ಕಾಲಿಲ್ಲದವ ಮಂಡಿಯ ಮೇಲೆ ಕುಳಿತು ಐ ಲವ್ ಯೂ ಹೇಳಿದ! ಪ್ರೇಯಸಿಯ ಖುಷಿಗೆ ಮಿತಿಯೇ ಇಲ್ಲ
ಅದಾಗ್ಯೂ ಜೋಶ್ ಸ್ಮಿತ್ 2014ರಲ್ಲಿ ತನ್ನ ಸಂಗಾತಿಯನ್ನು ಭೇಟಿ ಮಾಡಲು ಹೊರಟಿದ್ದಾಗ ಅಪಘಾತ ಸಂಭವಿಸಿದ್ದರ ಪರಿಣಾಮ ತಮ್ಮ ಕಾಲುಗಳನ್ನು ಕಳೆದುಕೊಂಡರು. ಆದರೂ ಸಹ ಕಷ್ಟಪಟ್ಟು ಮಂಡಿಯ ಮೇಲೆ ಕುಳಿತು ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಕೇಳಿದ್ದಾರೆ
ಮದುವೆಯ ಪ್ರಸ್ತಾಪಗಳಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಮೆಚ್ಚಿಕೊಂಡ ಹುಡುಗ- ಹುಡುಗಿ ತಮ್ಮ ಪ್ರೀತಿಯನ್ನು ಪದಗಳಲ್ಲಿ ವರ್ಣಿಸುತ್ತಾರೆ. ತಾನು ಪ್ರೀತಿಸುವ ಪ್ರೇಯಸಿಗಾಗಿ ಏನೂ ಮಾಡಲೂ ಸಿದ್ಧರಿರುತ್ತಾರೆ. ಆದರೆ ಸ್ಮಿತ್ ಅವರಿಗೆ ಕಾಲುಗಳಿಲ್ಲ. ಪ್ರೀತಿ ಎಂಬ ಅದ್ಭುತ ಭಾವ ಏನನ್ನು ಸಾಧಿಸಲೂ ಧೈರ್ಯ ತುಂಬುತ್ತದೆ ಎಂಬುದಕ್ಕೆ ಜೋಶ್ ಸ್ಮಿತ್ ಅವರೇ ಸಾಕ್ಷಿ.
ಅದಾಗ್ಯೂ ಜೋಶ್ ಸ್ಮಿತ್ 2014ರಲ್ಲಿ ತನ್ನ ಸಂಗಾತಿಯನ್ನು ಭೇಟಿ ಮಾಡಲು ಹೊರಟಿದ್ದಾಗ ಅಪಘಾತ ಸಂಭವಿಸಿದ್ದರ ಪರಿಣಾಮ ತಮ್ಮ ಕಾಲುಗಳನ್ನು ಕಳೆದುಕೊಂಡರು. ಆದರೂ ಸಹ ಕಷ್ಟಪಟ್ಟು ಮಂಡಿಯ ಮೇಲೆ ಕುಳಿತು ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಕೇಳಿದ್ದಾರೆ. ಕಷ್ಟಪಟ್ಟು ಕುಳಿತರು ಇಷ್ಟದ ಪ್ರೇಯಸಿಗಾಗಿ ನೆಲಕ್ಕೆ ಕುಳಿತು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದನ್ನು ನೋಡಿದ ಪ್ರೇಯಸಿಗೆ ಖುಷಿಯನ್ನು ತಡೆಯಲೇ ಆಗುತ್ತಿಲ್ಲ. ಈ ದೃಶ್ಯವನ್ನು ನೋಡುತ್ತಿದ್ದಂತೆಯೇ ಆನಂದ ಭಾಷ್ಪ ಕಣ್ಣಂಚಿನಲ್ಲಿ ತುಂಬಿದೆ. ಹತ್ತಿರ ಹೋಗಿ ಅಪ್ಪುಗೆ ನೀಡುವ ಮೂಲಕ ಪ್ರೀತಿಯನ್ನು ಸ್ವೀಕರಿಸಿದ್ದಾಳೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಈ ಜೋಡಿಗೆ ಆಶೀರ್ವದಿಸಿದ್ದಾರೆ.
ಇದನ್ನೂ ಓದಿ:
Viral Video: ಕೆಸರಲ್ಲಿ ತುಂಟಾಟವಾಡುತ್ತಿರುವ ಈ ಆನೆಮರಿಯನ್ನು ನೋಡಿದರೆ ಮುದ್ದಾಡಬೇಕೆನಿಸೋದು ಗ್ಯಾರಂಟಿ!
Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್