AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್

Funny Video | ರೈಲಿನ ಎಮರ್ಜೆನ್ಸಿ ಎಕ್ಸಿಟ್​ ಕಿಟಕಿಯಿಂದ ಒಳ ನುಗ್ಗಿರುವ ಸೀರೆಯುಟ್ಟ ಮಹಿಳೆಯ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ. ನೀವಿನ್ನೂ ಈ ವೈರಲ್ ವಿಡಿಯೋ ನೋಡದಿದ್ದರೆ ನೋಡಿಬಿಡಿ...

Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್
ರೈಲಿನ ಕಿಟಕಿಯಿಂದ ಒಳಗೆ ನುಗ್ಗುತ್ತಿರುವ ಮಹಿಳೆ
TV9 Web
| Updated By: ಸುಷ್ಮಾ ಚಕ್ರೆ|

Updated on: Jul 26, 2021 | 7:34 PM

Share

ಕೆಲವೊಂದು ವಿಡಿಯೋಗಳನ್ನು ನೋಡಿದಾಗ ನಗಬಾರದು ಎಂದುಕೊಂಡರೂ ನಗು ಉಕ್ಕುಕ್ಕಿ ಬರುತ್ತದೆ. ಬಸ್ ಮತ್ತು ರೈಲಿನಲ್ಲೆಲ್ಲ ಎಮರ್ಜೆನ್ಸಿ ಎಕ್ಸಿಟ್ (Emergency Exit) ಇರುವುದನ್ನು ನೀವೆಲ್ಲರೂ ಗಮನಿಸಿರಬಹುದು. ರೈಲು ನಿಲ್ದಾಣಗಳು, ರೈಲಿನ ಪ್ರಯಾಣ ಸಾಕಷ್ಟು ಹಾಸ್ಯಮಯ ಸನ್ನಿವೇಶಗಳಿಗೆ ಕಾರಣವಾಗುತ್ತ ಇರುತ್ತವೆ. ರೈಲು ಹೊರಟ ಮೇಲೆ ರೈಲಿನ ಹಿಂದೆ ಓಡಿಬರುವವರು, ರೈಲು ನಿಂತಾಗ ಪ್ಲಾಟ್​ಫಾರ್ಮ್​ನಲ್ಲಿ ಇಳಿದಾಗ ಇದ್ದಕ್ಕಿದ್ದಂತೆ ರೈಲು ಹೊರಟುಬಿಡುವುದು, ಯಾವುದೋ ಸ್ಟೇಷನ್​ನಲ್ಲಿ ಇಳಿಯಬೇಕಾದರು ನಿದ್ರೆ ಮಾಡುತ್ತಾ ಇನ್ನೆಲ್ಲೋ ಇಳಿಯುವುದು, ಟಿಕೆಟ್ ಖರೀದಿಸದೆ ಸಿಕ್ಕಿಹಾಕಿಕೊಳ್ಳುವುದು ಇವೆಲ್ಲ ಮಾಮೂಲಿನ ಸಂಗತಿ. ಆದರೆ, ಇಲ್ಲೊಬ್ಬಳು ಮಹಿಳೆ ಸೀರೆಯುಟ್ಟುಕೊಂಡೇ ರೈಲಿನ ಕಿಟಕಿಯಿಂದ ಒಳಗೆ ನುಗ್ಗಿ ಸಾಹಸವೊಂದನ್ನು ಮಾಡಿದ್ದಾಳೆ. ಆ ವಿಡಿಯೋ ವೈರಲ್ (Video Viral)  ಆಗಿದೆ.

ರೈಲು ಹತ್ತುವ ಮೊದಲೇ ರೈಲು ಚಲಿಸತೊಡಗಿದ್ದರಿಂದ ಬಾಗಿಲಿನವರೆಗೂ ಹೋಗಲು ಸಾಧ್ಯವಾಗದ ಮಹಿಳೆಯೊಬ್ಬಳು ಕಿಟಿಕಿಯಿಂದಲೇ ರೈಲಿನೊಳಗೆ ತೂರಿಕೊಂಡಿದ್ದಾಳೆ. ಅಂದವಾಗಿ ಸೀರೆಯುಟ್ಟು ಈ ರೀತಿಯ ಸ್ಟಂಟ್ ಮಾಡಿದ ಆಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನಗೆಯುಕ್ಕಿಸುತ್ತಿದೆ. ಹಾಗೇ, ಈ ರೀತಿ ಸಾಹಸ ಮಾಡುವಾಗ ಆಕೆಯ ಪ್ರಾಣಕ್ಕೆ ಏನಾದರೂ ಅಪಾಯವಾಗಿದ್ದರೆ ಏನು ಗತಿಯೆಂಬ ಆತಂಕದ ಕಮೆಂಟ್​ಗಳೂ ಈ ವಿಡಿಯೋಗೆ ಬಂದಿವೆ. ಎಮರ್ಜೆನ್ಸಿ ಎಕ್ಸಿಟ್ ಇರುವ ಕಿಟಕಿಯಲ್ಲಿ ನುಗ್ಗಿದ ಮಹಿಳೆ ಅಂತೂಇಂತೂ ರೈಲಿನೊಳಗೆ ಹೋಗಿದ್ದಾಳೆ.

ತನ್ನ ಚಪ್ಪಲಿಗಳನ್ನು ಬಿಚ್ಚಿದ ಆ ಮಹಿಳೆ ರೈಲಿನೊಳಗೆ ಕುಳಿತಿದ್ದ ವ್ಯಕ್ತಿಗೆ ಅವುಗಳನ್ನು ಕೊಟ್ಟಳು. ನಂತರ ನಿಧಾನವಾಗಿ ಎಮರ್ಜೆನ್ಸಿ ಎಕ್ಸಿಟ್​ನ ಕಿಟಕಿಯಿಂದ ರೈಲಿನೊಳಗೆ ನುಸುಳಿದಳು. ಆ ಕಿಟಕಿ ಇರುವುದು ಎಮರ್ಜೆನ್ಸಿ ಎಕ್ಸಿಟ್​ಗೇ ಹೊರತು ಎಮರ್ಜೆನ್ಸಿ ಎಂಟ್ರಿಗಲ್ಲ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Video of Woman Entering Train from Emergency Exit Window with Wearing Saree Goes Viral Watch Funny Video)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ