ಮೊಸರು ಪೂರಿ; ಸರಳವಾದ ವಿಧಾನದಲ್ಲಿ ಮಾಡಿ ಸವಿಯಿರಿ

ಮೊಸರು ಪೂರಿ; ಸರಳವಾದ ವಿಧಾನದಲ್ಲಿ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jul 27, 2021 | 7:54 AM

ಹೇಗೆ ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಸಂತೋಷಪಡಿಸುವುದು ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ಮೊಸರು ಪೂರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಮನೆಯಲ್ಲಿ ಹೊಸತೇನಾದರೂ ತಿಂಡಿ ಮಾಡಿ ಮಕ್ಕಳಿಗೆ ಬಡಿಸಬೇಕು ಎಂಬ ಆಸೆ ಎಲ್ಲಾ ಅಮ್ಮಂದಿರದ್ದು, ಹೀಗಾಗಿ ಮಕ್ಕಳಿಗೆ ಹಿಡಿಸುವ ಹಾಗೆ ಸದಾ ನೂತನ ಶೈಲಿಯ ಮೊರೆ ಹೋಗುತ್ತಾರೆ. ತರಕಾರಿ ಇಷ್ಟ ಪಡದ ಮಕ್ಕಳಿಗೆ ಪೋಷಕಾಂಶ ದೊರೆಯುವಂತೆ ಮಾಡಬೇಕು ಎಂಬ ಹಂಬಲದಲ್ಲಿ ಮಾಡುವ ಅಡುಗೆಯನ್ನು ಹೆಚ್ಚು ಆಕರ್ಷಕವಾಗಿಸುತ್ತಾರೆ. ಹೇಗೆ ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಸಂತೋಷಪಡಿಸುವುದು ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ಮೊಸರು ಪೂರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಮೊಸರು ಪೂರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಮೊಸರು, ಜೀರಿಗೆ, ಕರಿಬೇವಿನ ಸೊಪ್ಪು, ಕೊತ್ತಂಬರಿಸೊಪ್ಪು, ಉಪ್ಪು.

ಮೊಸರು ಪೂರಿ ಮಾಡುವ ವಿಧಾನ
ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಮೊಸರು, ಜೀರಿಗೆ, ಕರಿಬೇವಿನ ಸೊಪ್ಪು, ಕೊತ್ತಂಬರಿಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಬಳಿಕ ಪೂರಿ ಆಕಾರಕ್ಕೆ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಪೂರಿ ಕರಿಯಬೇಕು. ಈಗ ರುಚಿಕರವಾದ ಮೊಸರು ಪೂರಿ ಸವಿಯಲು ಸಿದ್ಧ.

ಇದನ್ನೂ ಓದಿ:
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಕರಾವಳಿ ಸ್ಪೇಷಲ್ ಮಾವಿನಕಾಯಿ ಚಟ್ನಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ