ಮಾವಿನ ಹಣ್ಣಿನ ಗಿಣ್ಣು; ಸರಳ ವಿಧಾನದ ಜತೆ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jun 22, 2021 | 7:53 AM

ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ. ಮಾವಿನ ಹಣ್ಣಿನ ಗಿಣ್ಣು ಮಾಡುವುದು ಹೇಗೆ ಎಂದು ಇವತ್ತು ತಿಳಿದುಕೊಳ್ಳೋಣ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರಿಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಈಗ ಮಾನಿನ ಹಣ್ಣು ಹೆಚ್ಚಾಗಿ ಸಿಗುವ ಸಮಯ. ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ. ಮಾವಿನ ಹಣ್ಣಿನ ಗಿಣ್ಣು ಮಾಡುವುದು ಹೇಗೆ ಎಂದು ಇವತ್ತು ತಿಳಿದುಕೊಳ್ಳೋಣ.

ಮಾವಿನ ಹಣ್ಣಿನ ಗಿಣ್ಣು ಮಾಡಲು ಬೇಕಾಗುವ ಸಾಮಾಗ್ರಿಗಳು ಮಿಲ್ಕ್ ಮೇಡ್, ಅಮೂಲ್ ಫ್ರೇಶ್ ಕ್ರೀಮ್, ಮಾವಿನ ಹಣ್ಣಿನ ಜ್ಯೂಸ್, ಹಾಲು, ಜೆಲಟಿನ್, ಕಸ್ಟರ್ಡ್ ಪೌಡರ್, ಸಕ್ಕರೆ, ಮಾವಿನ ಹಣ್ಣು, ಕಾನ್​ಫ್ಲವರ್ ಉಪ್ಪು.

ಮಾವಿನ ಹಣ್ಣಿನ ಗಿಣ್ಣು ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಅದು ಕಾಯಲು ಬಿಡಿ. ನಂತರ ಒಂದು ಬೌಲ್​ಗೆ ನೀರು ಹಾಕಿ ಜಿಲೆಟಿನ್ ಹಾಕಿ ಕಲಸಿ ಕುದಿಯುವ ನೀರಿನ ಮೇಲೆ ಆ ಪಾತ್ರೆ ಇಡಿ. ನಂತರ ಒಂದು ಪಾತ್ರೆಗೆ ಹಾಲು, ಅಮೂಲ್ ಫ್ರೇಶ್ ಕ್ರೀಮ್, ಮಿಲ್ಕ್ ಮೇಡ್, ಮಾವಿನ ಹಣ್ಣಿನ ಜ್ಯೂಸ್, ಕಸ್ಟರ್ಡ್ ಪೌಡರ್, ಸಕ್ಕರೆ, ನಂತರ ಕರಗಿದ ಜಿಲೆಟಿನ್ ಹಾಕಿ ಕಲಸಿ, ಉಪ್ಪು ಹಾಕಿ. ಇದನ್ನು ಮಿಕ್ಸಿ ಅಲ್ಲಿ ರುಬ್ಬಿಕೊಳ್ಳಬೇಕು. ಬಳಿಕ ಅದನ್ನು ಸೋಸಿಕೊಳ್ಳಬೇಕು. ನಂತರ ಅದನ್ನು ಕಂಟೇನರ್​ಗೆ ಹಾಕಿ. ನಂತರ ಅದಕ್ಕೆ ಬಿಸಿ ಮಾಡಿಕೊಂಡ ಮಾವಿನ ಹಣ್ಣಿನ ತುಂಡುಗಳನ್ನು ಹಾಕಿ, ಸ್ವಲ್ಪ ಹೊತ್ತಿನ ನಂತರ. ಮಾವಿನ ಹಣ್ಣಿನ ಜ್ಯೂಸ್, ಜಿಲೆಟಿನ್, ಕಾನ್​ಫ್ಲವರ್, ಸಕ್ಕರೆ ಹಾಕಿ ಕುದಿಸಿ, ನಂತರ ತಯಾರಿಸಿದ ಮಾವಿನ ಹಣ್ಣಿನ ಮಿಶ್ರಣದ ಮೇಲೆ ಹಾಕಿ. ಇದನ್ನು ಫ್ರೀಡ್ಜ್​ನಲ್ಲಿ 3 ಗಂಟೆ ಕಾಲ ಇಡಿ. ಈಗ ಮಾವಿನ ಹಣ್ಣಿನ ಗಿಣ್ಣು ಸವಿಯಲು ಸಿದ್ಧ.

ಇದನ್ನೂ ಓದಿ:

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ

ಮಾವಿನ ಹಣ್ಣಿನ ಓಟ್ಸ್ ಲಡ್ಡು; ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ