ಅಂತ್ಯವಾಗಲಿದೆ ಮಜಾ ಟಾಕೀಸ್; ಹೊಸ ಕೆಲಸಕ್ಕೆ ಕೈ ಹಾಕಿದ ಸೃಜನ್ ಲೋಕೇಶ್
Majaa Talkies: ತಾವು ಕೂಡ ಮಜಾ ಟಾಕೀಸ್ಗೆ ಬರಬೇಕು ಎಂದು ಕೆಲವು ಪ್ರೇಕ್ಷಕರು ಆಸೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರವಾಗಿ ಈ ಮಾತನ್ನು ಸೃಜನ್ ಹೇಳಿದರು.
ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮ ಮಜಾ ಟಾಕೀಸ್ಗೆ ಬ್ರೇಕ್ ಬೀಳಲಿದೆ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಅವರು ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ತಾವು ಕೂಡ ಮಜಾ ಟಾಕೀಸ್ಗೆ ಬರಬೇಕು ಎಂದು ಕೆಲವು ಪ್ರೇಕ್ಷಕರು ಆಸೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರವಾಗಿ ಈ ಮಾತನ್ನು ಸೃಜನ್ ಹೇಳಿದರು. ‘ಮಾಜಾ ಟಾಕೀಸ್ಗೆ ಈಗ ಸ್ವಲ್ಪ ಬ್ರೇಕ್ ಬೀಳಲಿದೆ. ಯಾಕೆಂದರೆ ಈ ವಾರ ಗ್ರ್ಯಾಂಡ್ ಫಿನಾಲೆ ಮಾಡುತ್ತಿದ್ದೇವೆ. ಹೊಸ ರೂಪದಲ್ಲಿ ಬರುವ ಪ್ರಯತ್ನ ಮಾಡುತ್ತೇವೆ. ಈಗ ನಾವು ಒಂದು ಅಲ್ಪ ವಿರಾಮ ಪಡೆದುಕೊಂಡಿದ್ದೇವೆ’ ಎಂದು ಸೃಜನ್ ಹೇಳಿದ್ದಾರೆ.
‘ಇಷ್ಟು ವರ್ಷಗಳ ಕಾಲ ಮಜಾ ಟಾಕೀಸ್ ನಡೆದುಕೊಂಡು ಬರಲು ನಿಮ್ಮ ಬೆಂಬಲವೇ ಕಾರಣ. ಈಗ ಹೊಸ ಕೆಲಸ ಆರಂಭಿಸುತ್ತಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ’ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.
ಇದನ್ನೂ ಓದಿ:
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
