BSY ನಿರ್ಗಮನದ ಬಳಿಕ ಕೆಟ್ಟದಾಗಿ ಮಾತಾಡಬಾರದು; ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ -ಬಸನಗೌಡ ಪಾಟೀಲ್ ಯತ್ನಾಳ್
ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದ ಶಾಸಕ ಬಸನಗೌಡ ಯತ್ನಾಳ್, ರಾಜ್ಯದಲ್ಲಿ ಬದಲಾವಣೆ ಆಗುತ್ತೆ ನೋಡುತ್ತಿರಿ. ಬಿಜೆಪಿ ಶಾಸಕರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಾರೆ. ಹೈಕಮಾಂಡ್ ಆದೇಶ ಮಾಡಿದರೆ ನಾನು ಸಚಿವನಾಗುತ್ತೇನೆ ಎಂದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಯಾಡೋ ಆಗಿ ಕೆಲಸ ಮಾಡಲ್ಲ. ಬಿಎಸ್‌ವೈ ಕುಟುಂಬದಿಂದ ದೂರ ಉಳಿದು ಕೆಲಸ ಮಾಡ್ತಾರೆ ಎಂದು ರಾಜಭವನದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್(Basangouda Patil Yatnal) ಹೇಳಿಕೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ(Basavaraj Bommai) ಕರ್ನಾಟಕ ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿದ್ದ ಶಾಸಕ ಬಸನಗೌಡ ಯತ್ನಾಳ್, ರಾಜ್ಯದಲ್ಲಿ ಬದಲಾವಣೆ ಆಗುತ್ತೆ ನೋಡುತ್ತಿರಿ. ಬಿಜೆಪಿ ಶಾಸಕರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಾರೆ. ಹೈಕಮಾಂಡ್ ಆದೇಶ ಮಾಡಿದರೆ ನಾನು ಸಚಿವನಾಗುತ್ತೇನೆ ಎಂದರು.
ಬೊಮ್ಮಾಯಿ ಶ್ಯಾಡೋ ಸಿಎಂ ಆಗಿ ಕೆಲಸ ಮಾಡಲ್ಲ. ಬೊಮ್ಮಾಯಿಯವರು ಅಷ್ಟು ತಿಳಿವಳಿಕೆ ಇಲ್ಲದವರಲ್ಲ. ಯಡಿಯೂರಪ್ಪ(BS Yediyurappa) ಜೀವನ ನೆಮ್ಮದಿ, ಸುಖವಾಗಿರಲಿ. ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ. BSY ನಿರ್ಗಮನದ ಬಳಿಕ ಕೆಟ್ಟದಾಗಿ ಮಾತಾಡಬಾರದು. ಕೆಟ್ಟದಾಗಿ ಮಾತಾಡುವುದು ಬುದ್ಧಿವಂತರ ಲಕ್ಷಣವಲ್ಲ ಎಂದು ಟಿವಿ9ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ, ಎದ್ದು ಕಾಣುತ್ತಿತ್ತು ಕೆ.ಎಸ್.ಈಶ್ವರಪ್ಪ ಅನುಪಸ್ಥಿತಿ