೂಕು ಸೂನಗನಹಳ್ಳಿಯಲ್ಲಿ ಟಗರುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು ಇಲ್ಲಿ ದೊಡ್ಡ ಮೊತ್ತಕ್ಕೆ ಟಗರು ಸೇಲ್ ಆಗಿದೆ.

ಸುಮಾರು ಒಂದು ವರ್ಷದಿಂದ ರೈತ ಶಂಭು ಎನ್ನುವವರು ಸಾಕಿದ್ದ ಜೋಡಿ ಟಗರುಗಳನ್ನು ಭಾರಿ ಮೊತ್ತಕ್ಕೆ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎಂಬುವವರು ಖರೀದಿಸಿದ್ದಾರೆ. ಟಗರುಗಳು ತಲಾ 80 ಕೆಜಿ ತೂಕದ್ದಾಗಿವೆ. ಕಳೆದ ಒಂದು ವರ್ಷದ ಹಿಂದೆ ತಲಾ 25 ಸಾವಿರ ರೂ ನೀಡಿ ಸಾಬೂದ್ದೀನ್ ಟಗರುಗಳನ್ನ ಖರೀದಿಸಿದ್ದ. ಈ ಬಾರಿ 1 ಲಕ್ಷದ 25 ಸಾವಿರಕ್ಕೆ ಎರಡು ಟಗರುಗಳನ್ನು ಖರೀದಿಸಿದ್ದಾರೆ. ಟಗರುಗಳನ್ನ ಕೊಂಡೊಯ್ಯುವಾಗ ಕೇಕ್ ಕಟ್ ಮಾಡಿ ರೈತನಿಗೆ ಕೃತಜ್ಞತೆ ಸಲ್ಲಿಸಿ ಖರೀದಿಸಿ ಟಗರುಗಳನ್ನ ಮನೆಗೆ ಕೊಂಡೊಯ್ಯದಿದ್ದಾರೆ.

Bannur sheep

1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ

Bannur sheep

ಕೇಕ್ ಕಟ್ ಮಾಡಿ ರೈತನಿಗೆ ಕೃತಜ್ಞತೆ ಸಲ್ಲಿಸಲಾಯಿತು.

Bakrid 2021: ಬಕ್ರೀದ್ ವೇಳೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ; ಪರಿಷ್ಕೃತ ಆದೇಶ ಹೊರಡಿಸಿದ ಸರ್ಕಾರ
ಬಕ್ರೀದ್ ವೇಳೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಕುರಿತು ಮಸೀದಿ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮುನ್ನ 50 ಜನರಿಗಷ್ಟೇ ಅವಕಾಶ ಎಂಬ ಆದೇಶದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ರಷ್ಟು ಜನರಿಗಿಂತ ಹೆಚ್ಚಾಗದೇ ಪ್ರಾರ್ಥನೆ ಸಲ್ಲಿಸಬೇಕು ಎಂದು ನಿಯಮ ಪರಿಷ್ಕರಿಸಲಾಗಿದೆ.

ಜುಲೈ 21 ರಂದು ಬಕ್ರೀದ್ ಹಬ್ಬ ಆಚರಿಸಲ್ಪಡುವ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ (Eidgah) ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರ ನಿನ್ನೆ (ಜುಲೈ 16) ಆದೇಶಿಸಿದೆ. ಆದರೆ ಮಸೀದಿಗಳಲ್ಲಿ (Mosques) ಷರತ್ತುಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದಲ್ಲಿ ಕೊವಿಡ್ ಸೋಂಕು ಸದ್ಯ ಕಡಿಮೆಯಾಗಿದ್ದು, ಮತ್ತೊಮ್ಮೆ ಕೊವಿಡ್ ಸೋಂಕು ಹೆಚ್ಚಳವಾಗುವ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಈಗಾಗಲೇ ಜುಲೈ 21ರಂದು ಬಕ್ರೀದ್ ಹಬ್ಬ ಆಚರಿಸುವ ಕುರಿತು ಅಧಿಕೃತ ಘೋಷಣೆ ಮಾಡಲಾಗಿದ್ದು, ಮಸೀದಿಗಳಲ್ಲಿ 50 ಜನರೊಂದಿಗೆ ಮಾತ್ರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಆದೇಶವನ್ನು ಪರಿಷ್ಕರಿಸುವ ರಾಜ್ಯ ಸರ್ಕಾರ ಮಸೀದಿಗಳ ಸಾಮರ್ಥ್ಯದ ಶೇಕಡಾ 50ರಷ್ಟು ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: Bakrid 2021: ಬಕ್ರೀದ್ ಹಬ್ಬದ ಖರೀದಿ; ಹಣೆ ಮೇಲೆ ನಕ್ಷತ್ರ ಹಾಗೂ ಚಂದ್ರನ ಗುರುತಿನ ಮೇಕೆಗಳಿಗೆ ಭರ್ಜರಿ ಬೇಡಿಕೆ