ಕರಾವಳಿ ಸ್ಪೇಷಲ್ ಮಾವಿನಕಾಯಿ ಚಟ್ನಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ. ಮಾವಿನಕಾಯಿಯಿಂದ ತಯಾರಿಸುವ ಚಟ್ನಿಯನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ರುಚಿಕರವಾದ ಅಡುಗೆಯನ್ನು ಮಾಡುವುದರ ಜತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರಿಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಈಗ ಮಾನಿನ ಹಣ್ಣು ಹೆಚ್ಚಾಗಿ ಸಿಗುವ ಸಮಯ. ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ. ಮಾವಿನಕಾಯಿಯಿಂದ ತಯಾರಿಸುವ ಚಟ್ನಿಯನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ಕರಾವಳಿ ಸ್ಪೇಷಲ್ ಮಾವಿನಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮಾವಿನಕಾಯಿ, ಉಪ್ಪು, ಇಂಗು, ಸಾಸಿವೆ, ಮೆಂತೆ, ಕರಿಬೇವು, ಕಾರದ ಪುಡಿ, ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಅಡುಗೆ ಎಣ್ಣೆ.
ಕರಾವಳಿ ಸ್ಪೇಷಲ್ ಮಾವಿನಕಾಯಿ ಚಟ್ನಿ ಮಾಡುವ ವಿಧಾನ
ಮಾವಿನ ಕಾಯಿಯನ್ನು ತುರಿದು ಒಂದು ಪಾತ್ರೆಗೆ ಹಾಕಿಕೊಳ್ಳಿ, ನಂತರ ಉಪ್ಪು ಹಾಕಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ಬಳಿಕ ಒಂದು ಬಾಣಲೆ ಇಟ್ಟು ಅದು ಕಾದ ಮೇಲೆ ಸಾಸಿವೆ, ಮೆಂತೆ ಕಾಳು ಹಾಕಿ ಹುರಿದು ತೆಗೆಯಿರಿ, ಬಳಿಕ ಅದನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ತುರಿದ ಮಾವಿನ ಹಣ್ಣಿಗೆ ಹಾಕಿ, ನಂತರ ಕಾರದ ಪುಡಿ ಹಾಕಿ ಕಲಸಿಕೊಳ್ಳಿ, ಬಳಿಕ ಅದರ ಮೇಲೆ ಬೆಳ್ಳುಳ್ಳಿ ಹಾಕಿ. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿಸೆ, ಒಣ ಮೆಣಸಿನಕಾಯಿ, ಕರಿ ಬೇವು ಹಾಕಿ ಅದನ್ನು ತೆಗೆದಿಟ್ಟು ಮಾವಿನ ಮಿಶ್ರಣ ಹಾಕಿ ಕಲಸಿಕೊಳ್ಳಿ. ಈಗ ರುಚಿಕರವಾದ ಮಾವಿನಕಾಯಿ ಚಟ್ನಿ ಸವಿಯಲು ಸಿದ್ಧ.
ಇದನ್ನೂ ಓದಿ:
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
