ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಎನ್ಡಿಆರ್ಫ್ ತಂಡ; ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಮೆಚ್ಚುಗೆಯ ಮಹಾಪೂರ
ಎನ್ಡಿಆರ್ಫ್ ತಂಡ ಮೊದಲು ರಬ್ಬರ್ ಬೋಟ್ ಮೂಲಕ ನಾಯಿಯಿದ್ದ ಸ್ಥಳವನ್ನು ತಲುಪಿದೆ. ಹೋಟೆಲ್ನ ರೂಫ್ ಟಾಪ್ ಮೂಲಕ ಧಾವಿಸಿ ತಂಡ ಶ್ವಾನವನ್ನು ರಕ್ಷಿಸಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಕಡೆ ಜಲಾವೃತವಾಗಿದೆ. ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ನಡುವೆ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಶಿರೋಲಿ ಬಳಿ ಹೋಟೆಲ್ ಒಂದರಲ್ಲಿ ನಾಯಿ ಸಿಲುಕಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಶ್ವಾನವನ್ನು ಎನ್ಡಿಆರ್ಫ್ (NDRF) ತಂಡ ರಕ್ಷಿಸಿದೆ. ನೀರಿನ ಮಧ್ಯದಲ್ಲಿದ್ದ ಹೋಟೆಲ್ ಮೇಲೆ ನಾಯಿ ಭಯದಿಂದ ಕುಳಿತಿತ್ತು. ಕೆಳಗೆ ಇಳಿಯಲಾಗದೆ ಒದ್ದಾಡುತ್ತಿತ್ತು. ಆದರೆ ಎನ್ಡಿಆರ್ಫ್ ತಂಡ ಆ ನಾಯಿಯನ್ನು ರಕ್ಷಿಸಿದೆ.
ಎನ್ಡಿಆರ್ಫ್ ತಂಡ ಮೊದಲು ರಬ್ಬರ್ ಬೋಟ್ ಮೂಲಕ ನಾಯಿಯಿದ್ದ ಸ್ಥಳವನ್ನು ತಲುಪಿದೆ. ಹೋಟೆಲ್ನ ರೂಫ್ ಟಾಪ್ ಮೂಲಕ ಧಾವಿಸಿ ತಂಡ ಶ್ವಾನವನ್ನು ರಕ್ಷಿಸಿದೆ. ಎನ್ಡಿಆರ್ಫ್ ತಂಡದ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ
ಶಿವಮೊಗ್ಗ ಜಿಲ್ಲೆಯಿಂದ ಬಂದ 4 ಮುಖ್ಯಮಂತ್ರಿಗಳೂ ದುರಂತ ನಾಯಕರು; ಯಾರಿಗೂ ಪೂರ್ಣಾವಧಿ ಭಾಗ್ಯವಿಲ್ಲ
ಕಾಲಿಲ್ಲದವ ಮಂಡಿಯ ಮೇಲೆ ಕುಳಿತು ಐ ಲವ್ ಯೂ ಹೇಳಿದ! ಪ್ರೇಯಸಿಯ ಖುಷಿಗೆ ಮಿತಿಯೇ ಇಲ್ಲ
(NDRF team rescued the dog that was caught in flood at Maharashtra)